ನಿಮಗೆ ಅವಮಾನಿಸಲು ಬಯಸುವವರಿಗೆ ಬುದ್ಧಿ ಕಲಿಸುವುದು ಹೇಗೆ..?

ಜೀವನ ಅಂದ ಮೇಲೆ ಹಲವು ರೀತಿಯ ಜನ ನಮ್ಮ ಜೀವನದಲ್ಲಿ ಬಂದು ಹೋಗ್ತಾರೆ. ಕೆಲವರು ಉಳಿಯುತ್ತಾರೆ. ಹಾಗೆ ಉಳಿದವರಲ್ಲಿ ಹುಳುಕು ಬುದ್ಧಿಯ ಜನರೂ ಇರ್ತಾರೆ. ಇವರು ಯಾವಾಗಲೂ ನಿಮ್ಮ ಚಿಕ್ಕ ಪುಟ್ಟ ತಪ್ಪುಗಳನ್ನು ಎತ್ತಿ ತೋರಿಸಿ, ನಿಮಗೆ ಅವಮಾನವಾಗುವಂತೆ ಮಾಡುವ ಗುರಿಯನ್ನು ಹೊಂದಿರುತ್ತಾರೆ.

ಆದ್ರೆ ಅವರು ಬೆಟ್ಟದಂಥ ತಪ್ಪು ಮಾಡಿದ್ರೂ, ಅದು ತಪ್ಪು ಅಂತಾ ಅವರ ಮನಸ್ಸಿಗೆ ಎಂದೂ ಅನ್ನಿಸುವುದಿಲ್ಲ. ಬದಲಾಗಿ ಇತರರ ತಪ್ಪು ಕಂಡು ಹಿಡಿದು ಮಾತನಾಡುವುದೇ ಅವರ ಕಾಯಕವಾಗಿರುತ್ತದೆ. ಇಂಥವರಿಗೆ ಬುದ್ಧಿ ಕಲಿಸುವುದು ಹೇಗೆ ಅನ್ನೋ ಬಗ್ಗೆ ಚಾಣಕ್ಯರು ತಮ್ಮ ಚಾಣಕ್ಯ ನೀತಿಯಲ್ಲಿ ಹೇಳಿದ್ದಾರೆ. ಈ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..

ಮೊದಲನೇಯದಾಗಿ ಜನ ನಿಮ್ಮ ತಪ್ಪನ್ನು ತೋರಿಸಲು, ನಿಮ್ಮ ಬಳಿ ಕಾಲು ಕೆರಿದು ಜಗಳಕ್ಕೆ ಬಂದಾಗ, ಅವರ ಮಾತನ್ನು ಕಿವಿಗೊಟ್ಟು ಕೇಳಿ. ಏನು ರಿಯಾಕ್ಟ್ ಮಾಡಬೇಡಿ. ಕೆಲ ಸಮಯದ ಬಳಿಕ, ನೀವು ಯಾಕೆ ನನ್ನ ಮೇಲೆ ಹೀಗೆ ಆರೋಪ ಮಾಡುತ್ತಿದ್ದೀರಿ. ನಿಮಗ್ಯಾಕೆ ನನ್ನ ಮೇಲೆ ಇಷ್ಟು ಕಾಳಜಿ ಎಂದು ಕೇಳಿ. ಹೀಗೆ ಕೇಳಿದಾಗ, ಅವರಿಗೆ ಮುಜುಗರವಾಗುತ್ತದೆ. ನಾನು ಇವನಿಗೆ ಅವಮಾನ ಮಾಡಲು ಬಂದ್ರೆ, ಇವನು ನನಗೆ ಹೀಗೆ ಅಂದುಬಿಟ್ಟನಲ್ಲ ಅಂತಾ ಅಂದುಕೊಳ್ತಾರೆ.

ಮತ್ತೂ ಕೋಪ ತೋರಿಸಲು, ಆರೋಪ ಹೊರಿಸಲು ಬರುತ್ತಾರೆ. ಆಗ ನೀವು ಆಯಿತು ನನ್ನಿಂದ ತಪ್ಪಾಯಿತು. ಇದನ್ನು ನಾನು ಹೇಗೆ ತಿದ್ದಿಕೊಳ್ಳಲಿ ಅಂತಾ ಕೇಳಿ. ಆಗ ಅವರು ನಿಮಗೆ ತಿದ್ದಿಕೊಳ್ಳಲು ಅವಕಾಶ ಕೊಟ್ಟು ಸುಮ್ಮನಾದರೆ, ಅವರು ನಿಮ್ಮ ಒಳಿತು ಬಯಸುತ್ತಾರೆಂದು ಅರ್ಥ. ಆದ್ರೆ ಪದೇ ಪದೇ ಹೇಳಿದ್ದನ್ನೇ ಹೇಳಿ, ಅವಮಾನಿಸಲು ಬರುತ್ತಾರೋ, ಅವರಿಗೆ ಸರಿಯಾಗಿ ಉತ್ತರಿಸಿ.

ಇಂಥವರಲ್ಲಿ ಮೂರು ರೀತಿಯ ಜನರಿರುತ್ತಾರೆ. ಮೊದಲನೇಯವರು ನಿಮಗಿಂತ ದೊಡ್ಡವರು. ಎರಡನೆಯವರು ನಿಮ್ಮ ವಯಸ್ಸಿನವರು. ಮೂರನೆಯವರು ನಿಮಗಿಂತ ಚಿಕ್ಕವರು. ಹೀಗೆ ಹೀಯಾಳಿಸಿದವರು ನಿಮಗಿಂತ ದೊಡ್ಡವರಾಗಿದ್ದಲ್ಲಿ, ಎದುರುತ್ತರ ನೀಡದೇ ಸುಮ್ಮನಿದ್ದುಬಿಡಿ. ನಿಮ್ಮ ವಯಸ್ಕರೇ ಆಗಿದ್ದರೆ, ಸರಿಯಾಗಿ ಕ್ಲಾಸ್ ತೆಗೆದುಕೊಳ್ಳಿ. ಇನ್ನು ನಿಮಗಿಂತ ಸಣ್ಣವರಾಗಿದ್ದರೆ, ಬುದ್ಧಿ ಹೇಳಿ ಸುಮ್ಮನಿರಿ. ಯಾಕಂದ್ರೆ ಯಾವ ಮಕ್ಕಳು ತಮಗಿಂತ ಹಿರಿಯರಿಗೆ ಗೌರವಿಸುವುದಿಲ್ಲವೋ, ಅಂಥವರು ಸಮಾಜದಲ್ಲಿ ಓರ್ವ ಉತ್ತಮ ವ್ಯಕ್ತಿಯಾಗಲು ಸಾಧ್ಯವೇ ಇಲ್ಲ.

About The Author