Friday, November 22, 2024

Latest Posts

ಪತಿ ಆರೋಗ್ಯವಾಗಿ, ಆರ್ಥಿಕವಾಗಿ ಉತ್ತಮನಾಗಿರಬೇಕು ಅಂದ್ರೆ ಪತ್ನಿ ಈ ಕೆಲಸ ಮಾಡಬೇಕು..

- Advertisement -

Spiritual: ಪುರುಷನ ಜೀವನ ವಿವಾಹವಾಗುವವರೆಗಷ್ಟೇ, ಅವನ ಪಾಪ ಪುಣ್ಯಗಳ ಮೇಲೆ ಅವಲಂಬಿತವಾಗಿರುತ್ತದೆ. ಅದೇ ವಿವಾಹವಾದ ಬಳಿಕ, ಪತ್ನಿ ಮಾಡಿದ ಪಾಪ ಪುಣ್ಯಗಳಲ್ಲಿ ಅವನೂ ಭಾಗಿಯಾಗುತ್ತಾನೆ. ಏಕೆಂದರೆ, ಸಪ್ತಪದಿ ತುಳಿದ ಬಳಿಕ, ದೇಹವೆರಡು ಜೀವವೊಂದು ಅನ್ನೋ ರೀತಿ ಇರುತ್ತದೆ. ಹಾಗಾದ್ರೆ ಪತಿಯು ಆರೋಗ್ಯವಾಗಿ, ಆರ್ಥಿಕವಾಗಿ ಉತ್ತಮನಾಗಿರಬೇಕು ಅಂದ್ರೆ ಪತ್ನಿ ಏನು ಮಾಡಬೇಕು ಅನ್ನೋ ಬಗ್ಗೆ ನಾವಿಂದು ಹೇಳಲಿದ್ದೇವೆ.

ಮೊದಲನೇಯದಾಗಿ ಪತ್ನಿಯಾದವಳು ಪ್ರತಿದಿನ ತುಳಸಿ ಪೂಜೆ ಮಾಡಬೇಕು. ಕನ್ಯೆಯಾಗಿದ್ದಾಗ, ಯಾರು ತುಳಸಿಯನ್ನು ಭಕ್ತಿಯಿಂದ ಬೇಡಿಕೊಳ್ಳುತ್ತಾರೋ, ಅಂಥವರಿಗೆ ಆರೋಗ್ಯವಾಗಿರುವ, ಉತ್ತಮವಾಗಿರುವ ವರ ಸಿಗುತ್ತಾನೆಂಬ ನಂಬಿಕೆ ಇದೆ. ಅದೇ ರೀತಿ ವಿವಾಹವಾದ ಬಳಿಕವೂ, ಅದೇ ಭಕ್ತಿಯಿಂದ ನೀವು ಪ್ರತಿದಿನ ತುಳಸಿ ದೇವಿಗೆ ಪೂಜಿಸಿ ನೀರೆರೆದರೆ, ಪತಿಯ ಆರೋಗ್ಯ, ಆರ್ಥಿಕ ಪರಿಸ್ಥಿತಿ ಉತ್ತಮವಾಗಿರುತ್ತದೆ. ದಾಂಪತ್ಯ ಜೀವನವೂ ಉತ್ತಮವಾಗಿರುತ್ತದೆ.

ಎರಡನೇಯದಾಗಿ ಮನೆಯನ್ನು ಸದಾ ಸ್ವಚ್ಛವಾಗಿ ಇರಿಸಿಕೊಳ್ಳಬೇಕು. ಅದರಲ್ಲೂ ಮೊದಲನೇಯದಾಗಿ ಅವಳು ಹೆಚ್ಚಾಗಿ ಸಮಯ ಕಳೆಯುವ ಅಡುಗೆ ಮನೆ ಕ್ಲೀನ್ ಆಗಿರಬೇಕು. ಬಳಿಕ ದೇವರ ಕೋಣೆ ಸ್ವಚ್ಛವಾಗಿರಿಸಬೇಕು. ಅಂಗಳ, ರೂಮ್‌ ಎಲ್ಲವೂ ಕ್ಲೀನ್ ಆಗಿರಬೇಕು. ಆಗ ಎಲ್ಲರ ಆರೋಗ್ಯ ಚೆನ್ನಾಗಿರುತ್ತದೆ. ಮತ್ತು ಸ್ವಚ್ಛತೆ ಇರುವ ಜಾಗದಲ್ಲಿ ಲಕ್ಷ್ಮೀ ದೇವಿ ಸದಾ ನೆಲೆಸಿರುತ್ತಾಳೆ.

ಮೂರನೇಯದಾಗಿ ಅಡುಗೆ ಮಾಡುವಾಗ, ಒಳ್ಳೆಯ ಮನಸ್ಸಿನಿಂದ ಅಡುಗೆ ಮಾಡಬೇಕು. ಏಕೆಂದರೆ, ನಮ್ಮ ಮನಸ್ಸು ಉತ್ತಮವಾಗಿದ್ದಾಗ, ಅಡುಗೆ ರುಚಿಯಾಗಿ, ಆರೋಗ್ಯಕರವಾಗಿ ಇರುತ್ತದೆ. ಅದೇ ಕೋಪದಲ್ಲಿ, ಅಸೂಯೆಯಲ್ಲಿ ಅಡುಗೆ ಮಾಡಿದಾಗ, ಅಡುಗೆ ರುಚಿಸುವುದಿಲ್ಲ. ಅಂಥ ಊಟ ಆರೋಗ್ಯವನ್ನು ಹಾಳು ಮಾಡುವುದಲ್ಲದೇ, ಮನಸ್ಸಿನ ನೆಮ್ಮದಿಯನ್ನೂ ಹಾಳು ಮಾಡುತ್ತದೆ.

ನಾಲ್ಕನೇಯದಾಗಿ ಮುಸ್ಸಂಜೆ ಹೊತ್ತಿಗೆ ಮನೆ ಸ್ವಚ್ಛ ಮಾಡಿ, ಕೈ ಕಾಲು ತೊಳೆದು, ದೇವರಿಗೆ ದೀಪ ಹಚ್ಚಿಸಿ, ಮನೆಯ ಒಳಿತಿಗಾಗಿ ಪ್ರಾರ್ಥಿಸಬೇಕು. ಮನೆದೇವರು, ಇಷ್ಟ ದೇವರು ಎಲ್ಲರಿಗೂ ಪೂಜಿಸಿ ಪ್ರಾರ್ಥಿಸಬೇಕು. ವರ್ಷಕ್ಕೊಮ್ಮೆಯಾದರೂ, ಕುಲದೇವರ ದರ್ಶನಕ್ಕೆ ಹೋಗಬೇಕು.

ಹಿಂದೂ ಧರ್ಮದಲ್ಲಿ ಸ್ನಾನ ಮಾಡುವುದಕ್ಕೂ ಇದೆ ಹಲವು ನಿಯಮ..

ಪತಿಯ ಅನುಮತಿ ಇಲ್ಲದೇ, ಪತ್ನಿ ಇಂಥ ಸ್ಥಳಗಳಿಗೆ ಹೋಗಬಾರದು..

ಇಂಥ ವಸ್ತುಗಳನ್ನು ಎಂದಿಗೂ ಖಾಲಿ ಮಾಡಬೇಡಿ..

- Advertisement -

Latest Posts

Don't Miss