ಕಲಬುರಗಿ: ರಮೇಶ್ ಜಾರಕಿಹೊಳಿಯವರಿಗೆ ಬಿಜೆಪಿ ಬುಲಾವ್ ಕೊಟ್ಟಿಲ್ಲ. ಕಾಂಗ್ರೆಸ್ ನ ಆಂತರಿಕ ಜಗಳವೇ ಅವರನ್ನ ಬೆಂಗಳೂರಿಗೆ ಬರುವಂತೆ ಮಾಡಿದೆ ಅಂತ ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಕಲಬುರಗಿಯಲ್ಲಿ ಮಾತನಾಡಿದ ಶೋಭಾ, ಮೊದಲು ಮೈತ್ರಿ ಸರ್ಕಾರದ ಬಗ್ಗೆ ಹರಿಹಾಯ್ದರು. ಜೆಡಿಎಸ್ ರಾಜ್ಯಾಧ್ಯ ವಿಶ್ವನಾಥ್, ಸಿದ್ದರಾಮಯ್ಯ ಬಗ್ಗೆ ಸತ್ಯವನ್ನೇ ಹೇಳಿದ್ದಾರೆ. ಎರಡೂ ಪಕ್ಷದವರು ಸತ್ಯದ ಪರಾಮರ್ಶೆ ಮಾಡಬೇಕು ಅಂತ ಹೇಳಿದ್ರು.
ಇನ್ನು ರಮೇಶ್ ಜಾರಕಿಹೊಳಿಯವರಿಗೆ ಬಿಜೆಪಿ ಬುಲಾವ್ ಕೊಟ್ಟಿಲ್ಲ. ಕಾಂಗ್ರೆಸ್ ನ ಆಂತರಿಕ ಜಗಳವೇ ಅವರನ್ನ ಬೆಂಗಳೂರಿಗೆ ಬರುವಂತೆ ಮಾಡಿದೆ ಎಂದ್ರು. ಇದೇ ವೇಳೆ ಹಿಂದುಳಿದ ವರ್ಗದವರಿಗೆ ಬಿಜೆಪಿ ಟಿಕೆಟ್ ನೀಡಿಲ್ಲವೆಂಬ ಸಿದ್ದರಾಮಯ್ಯ ಆರೋಪ ವಿಚಾರಕ್ಕೆ ಪ್ರತಿಕ್ರಿಯಿಸಿದ ಶೋಭಾ, ನಮ್ಮ ದೇಶದ ಪ್ರಧಾನಿಯೇ ಹಿಂದುಳಿದ ವರ್ಗದವರು. ನೀವು ಸಿಎಂ ಆಗಿದ್ದಾಗ ಅಹಿಂದಕ್ಕೆ ಏನು ಮಾಡಿದಿರಿ ಅಂತ ಪ್ರಶ್ನಿಸಿದ್ರು. ಅಲ್ಲದೆ ಸಿದ್ದರಾಮಯ್ಯನವರ ಸರ್ಟಿಫಿಕೇಟ್ ಬೇಕಾಗಿಲ್ಲ ಅಂತ ಕುಟುಕಿದ್ರು.
‘ಮೋದಿ ನೇಣು ಹಾಕಿಕೊಳ್ಳಲ್ಲ, ಪ್ರಮಾಣವಚನ ಸ್ವೀಕರಿಸ್ತಾರೆ‘
ಇನ್ವು ಪ್ರಧಾನಿ ನರೇಂದ್ರ ಮೋದಿ ದೆಹಲಿಯ ವಿಜಯ್ ಚೌಕ್‌ನಲ್ಲಿ ನೇಣು ಹಾಕಿಕೊಳ್ತಾರೆ ಅನ್ನೋ ಖರ್ಗೆ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಶೋಭಾ, ಖರ್ಗೆಯವರು ಹತಾಶೆಯಿಂದ ಸೋಲಿನ ಭಯದಿಂದ ಮಾತನಾಡ್ತಿದ್ದಾರೆ.ವಿಜಯ್ ಚೌಕ್‌ನಲ್ಲಿ ಮೋದಿ ನೇಣು ಹಾಕಿಕೊಳ್ಳೋದಿಲ್ಲ, ಬದಲಾಗಿ ಪಾರ್ಲಿಮೆಂಟ್‌ನಲ್ಲಿ ಪ್ರಮಾಣ ವಚನ ತೆಗೆದುಕೊಳ್ತಾರೆ. ಪ್ರಧಾನಿ ಮೋದಿ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ಖರ್ಗೆ ವಿರುದ್ದ ಪ್ರಕರಣ ದಾಖಲಿಸಬೇಕು ಕೂಡಲೇ ಅವರು ಕ್ಷಮೇ ಕೋರಬೇಕು ಅಂತ ಹರಿಹಾಯ್ದಿದ್ದಾರೆ.