ಹುಬ್ಬಳ್ಳಿ- ಧಾರವಾಡ: ಈಗ ಎಲ್ಲೆಡೆ ಗೌತಮ್ ಗಂಭೀರ್ ಮತ್ತು ವಿರಾಟ್ ಕೊಹ್ಲಿದ್ದೇ ಸುದ್ದಿ. ಅವರಿಬ್ಬರು ಕ್ರಿಕೇಟ್ ಗ್ರೌಂಡ್‌ನಲ್ಲಿ ಕಿತ್ತಾಡಿಕೊಂಡಿದ್ದು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಬೆಂಗಳೂರಿನಲ್ಲಿ ಆರ್ಸಿಬಿ ಸೋತಾಗ, ಗೌತಮ್ ಬಾಯಿ ಮೇಲೆ ಬೆರಳಿಟ್ಟು, ಟಾಂಗ್ ಕೊಟ್ಟಿದ್ದರು. ಮೊನ್ನೆ ಲಖನೌ ವರ್ಸಸ್ ಆರ್ಸಿಬಿ ಮ್ಯಾಚ್‌ನಲ್ಲಿ ಲಖನೌ ಸೋತಾಗ, ವಿರಾಟ್ ಕೂಡ ಇದೇ ರೀತಿ ಬಾಯಿ ಮೇಲೆ ಬೆರಳಿಟ್ಟು, ತಿರುಗೇಟು ಕೊಟ್ಟಿದ್ದರು. ಅಲ್ಲದೇ ಗ್ರೌಂಡ್‌ನಲ್ಲಿ ಇಬ್ಬರ ನಡುವೆ ಮಾತಿನ ಚಕಮಕಿ ಕೂಡ ಆಗಿತ್ತು. ಇದೀಗ ಈ ಬಗ್ಗೆ ಹುಬ್ಬಳ್ಳಿ- ಧಾರವಾಡ ಪೊಲೀಸರು ಡಿಫ್ರೆಂಟ್ ಆಗಿ ಟ್ವೀಟ್ ಮಾಡಿದ್ದು ವೈರಲ್ ಆಗಿದೆ.
ಅಂತಾ ಟೈಮ್ ನ್ಯಾಗ ನೀವ ನಮ್ಮ #ERSS112 ಗ ಕಾಲ್ ಮಾಡ್ಬೇಕಿತ್ರೀ.. ಯಾವುದೇ #ಗಂಭೀರ ಸಮಸ್ಯೆಗಳು ಉಂಟಾದಾಗ 112 ಗೆ ಕರೆ ಮಾಡಿ.. #ವಿರಾಟ ರೂಪದಲ್ಲಿ ಸಹಾಯ ಮಾಡಾಕ ಹುಧಾ ನಗರ ಪೋಲಿಸ್ ಸದಾ ಸಿದ್ಧವಾಗಿರುತ್ತದೆ. ಗೊತ್ತಲ್ಲಾ ನಮ್ಮ ರೀಚ್ ಟೈಮ್.. #Dial112 incase of any emergency..! ಎಂದು ಟ್ವೀಟ್ ಮಾಡಿದ್ದಾರೆ.
ಇದಕ್ಕೆ ಹಲವರು ಕಾಮೆಂಟ್ ಮಾಡಿದ್ದಾರೆ. ಕೆಲವರು ಇವರನ್ನ ಹೊಗಳಿ ಕಾಮೆಂಟ್ ಮಾಡಿದ್ರೆ, ಇನ್ನು ಕೆಲವರು ಊರಲ್ಲಿ ಕೆಲ ಘಟನೆಗಳು ನಡೆದರೂ, ನೀವೇನೂ ಮಾಡಲು ಸಾಧ್ಯವಾಗಿಲ್ಲ. ಸುಮ್ಮನೆ ಬಡಾಯಿ ಕೊಚ್ಚಿಕೊಳ್ಳಬೇಡಿ ಎಂದು ಹೇಳಿದ್ದಾರೆ.
ಅಂತಾ ಟೈಮ್ ನ್ಯಾಗ ನೀವ ನಮ್ಮ #ERSS112 ಗ ಕಾಲ್ ಮಾಡ್ಬೇಕಿತ್ರೀ..
ಯಾವುದೇ #ಗಂಭೀರ ಸಮಸ್ಯೆಗಳು ಉಂಟಾದಾಗ 112 ಗೆ ಕರೆ ಮಾಡಿ..#ವಿರಾಟ ರೂಪದಲ್ಲಿ ಸಹಾಯ ಮಾಡಾಕ ಹುಧಾ ನಗರ ಪೋಲಿಸ್ ಸದಾ ಸಿದ್ಧವಾಗಿರುತ್ತದೆ.
ಗೊತ್ತಲ್ಲಾ ನಮ್ಮ ರೀಚ್ ಟೈಮ್..🙋#Dial112 incase of any emergency..!#RCBVSLSG #ViratKohli @RCBTweets pic.twitter.com/efvrz7PXFo
— Hubballi-Dharwad City Police. ಹು-ಧಾ ನಗರ ಪೊಲೀಸ್ (@compolhdc) May 2, 2023
ಕುಮಾರಸ್ವಾಮಿ ಸಿಎಂ ಆಗುವುದು ಶತಸಿದ್ಧ: ಹೆಚ್ಡಿಕೆ ಬಗ್ಗೆ ಭವಿಷ್ಯ ನುಡಿದ ಹೆಚ್ಡಿಡಿ..
‘ರಾತ್ರಿ ಎಲ್ಲಾ ಮಟನ್ ತಿಂತಾರೆ, ಬೆಳಿಗ್ಗೆ ಎದ್ದು ಮಾಂಸಾಹಾರಿಗಳಿಗೆ ಬೈತಾರೆ’