Friday, September 20, 2024

Latest Posts

ಇಂಗಿನ ನೀರಿನ ಬಳಕೆ ಹೇಗೆ ಮಾಡಬೇಕು..? ಯಾಕೆ ಮಾಡಬೇಕು..?

- Advertisement -

Health Tips: ಯಾರು ಪ್ರತಿದಿನ ತಾವು ತಯಾರಿಸುವ ಅಡಿಗೆಯಲ್ಲಿ ಇಂಗು ಅಥವಾ ಹಿಂಗಿನ ಬಳಕೆ ಮಾಡುತ್ತಾರೋ, ಅವರಿಗೆ ಹೊಟ್ಟೆ ನೋವಿನ ಸಮಸ್ಯೆ ಇರುವುದಿಲ್ಲ. ಅವರು ಸೇವಿಸಿದ ಆಹಾರ ಸುಲಭವಾಗಿ ಜೀರ್ಣವಾಗುತ್ತದೆ. ಏಕೆಂದರೆ ಇಂಗಿನಲ್ಲಿ ಅಂಥ ಆರೋಗ್ಯಕಾರಿ ಗುಣಗಳಿದೆ. ಹಾಗಾಗಿಯೇ ಕೆಲವು ಚಾಟ್ಸ್‌ನಲ್ಲೂ ಇಂಗಿನ ಬಳಕೆ ಮಾಡುತ್ತಾರೆ. ಇಂದು ನಾವು ಇಂಗಿನ ನೀರು ಕುಡಿಯುವುದರಿಂದ ಆರೋಗ್ಯಕ್ಕಾಗುವ ಲಾಭವೇನು ಅಂತಾ ಹೇಳಲಿದ್ದೇವೆ.

ಇಂಗು ನೀರನ್ನ ಸುಮ್ಮ ಸುಮ್ಮನೆ ಕುಡಿಯಬಾರದು. ನಿಮಗೆ ಹೊಟ್ಟೆನೋವಿನ ಸಮಸ್ಯೆ, ತಿಂದ ಆಹಾರ ಸರಿಯಾಗಿ ಜೀರ್ಣವಾಗದಿದ್ದಲ್ಲಿ, ಹೀಗೆ ಆರೋಗ್ಯ ಸಮಸ್ಯೆ ಇದ್ದಾಗ ಮಾತ್ರ, ಇಂಗಿನ ನೀರು ಕುಡಿಯಿರಿ. ಉಗುರು ಬೆಚ್ಚಗಿನ ನೀರಿನಲ್ಲಿ ಕೊಂಚ ಇಂಗು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿದ್ರೆ, ಇಂಗಿನ ನೀರು ರೆಡಿ. ನೀವು ತಿಂದ ಆಹಾರ ಸರಿಯಾಗಿ ಜೀರ್ಣವಾಗದೇ, ನಿಮಗೆ ಹೊಟ್ಟೆ ನೋವಾಗುತ್ತಿದ್ದಲ್ಲಿ, ನೀವು ಚಿಕ್ಕ ಲೋಟದಲ್ಲಿ ಇಂಗಿನ ನೀರು ಕುಡಿಯಬಹುದು.

ಅಥವಾ ಹೊಟೇಲ್ ಊಟ ಮಾಡಿ ಬಂದ ಬಳಿಕ, ಇಂಗಿನ ನೀರಿನ ಸೇವನೆ ಮಾಡಬಹುದು. ಮಲಬದ್ಧತೆ, ಗ್ಯಾಸ್ಟಿಕ್ ಸಮಸ್ಯೆ, ಇಂಥ ಸಮಸ್ಯೆ ಇದ್ದಾಗ, ಇಂಗಿನ ನೀರನ್ನು ಕುಡಿಯಬಹುದು. ಮುಟ್ಟಿನ ಹೊಟ್ಟೆ ನೋವು ಇದ್ದಾಗ, ನೀವು ಇಂಗಿನ ನೀರಿನ ಸೇವನೆ ಮಾಡಬಹುದು. ನೀವು ಇಲ್ಲಿ ನೀರಿನ ಬದಲು, ಮಜ್ಜಿಗೆ ಬಳಸಬಹುದು. ಕೆಲವರು ಮುಟ್ಟಿನ ಸಮಯದಲ್ಲಿ ಮಜ್ಜಿಗೆ ಬಳಸಲು ಇಚ್ಛಿಸುವುದಿಲ್ಲ. ಅಂಥವರು, ಇಂಗಿನ ನೀರು ಕುಡಿಯಿರಿ.

ವಾರಕ್ಕೆ ಎರಡು ಬಾರಿ ಇಂಗಿನ ನೀರು, ಅಥವಾ ಮಜ್ಜಿಗೆಗೆ ಇಂಗನ್ನು ಸೇರಿಸಿ, ಕುಡಿಯುವುದರಿಂದ ನಿಮ್ಮ ತೂಕ ಕಡಿಮೆಯಾಗುತ್ತದೆ. ಸಕ್ಕರೆ ಖಾಯಿಲೆ ಇದ್ದವರಿಗೆ, ಕಂಟ್ರೋಲಿಗೆ ಬರುತ್ತದೆ. ಜೀರ್ಣಕ್ರಿಯೆ ಸಮಸ್ಯೆ ಬರುವುದಿಲ್ಲ. ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಹಾಗಾಗಿ ಪ್ರತಿದಿನ ನೀವು ತಯಾರಿಸುವ ಅಡುಗೆಯಲ್ಲೂ ಸ್ವಲ್ಪ ಇಂಗನ್ನು ಬಳಸಿದರೆ ಉತ್ತಮ.

ಗರ್ಭಿಣಿಯರು 3 ತಿಂಗಳು ತುಂಬಿದ ಬಳಿಕ ಈ ಆಹಾರಗಳನ್ನು ಸೇವನೆ ಮಾಡಬೇಕು..

ಪಿಸ್ತಾ ಸೇವನೆಯಿಂದ ಆರೋಗ್ಯಕ್ಕಾಗುವ ಲಾಭಗಳೇನು..?

ಬೇರುಹಲಸಿನಕಾಯಿ (ಜೀಗುಜ್ಜೆ) ಸ್ಪೆಶಲ್ ಬಜ್ಜಿ ರೆಸಿಪಿ

- Advertisement -

Latest Posts

Don't Miss