Health Tips: ಖ್ಯಾತ ಆಯುರ್ವೇದ ತಜ್ಞರಾದ ಡಾ.ರವಿರಾಜ್ ಅವರು ಸೋರಿಯಾಸಿಸ್ ಖಾಯಿಲೆಯ ಬಗ್ಗೆ ಈಗಾಗಲೇ ಸಾಕಷ್ಟು ವಿವರಣೆ ಕೊಟ್ಟಿದ್ದಾರೆ. ಈ ಖಾಯಿಲೆ ಹೇಗೆ ಬರುತ್ತದೆ.? ಈ ಖಾಯಿಲೆ ಬಂದಾಗ ಹೇಗೆ ಪಥ್ಯ ಮಾಡಬೇಕು..? ಇದು ಬರದಂತೆ ತಡೆಯಲು ಏನು ಮಾಡಬೇಕು..? ಹೀಗೆ ಹಲವರು ವಿಷಯಗಳ ಬಗ್ಗೆ ವಿವರಿಸಿದ್ದಾರೆ. ಅದೇ ರೀತಿ ಸೋರಿಯಾಸಿಸ್ ಖಾಯಿಲೆ ಬೇರು ಸಮೇತ ಕಿತ್ತು ಹಾಕುವುದು ಹೇಗೆ ಅಂತಲೂ ವೈದ್ಯರು ವಿವರಿಸಿದ್ದಾರೆ ನೋಡಿ.
ಅತೀಯಾಗಿ ಮಾಂಸಾಹಾರ, ಮದ್ಯಪಾನ, ಹುಳಿ ಪದಾರ್ಥಗಳ ಸೇವನೆ ಮಾಡುತ್ತಾರೋ, ಅಂಥವರಿಗೆ ಸೋರಿಯಾಸಿಸ್ ರೋಗ ಬರುತ್ತದೆ. ಕೆಲವೊಂದು ಒತ್ತಡಗಳಿಂದಲೂ ದೇಹದಲ್ಲಿ ದೋಷ ಉಂಟಾಗಿ, ಸೋರಿಯಾಸಿಸ್ ಬರುತ್ತದೆ. ವೈದ್ಯರ ಪ್ರಕಾರ, ಸೋರಿಯಾಸಿಸ್ ಬಂದಿರುವಂಥವರು ಮಾಡುವ ಮೊದಲ ತಪ್ಪು ಅಂದ್ರೆ, ತಾತ್ಕಾಲಿಕವಾಗಿ, ಚಿಕಿತ್ಸೆಯ ಮೊರೆ ಹೋಗುವುದು.
ಆದರೆ ಇಂಥ ರೋಗಗಳಿಗೆ ಬರೀ ತಾತ್ಕಾಲಿಕ ಪರಿಹಾರ ಸಾಕಾಗುವುದಿಲ್ಲ. ಅದಕ್ಕೆ ಪರ್ಮನೆಂಟ್ ಪರಿಹಾರ ಬೇಕಾಗುತ್ತದೆ. ಬರೀ ಯಾವುದೇ ಕ್ರೀಮ್ ಹಚ್ಚಿಕೊಂಡರೆ, ಈ ಸಮಸ್ಯೆಗೆ ಪರಿಹಾರ ಸಿಗುವುದಿಲ್ಲ. ಹಾಗೆ ಮಾಡಿದಾಗ ಈ ರೋಗ, ಮೂಳೆಗೂ ಪಸರಿಸುವ ಹಂತಕ್ಕೆ ಹೋಗುತ್ತದೆ. ಹಾಗಾಗಿ ಇಂಥ ರೋಗಗಳಿಗೆ ಶಾಶ್ವತ ಚಿಕಿತ್ಸೆ ಪಡೆದು, ಅದನ್ನು ಬುಡಸಮೇತ ಕಿತ್ತು ಹಾಕಬೇಕು.
ಆಯುರ್ವೇದದಲ್ಲಿ ಸೋರಿಯಾಸಿಸ್ ಖಾಯಿಲೆಗೆ ಚಿಕಿತ್ಸೆ ಇದೆ. ಅದನ್ನು ಶೋಧನ ಕ್ರಮ ಎಂದು ಕರೆಯಲಾಗುತ್ತದೆ. ದೇಹದಲ್ಲಿ ಸೋರಿಯಾಸಿಸ್‌ಗೆ ಕಾರಣವಾದ ಅಂಶವನ್ನು ವಾಂತಿ ಮಾಡಿಸುವ ಮೂಲಕ, ಹೊರಹಾಕುವ ಪ್ರಕ್ರಿಯೆಯೇ ಶೋಧನ ಕ್ರಮ ಚಿಕಿತ್ಸೆ. ಈ ಚಿಕಿತ್ಸೆ ಪಡೆಯುವುದರಿಂದ, ಸೋರಿಯಾಸಿಸ್ ಮತ್ತೆ ಪುನರ್ ಉದ್ಭವಿಸುವುದಿಲ್ಲ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ..




