Health tips: ನಾವು ನಮ್ಮ ಮೈ ಕೈ ದೇಹ ಎಲ್ಲವನ್ನೂ ಸ್ವಚ್ಛವಾಗಿರಿಸಕೊಳ್ಳುತ್ತೇವೆ. ಅಷ್ಟೇ ಏಕೆ ನಾವು ಬಳಸುವ ಬಟ್ಟೆ, ಬೆಡ್‌ಶೀಟ್, ಹೊದಿಕೆ, ಬಳಸುವ ಪಾತ್ರೆ ಎಲ್ಲವನ್ನೂ ಸ್ವಚ್ಛವಾಗಿ ತೊಳೆದು ಇಟ್ಟುಕೊಳ್ಳುತ್ತೇವೆ. ಆದರೆ ನಾವು ಪ್ರತಿದಿನ ಬಳಸುವ ಹೆಲ್ಮೆಟ್ ಕ್ಲೀನಿಂಗ್ ಬಗ್ಗೆ ಎಂದಾದರೂ ಗಮನ ಹರಿಸಿದ್ದೇವಾ..? ಅಪರೂಪಕ್ಕೆ ಕೆಲವರು ಈ ಬಗ್ಗೆ ಯೋಚಿಸಿರಬಹುದು. ಹಾಗಾಗಿ ಇಂದು ವೈದ್ಯೆಯಾದ ಡಾ.ದೀಪಿಕಾ ಅವರು ಹೆಲ್ಮೆಟ್ ಕ್ಲೀನಿಂಗ್ ಬಗ್ಗೆ ಮಾಹಿತಿ ನೀಡಿದ್ದಾರೆ ನೋಡಿ..
ಇಂದಿನ ಕಾಲದ ಯುವಪೀಳಿಗೆಯವರ ತೊಂದರೆ ಅಂದ್ರೆ, ಅದು ಕೂದಲು ಉದುರುವ ಸಮಸ್ಯೆ. ಈ ಕೂದಲು ಉದುರುವ ಸಮಸ್ಯೆಗೆ ಬರೀ ನಾವು ಬಳಸುವ ಶ್ಯಾಂಪೂ, ಎಣ್ಣೆ ಅಷ್ಟೇ ಕಾರಣವಲ್ಲ. ನಾವು ಬಳಸುವ ಹೆಲ್ಮೆಟ್ ಕೂಡ ಕಾರಣವಾಗಿರುತ್ತದೆ. ಹೆಲ್ಮೆಟ್ ಕ್ಲೀನ್ ಇದ್ದರೆ, ನಮ್ಮ ಕೂದಲು ಉದುರುವುದಿಲ್ಲ. ಹಾಗಾಗಿ ಹೆಲ್ಮೆಟ್ ಶುಚಿಯಾಗಿರುವುದು ಮುಖ್ಯ.
ಹೆಲ್ಮೆಟ್ ಕ್ಲೀನ್ ಆಗಿ ಇರದಿದ್ದಲ್ಲಿ, ತಲೆಯಲ್ಲಿ ಡ್ಯಾಂಡ್ರಫ್ ಆಗುತ್ತದೆ. ತಲೆಯಲ್ಲಿ ಇನ್‌ಫೆಕ್ಷನ್ ಆಗುತ್ತದೆ. ಹಾಗಾಗಿ ಹೆಲ್ಮೆಟ್ ಕ್ಲೀನ್ ಆಗಿ ಇರಿಸಿಕೊಳ್ಳಿ. ಜೊತೆಗೆ ಹೆಲ್ಮೆಟ್ ಧರಿಸುವ ಮುನ್ನ ಕಾಟನ್ ಬಟ್ಟೆ ತಲೆಗೆ ಸುತ್ತಿಕೊಂಡು ಬಳಿಕ ಹೆಲ್ಮೆಟ್ ಧರಿಸಿದರೆ ಇನ್ನೂ ಉತ್ತಮ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ..