Saturday, October 25, 2025

Latest Posts

ಪತಿ-ಪತ್ನಿ ಈ ಕೆಲಸಗಳನ್ನು ಮಾಡುವಾಗ ಮಧ್ಯ ಹೋಗಬಾರದಂತೆ..

- Advertisement -

Spiritual News: ಪತಿ-ಪತ್ನಿ ಸಂಬಂಧ ಅಂದ್ರೆ, ಒಂದು ಅತ್ಯುತ್ತಮವಾದ ಸಂಬಂಧ. ಈ ಸಂಬಂಧದಿಂದಲೇ, ಒಂದು ಕುಟುಂಬ ತಯಾರಾಗುತ್ತದೆ. ಪತಿ-ಪತ್ನಿ, ಮಕ್ಕಳು, ಸೊಸೆ, ಮೊಮ್ಮಕ್ಕಳು ಹೀಗೆ ಕುಟುಂಬ ತಯಾರಾಗಬೇಕು ಅಂದ್ರೆ, ಒಂದು ಜೋಡಿ ಅನ್ಯೋನ್ಯತೆಯಿಂದ ಇರಬೇಕು. ಆದರೆ ಕೆಲವು ಅನ್ಯೋನ್ಯವಾಗಿರುವ ಜೋಡಿ, ಮೂರನೇಯವರಿಗೆ ಹಾಳಾಗಿ ಹೋಗುತ್ತದೆ. ಹಾಗಾಗಿ ಪತಿ-ಪತ್ನಿ ಕೆಲ ಕೆಲಸಗಳನ್ನು ಮಾಡುವಾಗ, ಅವರ ಮಧ್ಯ ಹೋಗಬಾರದಂತೆ. ಹಾಗಾದ್ರೆ ಯಾವಾಗ ಅಧಿಕಪ್ರಸಂಗತನ ಮಾಡಬಾರದು ಅಂತಾ ತಿಳಿಯೋಣ ಬನ್ನಿ..

ಪತಿ-ಪತ್ನಿ ಜಗಳ ಮಾಡುವಾಗ ಮೂರನೇಯವರು ಹೋಗಬಾರದು. ಪತಿ- ಪತ್ನಿ ಜಗಳವಾಡುವಾಗ, ಮೂರನೇಯವರು ಮಧ್ಯ ಹೋಗಬಾರದು. ಪತಿ-ಪತ್ನಿ ಜಗಳವಾಡಿ, ಒಂದಾಗಬಹುದು. ಮಧ್ಯ ಜಗಳ ಬಿಡಿಸಲು ಹೋದವರು, ಕೆಟ್ಟವರಾಗಬಹುದು. ಅಥವಾ ನೀವು ಒಳ್ಳೆಯದನ್ನೇ ಬಯಸಿ, ಜಗಳ ನಿಲ್ಲಿಸಲು ಹೋಗಿರಬಹುದು. ಆದರೆ ನಿಮ್ಮ ಮಾತಿನಿಂದ, ಅವರ ಜಗಳ ಇನ್ನೂ ಹೆಚ್ಚಾಗಬಹುದು. ಆಗಲೂ ನೀವೇ ಕೆಟ್ಟವರಾಗುತ್ತೀರಿ. ಹಾಗಾಗಿ ಪತಿ-ಪತ್ನಿ ಮಧ್ಯೆ ಜಗಳವಾಗುವಾಗ, ಮಧ್ಯೆ ಹೋಗಬೇಡಿ.

ಪತಿ-ಪತ್ನಿ ಅನ್ಯೋನ್ಯವಾಗಿ ಮಾತನಾಡುತ್ತ, ಕಾಲ ಕಳೆಯುವಾಗ ಮೂರನೇಯವರು ಹೋಗಬಾರದು. ಪತಿ-ಪತ್ನಿ ಮಾತನಾಡುತ್ತಾ, ಪರಸ್ಪರ ಸಮಯ ಕಳೆಯುತ್ತಿದ್ದರೆ, ಮಧ್ಯದಲ್ಲಿ ಹೋಗಿ, ಅವರನ್ನು ಮಾತಾಡಿಸಿ, ಅವರ ಸಮಯವನ್ನು ಹಾಳು ಮಾಡಬಾರದು. ಇದು ಬುದ್ಧಿವಂತರ ಲಕ್ಷಣವಲ್ಲ.

ಪತಿ-ಪತ್ನಿ ಸೇರಿ ಯಾವುದಾದರೂ ಕೆಲಸ ಮಾಡುವಾಗ ಮೂರನೇಯವರು ಹೋಗಬಾರದು. ಪತಿ ಪತ್ನಿ ಸೇರಿ ನಗು ನಗುತ್ತಾ ಅಡುಗೆ ಕೆಲಸ, ಸ್ವಚ್ಛತೆಯ ಕೆಲಸ, ಅಥವಾ ಬೇರೆ ಇನ್ಯಾವುದೇ ಕೆಲಸ ಮಾಡುವಾಗ, ಮೂರನೇಯವರು ನಾನೂ ಕೆಲಸ ಮಾಡುತ್ತೇನೆ ಎಂದು, ಅಥವಾ ಅವರು ಮಾಡುವ ಕೆಲಸ ಸರಿಯಾಗಿಲ್ಲವೆಂದು ಹೇಳುತ್ತ, ಅವರ ಮಧ್ಯ ಹೋಗಬಾರದು. ಇದರಿಂದ ಪತಿ-ಪತ್ನಿಯ ನೆಮ್ಮದಿ ಹಾಳಾಗುತ್ತದೆ. ಅವರಿಗೆ ನಿಮ್ಮ ಬಗ್ಗೆ ತಪ್ಪು ಭಾವನೆ ಬರುತ್ತದೆ. ಮತ್ತು ಆ ಮೂರನೇಯವರು ಯಾರೋ ಹೊರಗಿನವರೇ ಆಗಬೇಕು ಅಂತೇನಿಲ್ಲ. ಮನೆಜನರೇ ಆಗಿರಬಹುದು.ತಂದೆ, ತಾಯಿ, ಅಣ್ಣ, ತಂಗಿ ಯಾರೇ ಆದರೂ, ಪತಿ –ಪತ್ನಿ ಮಧ್ಯೆ ಹೋಗಬಾರದು.

ದಾನ ಕೊಡುವಾಗ ಇಂಥ ತಪ್ಪುಗಳನ್ನು ಎಂದಿಗೂ ಮಾಡಬೇಡಿ..

ನಿದ್ರಿಸಲು ಇದೆ ಹಲವು ನಿಯಮಗಳು: ನಿದ್ರೆಯ ನಿಯಮಗಳೇನು..?

ಸಂಜೆ ಉಗುರು ಕತ್ತರಿಸಬಾರದು ಅಂತಾ ಹೇಳುವುದು ಯಾಕೆ ಗೊತ್ತಾ..?

- Advertisement -

Latest Posts

Don't Miss