Sunday, September 8, 2024

Latest Posts

ಕಾಲೇಜು ಮತ್ತು ಆಫೀಸಿನಲ್ಲಿ ಮಹಿಳಾ ದಿನಾಚರಣೆಯನ್ನು ಈ ರೀತಿ ಸೆಲೆಬ್ರೇಟ್ ಮಾಡಬಹುದು ನೋಡಿ..

- Advertisement -

ಹೆಣ್ಣೆಂದರೆ ಹಲವು ಕೆಲಸಗಳನ್ನು ನಿಭಾಯಿಸುವ, ಹಲವು ಪಾತ್ರಗಳನ್ನು ನಿಭಾಯಿಸುವ ಜೀವ. ಆಕೆ ತಾಯಿ, ಅಕ್ಕ, ತಂಗಿ, ಪತ್ನಿ, ಮಗಳು, ಸೊಸೆ ಈ ಎಲ್ಲ ಸ್ಥಾನವನ್ನೂ ನಿಭಾಯಿಸುವವಳು. ಅವಳಿಗಾಗಿಯೇ ಮಹಿಳಾ ದಿನಾಚರಣೆಯನ್ನ ಮೀಸಲಿಡಲಾಗಿದೆ. ಮಾರ್ಚ್ 8ರಂದು ಮಹಿಳಾ ದಿನಾಚರಣೆ ಆಚರಿಸಲಾಗತ್ತೆ. ಆದ್ರೆ ಹೆಣ್ಣಿಗೆ ಯಾವುದೇ ದಿನದ ಅವಶ್ಯಕತೆ ಇಲ್ಲ. ಆಕೆಯನ್ನ ನಾವೆಂದಿಗೂ ಗೌರವಿಸಬೇಕು. ಯಾಕಂದ್ರೆ ಆಕೆ ಯಾವುದೇ ದಿನ ನೋಡದೇ, ತನ್ನ ಮನೆ ಮಂದಿಯ, ಪ್ರೀತಿ ಪಾತ್ರರ ಕಾಳಜಿ ವಹಿಸುತ್ತಾಳೆ.

ಆದರೆ ಈ ಒಂದು ದಿನ ನೀವು ಹೆಣ್ಣು ಮಕ್ಕಳಿಗಾಗಿ ಒಂದು ಚಿಕ್ಕ ಸೆಲೆಬ್ರೇಷನ್ ಮಾಡಬಹುದು. ಹಾಗಾದ್ರೆ ಮಹಿಳಾ ದಿನಾಚರಣೆಯನ್ನ ಕಾಲೇಜು ಮತ್ತು ಆಫೀಸಿನಲ್ಲಿ ಯಾವ ರೀತಿ ಆಚರಿಸಬಹುದು ಅನ್ನೋ ಬಗ್ಗೆ ನಾವಿಂದು ಹೇಳಲಿದ್ದೇವೆ..

ಈ ರೀತಿ ಸುಲಭವಾಗಿ ನೀವು ತೂಕ ಇಳಿಸಿಕೊಳ್ಳಬಹುದು ನೋಡಿ..

ಮೊದಲನೇಯದಾಗಿ ಎಲ್ಲ ಹೆಣ್ಣು ಮಕ್ಕಳಿಗೂ ಒಂದೇ ಬಣ್ಣದ ಬಟ್ಟೆ ಧರಿಸಿ ಬರಲು ಹೇಳಿ. ಪಿಂಕ್ ಅಂದ್ರೆ ಹೆಣ್ಣು ಮಕ್ಕಳಿಗೆ ಇಷ್ಟದ ಬಣ್ಣ. ಹಾಗಾಗಿ ಅದೇ ಬಣ್ಣದ ಬಟ್ಟೆ ಹಾಕಿಕೊಂಡು ಬರಲು ಹೇಳಿದ್ರೂ ಓಕೆ..

