Spiritual Story: ಹಲವರಿಗೆ ದಾರಿಯಲ್ಲಿ ನಡೆದು ಹೋಗುವಾಗ, ಅಚಾನಕ್ಕಾಗಿ ಹಣ ಸಿಗುತ್ತದೆ. ಅವರು ಆ ಹಣವನ್ನು ತೆಗೆದುಕೊಂಡು ಖರ್ಚು ಮಾಡಬಹುದು. ಇನ್ನು ಕೆಲವರು ಸ್ವಲ್ಪ ದಿನ ತಮ್ಮ ಬಳಿ ಆ ಹಣವನ್ನು ಇರಿಸಿಕೊಂಡು ಬಳಿಕ ಖರ್ಚು ಮಾಡಬಹುದು. ಇನ್ನು ಕೆಲವರು ಆ ಹಣವನ್ನು ತಮ್ಮಲ್ಲಿಯೇ ಉಳಿಸಿಕೊಳ್ಳಬಹುದು. ಆದರೆ ರಸ್ತೆಯಲ್ಲಿ ಸಿಗುವ ಹಣದ ಗುಣ ಹೇಗಿರುತ್ತದೆ..? ಇದನ್ನು ಹೇಗೆ ಬಳಸಬೇಕು ಅಂತಾ ತಿಳಿಯೋಣ ಬನ್ನಿ..
ನಿಮಗೆ ರಸ್ತೆಯಲ್ಲಿ ಹಣದ ಕಂತೆ ಸಿಕ್ಕರೆ, ಅದು ಯಾರದ್ದೋ, ಅವರಿಗೆ ತಲುಪಿಸುವುದು ನಿಮ್ಮ ಜವಾಬ್ದಾರಿ. ಆದರೆ 10, 20 ರೂಪಾಯಿ ಅಥವಾ 1,2 ರೂಪಾಯಿ ನಾಣ್ಯ ಸಿಕ್ಕಾಗ, ನೀವು ಅದನ್ನು ತೆಗೆದುಕೊಂಡು, ಮನೆಗೆ ತನ್ನಿ. ನಾಣ್ಯವಾಗಿದ್ದರೆ, ಅದನ್ನು ಅರಿಶಿನ ನೀರಿನಲ್ಲಿ ತೊಳೆದು, ಮರುದಿನ ದೇವರ ಪೂಜೆಯ ವೇಳೆಗೆ, ಆ ನಾಣ್ಯವನ್ನು ದೇವರ ಮುಂದಿಟ್ಟು, ಆರ್ಥಕ ಪರಿಸ್ಥಿತಿ ಸುಧಾರಿಸಲಿ ಎಂದು ದೇವರಲ್ಲಿ ಪ್ರಾರ್ಥಿಸಿ, ಆ ನಾಣ್ಯವನ್ನು ನಿಮ್ಮ ಪರ್ಸ್‌ನಲ್ಲಿ ಇರಿಸಿಕೊಳ್ಳಿ. ಎಲ್ಲಿಯವರೆಗೂ ಆ ನಾಣ್ಯ ನಿಮ್ಮ ಪರ್ಸ್‌ನಲ್ಲಿ ಇರುತ್ತದೆಯೋ, ಅಲ್ಲಿಯವರೆಗೂ ನಿಮ್ಮ ಆರ್ಥಿಕ ಪರಿಸ್ಥಿತಿ ಉತ್ತಮವಾಗಿರುತ್ತದೆ.
ಇನ್ನು ನಿಮಗೆ ನೋಟ್ ಸಿಕ್ಕರೆ, ಅದಕ್ಕೆ ಅರಿಶಿನ ಕುಂಕುಮ ಹಚ್ಚಿ, ದೇವರ ಮುಂದಿಟ್ಟು, ನಮಸ್ಕರಿಸಿ ಪರ್ಸ್‌ನಲ್ಲಿರಿಸಿ. ಇನ್ನು ರಸ್ತೆಯಲ್ಲಿ ಹಣ ಸಿಗುವುದು ಎಂದರೆ, ನಿಮ್ಮ ಲಕ್ ಶುರುವಾಯಿತು. ನಿಮ್ಮ ಆರ್ಥಿಕ ಸಮಸ್ಯೆ ದೂರವಾಗುತ್ತಿದೆ ಎಂಬುದರ ಸಂಕೇತವಾಗಿದೆ. ಹಾಗಾಗಿ ಶಾಸ್ತ್ರದ ಪ್ರಕಾರ, ರಸ್ತೆಯಲ್ಲಿ ಸಿಕ್ಕ ಹಣವನ್ನು ಯಾರಿಗೂ ನೀಡಬಾರದು.




