Health Tips: ಕಲೋಂಜಿ ನೋಡಲು ಕಪ್ಪು ಎಳ್ಳಿನ ರೀತಿ ಇರುತ್ತದೆ. ಇದನ್ನು ಕೆಲವರು ಅಡುಗೆಗೂ ಬಳಸುತ್ತಾರೆ. ಇದರ ಎಣ್ಣೆ ತಯಾರಿಸಿ, ಕೂದಲಿಗೆ ಮಸಾಜ್ ಮಾಡಿದ್ರೆ, ಕೂದಲು ಗಟ್ಟಿಮುಟ್ಟಾಗಿ, ಕಪ್ಪಾಗಿ ಇರುತ್ತದೆ. ಮುಟ್ಟಿನ ಸಮಸ್ಯೆ, ಪಿಸಿಓಡಿ ಸಮಸ್ಯೆ ಇದ್ದಲ್ಲಿ ಕಲೋಂಜಿಯನ್ನು ಸೇವಿಸುವುದರಿಂದ, ಆ ಸಮಸ್ಯೆಗಳಿಗೆಲ್ಲ ಮುಕ್ತಿ ಸಿಗುತ್ತದೆ. ಹಾಗಾದ್ರೆ ಹೆಣ್ಣು ಮಕ್ಕಳು ಯಾವ ರೀತಿ ಕಲೋಂಜಿಯನ್ನು ಬಳಸಬೇಕು ಅಂತಾ ತಿಳಿಯೋಣ ಬನ್ನಿ..
ಮುಟ್ಟಿನ ಹೊಟ್ಟೇನೋವಿನ ಸಮಸ್ಯೆ ಇದ್ದವರು, ಕಲೋಂಜಿಯನ್ನು ಹುರಿದು ಪುಡಿ ಮಾಡಿಕೊಳ್ಳಿ. ಬೆಳಿಗ್ಗೆ ಮತ್ತು ರಾತ್ರಿ ಅರ್ಧ ಚಮಚ ಪುಡಿಯನ್ನು ನೀರಿನೊಂದಿಗೆ ತೆಗೆದುಕೊಳ್ಳಿ. ಇದು ಉಷ್ಣವಾದ ಪದಾರ್ಥವಾದ ಕಾರಣ, ಇದರ ಸೇವನೆ ಹೆಚ್ಚು ಮಾಡುವುದು ಉತ್ತಮವಲ್ಲ. ವಾರದಲ್ಲಿ ಮೂರು ದಿನ ಇದನ್ನು ತೆಗೆದುಕೊಂಡರೆ ಸಾಕು.
ಇನ್ನು ಕಲೋಂಜಿ ಪುಡಿ, ಪಿಸಿಓಡಿ ಸಮಸ್ಯೆ, ಹಾರ್ಮೋನಲ್ ಇಂಬ್ಯಾಲೆನ್ಸ್ ಸಮಸ್ಯೆಯನ್ನು ಕೂಡ ಸರಿದೂಗಿಸುತ್ತದೆ. ಅಲ್ಲದೇ, ಮಹಿಳೆಯರಲ್ಲಿ ಲೈಂಗಿಕ ಆಸಕ್ತಿ ಇಲ್ಲದಿದ್ದಲ್ಲಿ, ಇದರ ಸೇವನೆಯಿಂದ ಆ ಸಮಸ್ಯೆಗೂ ಪರಿಹಾರ ಸಿಗುತ್ತದೆ. ಇಂಥ ಸಮಸ್ಯೆಗೂ ಕೂಡ ಕಲೋಂಜಿ ಪುಡಿಯನ್ನು ಬೆಳಿಗ್ಗೆ ರಾತ್ರಿ ನೀರಿನೊಂದಿಗೆ ಸೇವಿಸಬೇಕು. ಇನ್ನು ನಿಮಗೆ ಕಲೋಂಜಿ ಸೇವಿಸಿದರೆ, ಅಲರ್ಜಿ ಎಂದಾದಲ್ಲಿ ಈ ಬಗ್ಗೆ ವೈದ್ಯರ ಬಳಿ ವಿಚಾರಿಸಿ, ಬಳಿಕ ಸೇವಿಸುವುದು ಉತ್ತಮ.
ಮನೆ ರುಚಿ ಕೊಡುವ ಐಸ್ಕ್ರೀಮ್ ಟೇಸ್ಟ್ ಮಾಡಬೇಕು ಅಂದ್ರೆ ನೀವು ಇಲ್ಲಿ ಬರ್ಲೇಬೇಕು..
ನಿಮ್ಮ ಸೀರೆಗೆ ತಕ್ಕ ಮ್ಯಾಚಿಂಗ್ ಡಿಸೈನರ್ ಬ್ಲೌಸ್ ಬೇಕಾದಲ್ಲಿ ಈ ಶಾಪ್‌ಗೆ ಭೇಟಿ ಕೊಡಿ..
ಗಂಟಲ ಕಿರಿಕಿರಿಯಾದರೆ ಮನೆಮದ್ದು ಮಾಡುವುದು ಹೇಗೆ..? ಇಲ್ಲಿದೆ ನೋಡಿ ವೈದ್ಯರ ಸಲಹೆ