ಎರಡನೇಯದಾಗಿ ಹೆಣ್ಣು ಮಕ್ಕಳ ಬಗ್ಗೆ ಒಂದು ವೀಡಿಯೋ ಮಾಡಿ. ಈಗಿನ ಕಾಲದಲ್ಲಿ ವೀಡಿಯೋ ಮಾಡೋದು ದೊಡ್ಡ ವಿಷಯವೇ ಅಲ್ಲ. ಆ ವೀಡಿಯೋದಲ್ಲಿ ಹೆಣ್ಣು ಮಕ್ಕಳ ಶಿಕ್ಷಣ, ಅವರು ಎದುರಿಸುವ ಸವಾಲುಗಳು, ಅವರ ಶೌರ್ಯ, ಅವರ ಸಾಧನೆ ಎಲ್ಲವನ್ನೂ ತೋರಿಸಿ. ಬಡತನ ಎದುರಿಸಿ, ಛಲದಿಂದ ಮುಂದೆ ಬಂದವರ ಬಗ್ಗೆ ಹೇಳಿ.

ಮೂರನೇಯದಾಗಿ ಸಾಧಕಿಯರಿಂದ ಚಿಕ್ಕ ಸ್ಪೀಚ್ ಮಾಡಿಸಿ. ಅದರಲ್ಲಿ ಅವರು, ಹೇಗೆ ಕಷ್ಟಗಳನ್ನು ಎದುರಿಸಿ, ಸಾಧನೆಯನ್ನು ಮಾಡಿದರು ಎಂಬ ಬಗ್ಗೆ ವಿವರಿಸಲು ಹೇಳಿ. ಇದರಿಂದ ಕಾಲೇಜಿನ ಹೆಣ್ಣು ಮಕ್ಕಳಿಗೆ ಅಥವಾ ಆಫೀಸಿನಲ್ಲಿ ಕೆಲಸ ಮಾಡುವ ಹೆಣ್ಣು ಮಕ್ಕಳಿಗೆ ಸ್ಪೂರ್ತಿ ಸಿಗುತ್ತದೆ.

ಸ್ನಾನಕ್ಕೆ ಸೋಪ್ ಬಳಸುವಾಗ ಇಂಥ ತಪ್ಪು ಮಾಡಬೇಡಿ..

ನಾಲ್ಕನೇಯದಾಗಿ ನಿಮ್ಮ ಕಚೇರಿಯ ಮಹಿಳೆಯರಿಗೆ ಟ್ಯಾಲೆಂಟ್‌ ತೋರಿಸುವ ಅವಕಾಶ ಕೊಡಿ. ನೃತ್ಯ, ಸಂಗೀತ, ಕುಕಿಂಗ್‌, ಪೇಯ್ಟಿಂಗ್, ಹೀಗೆ ತಮ್ಮಲ್ಲಿರುವ ಟ್ಯಾಲೆಂಟ್ ತೋರಿಸುವ ಅವಕಾಶ ಕೊಡಿ. ಸ್ಪರ್ಧೆಗಳನ್ನ ಇಡಿ. ಆಟಗಳನ್ನ ಆಡಿಸಿ. ಒಟ್ಟಿನಲ್ಲಿ ಈ ಕಾರ್ಯಕ್ರಮ ಅವರ ಮನಸ್ಸಿಗೆ ಖುಷಿ ಕೊಡುವ ಹಾಗೆ ಇರಬೇಕು.

ಐದನೇಯದಾಗಿ ರಾಜ್ಯಮಟ್ಟ, ರಾಷ್ಟ್ರೀಯ, ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ ಸಾಧಕಿಯರ ಬಗ್ಗೆ ಪ್ರಶ್ನೆ ಕೇಳಿ. ಇದರಲ್ಲಿ ಹೆಚ್ಚು ಪ್ರಶ್ನೆಗಳಿಗೆ ಉತ್ತರಿಸಿ ಗೆದ್ದವರಿಗೆ, ಬಹುಮಾನ ಕೊಡಿ. ಇದರಿಂದ ಎಲ್ಲರ ನಾಲೆಜ್ ಬೆಳೆಯುತ್ತೆ. ಇಷ್ಟೇ ಅಲ್ಲದೇ, ನೀವು ಮಹಿಳೆಯರ ಬಗ್ಗೆ ನಿಬಂಧ ಬರೆಯುವ ಸ್ಪರ್ಧೆಯನ್ನೂ ರಚಿಸಬಹುದು. ಜೊತೆಗೆ ಒಂದಿಷ್ಟು ಸ್ನ್ಯಾಕ್ಸ್ ಸವಿದು, ಕಾರ್ಯಕ್ರಮವನ್ನ ಪೂರ್ಣ ಮಾಡಿ.

- Advertisement -

Latest Posts

Don't Miss