Wednesday, July 2, 2025

Latest Posts

ಈ ದೇವಸ್ಥಾನದಲ್ಲಿ ಪತಿ-ಪತ್ನಿ ಸೇರಿ ಪೂಜೆ ಮಾಡುವಂತಿಲ್ಲ..

- Advertisement -

Spiritual: ಹಿಂದೂ ಧರ್ಮದ ಪದ್ಧತಿ, ನಂಬಿಕೆ ಪ್ರಕಾರ, ವಿವಾಹಕ್ಕೂ ಮುಂಚೆ ಒಬ್ಬೊಬ್ಬರೇ ದೇವಸ್ಥಾನಕ್ಕೆ ಹೋದರೂ ನಮಗೆ ಪುಣ್ಯ ಪ್ರಾಪ್ತಿಯಾಗುತ್ತದೆ. ಆದರೆ ವಿವಾಹದ ಬಳಿಕ, ಪತಿ-ಪತ್ನಿ ಸೇರಿ ದೇವಸ್ಥಾನಕ್ಕೆ ಹೋದರಷ್ಟೇ ಅದರ ಪುಣ್ಯ ಲಭಿಸುತ್ತದೆ ಅನ್ನೋ ನಂಬಿಕೆ ಇದೆ. ದರೆ ಇಲ್ಲೊಂದು ದೇವಸ್ಥಾನದಲ್ಲಿ ಪತಿ-ಪತ್ನಿ ಸೇರಿ ಪೂಜೆ ಮಾಡುವಂತಿಲ್ಲ. ಹಾಗಾದರೆ ಯಾವುದು ಆ ದೇವಸ್ಥಾನ..? ಈ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..

ಶ್ರೀ ಕೋಟಿ ಮಾತಾ ಎಂಬ ರೂಪದಲ್ಲಿ ಪಾರ್ವತಿಯನ್ನು ಪೂಜಿಸುವ ಮಂದಿರ, ಹಿಮಾಚಲಪ್ರದೇಶದ ಶಿಮ್ಲಾದ ರಾಮ್‌ಪುರ್‌ನಲ್ಲಿದೆ. ಇಲ್ಲಿ ತಾಯಿ ದುಃಖದಲ್ಲಿರುವ ಕಾರಣ, ಇಲ್ಲಿ ಯಾರು ತಮ್ಮ ಜೀವನ ಸಂಗಾತಿಯೊಡನೆ ಬಂದು ದೇವರ ದರ್ಶನ ಮಾಡುತ್ತಾರೋ, ಅವರು ಬೇರೆ ಬೇರೆಯಾಗಲಿ ಎಂದು ಶಾಪ ನೀಡಿದ್ದಳಂತೆ. ಈ ಕಾರಣಕ್ಕೆ ಈ ದೇವಸ್ಥಾನಕ್ಕೆ ಪತಿ-ಪತ್ನಿ ಒಟ್ಟಾಗಿ ಹೋಗುವಂತಿಲ್ಲ. ಬದಲಿಗೆ ಒಬ್ಬೊಬ್ಬರೇ ಹೋಗಿ ದರ್ಶನ ಪಡೆಯಬಹುದು.

ಈ ಶಾಪದ ಹಿಂದೆ ಒಂದು ಕಥೆ ಇದೆ. ಒಮ್ಮೆ ಗಣಪತಿ ಮತ್ತು ಸುಬ್ರಹ್ಮಣ್ಯನ ನಡುವೆ ಯಾರಿಗೆ ಮೊದಲು ಮದುವೆ ಎಂದು ಗಲಾಟೆ ನಡೆಯಿತು. ಅದಕ್ಕಾಗಿ ಪಾರ್ವತಿ ಮತ್ತು ಶಿವ ಸೇರಿ, ಯಾರು ಮೊದಲು ಬ್ರಹ್ಮಾಂಡವನ್ನು ಸುತ್ತಿ ಬರುತ್ತಾರೋ, ಅವರಿಗೆ ಮೊದಲು ಮದುವೆ ಎನ್ನಲಾಗುತ್ತದೆ. ಹಾಗಾಗಿ ಸುಬ್ರಹ್ಮಣ್ಯ ತನ್ನ ನವಿಲನ್ನೇರಿ ಬ್ರಹ್ಮಾಂಡ ಸವಾರಿಗೆ ನಡೆದರೆ, ಇತ್ತ ಗಣಪತಿ ತಂದೆ ತಾಯಿಯೇ ಪ್ರಪಂಚವೆಂದು ಅವರನ್ನೇ ಸುತ್ತುತ್ತಾನೆ.

ಅವನಿಗೆ ರಿದ್ದಿ ಸಿದ್ದಿಯರೊಂದಿಗೆ ವಿವಾಹವಾಗುತ್ತದೆ. ಸುಬ್ರಹ್ಮಣ್ಯ ಪ್ರಪಂಚ ಸುತ್ತಿ ಬರುವಷ್ಟರಲ್ಲಿ ಗಣಪತಿಯ ವಿವಾಹವಾಗಿತ್ತು. ಇದನ್ನು ಕಂಡು ಕೋಪಗೊಂಡ ಸುಬ್ರಹ್ಮಣ್ಯ, ನಾನು ಇನ್ನೆಂದೂ ವಿವಾಹವಾಗುವುದಿಲ್ಲವೆಂದು ಹೇಳಿ, ಇದೇ ಸ್ಥಳದಲ್ಲಿ ತಪಸ್ಸಿಗೆ ಕೂರುತ್ತಾನೆ. ಮಗನ ಪ್ರತಿಜ್ಞೆ ಕೇಳಿ ತಾಯಿ ಪಾರ್ವತಿ ದುಃಖಿತಳಾಗುತ್ತಾಳೆ. ಮತ್ತು ಈ ಸ್ಥಳಕ್ಕೆ ಯಾವುದೇ ಪತಿ ಪತ್ನಿ ಬಂದು ಒಟ್ಟಿಗೆ ದೇವಿ ದರ್ಶನ ಪಡೆಯುತ್ತಾರೋ, ಅಂಥವರು ದೂರವಾಗುತ್ತಾರೆಂದು ಶಾಪ ನೀಡುತ್ತಾಳೆ.

ಮಂಗಳಮುಖಿಯರ ಬಗ್ಗೆ ನಿಮಗೆ ಗೊತ್ತಿರದ ಕುತೂಹಲಕಾರಿ ವಿಷಯಗಳು..

ತನ್ನ ಪತಿಯನ್ನು ವೇಶ್ಯೆಯ ಬಳಿ ಕರೆದೊಯ್ದ ಪತ್ನಿ ಮುಂದೇನಾಯ್ತು- ಭಾಗ 1

ತನ್ನ ಪತಿಯನ್ನು ವೇಶ್ಯೆಯ ಬಳಿ ಕರೆದೊಯ್ದ ಪತ್ನಿ ಮುಂದೇನಾಯ್ತು- ಭಾಗ 2

- Advertisement -

Latest Posts

Don't Miss