ಇಂದಿನ ಕಾಲದಲ್ಲಿ ನಾವು ಸೇವಿಸುವ ಆಹಾರದಲ್ಲಿ ಹಲವಾರು ರೀತಿಯ ಕೆಮಿಕಲ್ಸ್ ಬೆರೆತಿರುತ್ತೆ. ಅಕ್ಕಿ- ಬೇಳೆ, ತರಕಾರಿ, ಹಣ್ಣು, ಸೊಪ್ಪು, ತುಪ್ಪ, ಬೆಣ್ಣೆ ಎಲ್ಲವೂ ಕೆಮಿಕಲ್ ಮಯವಾಗಿದೆ. ಇದರಿಂದಲೇ ಕಿಡ್ನಿ ಸಮಸ್ಯೆ, ಹೃದಯ ಸಮಸ್ಯೆ ಬರುತ್ತದೆ. ಹಾಗಾಗಿ ನಾವಿಂದು ಕಿಡ್ನಿ ಆರೋಗ್ಯವಾಗಿಲ್ಲ ಎಂದಲ್ಲಿ ಎಂಥ ಲಕ್ಷಣಗಳು ಕಂಡುಬರುತ್ತದೆ ಎಂದು ಹೇಳಲಿದ್ದೇವೆ.
ಮೊದಲನೇಯ ಲಕ್ಷಣ, ನಿಮ್ಮ ಮೂತ್ರದ ಕಲರ್ ಗಾಢವಾಗುತ್ತದೆ. ಮತ್ತು ವಾಸನೆ ಹೆಚ್ಚುತ್ತದೆ. ನಿಮ್ಮ ಆರೋಗ್ಯ ಹಾಳಾಗಿದ್ದರೆ ಅಥವಾ ದೇಹದಲ್ಲಿ ಉಷ್ಣತೆ ಹೆಚ್ಚಿದ್ದರೆ, ಮೂತ್ರದ ಬಣ್ಣ ಗಾಢ ಹಳದಿಯಾಗಿರುತ್ತದೆ. ಆದರೆ ನೀವು ತಂಪಾದ ಆಹಾರವನ್ನು ಸೇವಿಸಿದಾಗ, ಅದು ನಾರ್ಮಲ್ ಆಗುತ್ತದೆ. ಆದ್ರೆ ನಿಮ್ಮ ಕಿಡ್ನಿ ಆರೋಗ್ಯ ಹಾಳಾದಾಗ, ನಿಮ್ಮ ಮೂತ್ರದ ಬಣ್ಣ ಗಾಢವಾಗಿಯೇ ಇರುತ್ತದೆ. ಅದಕ್ಕೆ ಸಿಗಬೇಕಾದ ಚಿಕಿತ್ಸೆ ಸಿಗುವವರೆಗೂ ಅದು ಸಾಮಾನ್ಯ ಸ್ಥಿತಿಗೆ ಮರಳುವುದಿಲ್ಲ. ಹಾಗಾಗಿ ನೀವೆಷ್ಟೇ ತಂಪಾದ ಆಹಾರ ತಿಂದರೂ, ನಿಮ್ಮ ಮೂತ್ರದ ಬಣ್ಣ ಸರಿಯಾಗದಿದ್ದಲ್ಲಿ, ಹೆಚ್ಚು ವಾಸನೆಯುಕ್ತವಾಗಿದ್ದಲ್ಲಿ, ಖಂಡಿತ ವೈದ್ಯರ ಬಳಿ ವಿಚಾರಿಸಿ, ಚಿಕಿತ್ಸೆ ಪಡೆಯಿರಿ.
ಎರಡನೇಯ ಲಕ್ಷಣ, ಇಡೀ ದೇಹದಲ್ಲಿ ತುರಿಕೆಯಾಗುವುದು. ನೀವು ಪ್ರತಿದಿನ ಸ್ನಾನ ಮಾಡಿಯೂ, ಸ್ವಚ್ಛವಾದ ಬಟ್ಟೆ ಧರಿಸಿಯೂ, ಒಳ್ಳೆಯ ಮನೆಯಲ್ಲೇ ವಾಸ ಮಾಡಿದರೂ, ನಿಮ್ಮ ದೇಹದಲ್ಲಿ ತುರಿಕೆಯಾಗುತ್ತಿದ್ದರೆ, ಅದು ಕೂಡ ಕಿಡ್ನಿ ಆರೋಗ್ಯ ಸರಿ ಇಲ್ಲವೆಂದು ತೋರಿಸುತ್ತದೆ. ನೀವು ತುರಿಕೆಯಾದಾಗ, ತೆಂಗಿನ ಎಣ್ಣೆ, ತುರಿಕೆ ಪೌಡರ್ ಈ ಎಲ್ಲವನ್ನೂ ವೈದ್ಯರ ಪರ್ಮಿಷನ್ ನೊಂದಿಗೆ ಬಳಸಿ ನೋಡಿ. ಆದರೂ ಇದು ಹೋಗಲಿಲ್ಲವೆಂದಲ್ಲಿ, ನಿಮ್ಮ ಕಿಡ್ನಿಯನ್ನೊಮ್ಮೆ ಪರೀಕ್ಷಿಸಿಕೊಳ್ಳಿ.
ಮೂರನೇಯ ಲಕ್ಷಣ, ಮುಖ ಪದೇ ಪದೇ ಊದಿಕೊಳ್ಳುವುದು. ಕೆಲವರಿಗೆ ಕಣ್ಣಿನ ಕೆಳ ಭಾಗದಲ್ಲಿ ನೀರು ತುಂಬಿಕೊಂಡ ರೀತಿ ಇರುತ್ತದೆ. ಕಣ್ಣು ಉಬ್ಬಿದಂತೆ ಇರುತ್ತದೆ. ಅಂಥವರು ಒಮ್ಮೆ ಕಿಡ್ನಿ ಪರೀಕ್ಷೆ ಮಾಡಿಕೊಳ್ಳುವುದು ಉತ್ತಮ. ಯಾಕಂದ್ರೆ ಇದು ಆರೋಗ್ಯಕರ ಲಕ್ಷಣವಲ್ಲ. ಯಾಕಂದ್ರೆ ನಿಮ್ಮ ಕಿಡ್ನಿಯಿಂದ ಪ್ರೋಟೀನ್ ಲೀಕ್ ಆಗುತ್ತಿದ್ದರೆ, ಅಥವಾ ದೇಹದಲ್ಲಿರುವ ಕಸ ಕಿಡ್ನಿಯಲ್ಲಿ ಉಳಿದುಕೊಂಡರೆ ಕಿಡ್ನಿಯ ಆರೋಗ್ಯ ಹಾಳಾಗುತ್ತದೆ. ಮತ್ತು ಕಣ್ಣು, ಕಾಲು, ಪಾದಗಳಲ್ಲಿ ನೀರು ತುಂಬಿಕೊಳ್ಳುತ್ತದೆ.
ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯನ್ನು ಮುಂದಿನ ಭಾಗದಲ್ಲಿ ತಿಳಿಯೋಣ..