Health Tips: ನಾವು ಬರೀ ಮುಖದ ಸೌಂದರ್ಯಕ್ಕಷ್ಟೇ ಗಮನ ಕೊಡುವುದಲ್ಲ. ಕೈ ಕಾಲು, ಕೂದಲು, ಕುತ್ತಿಗೆ, ಉಗುರು ಎಲ್ಲದರ ಸೌಂದರ್ಯಕ್ಕೂ ಮಾನ್ಯತೆ ಕೊಡಬೇಕಾಗುತ್ತದೆ. ಆಗಲೇ ನಾವು ಸಂಪೂರ್ಣವಾಗಿ ಚೆಂದಗಾಣಿಸಲು ಸಾಧ್ಯವಾಗೋದು. ಹಾಗಾಗಿ ನಾವಿಂದು ಕುತ್ತಿಗೆಯ ಭಾಗ ಕಪ್ಪಾಗಿದ್ದಲ್ಲಿ ಯಾವ ಹೋಮ್ ರೆಮಿಡಿ ಬಳಸಬೇಕು ಅಂತಾ ತಿಳಿಯೋಣ ಬನ್ನಿ..
ಒಂದು ಟೇಬಲ್ ಸ್ಪೂನ ಕಡಲೆ ಹಿಟ್ಟು, ಅರ್ಧ ಟೇಬಲ್ ಸ್ಪೂನ್ ಅರಿಶಿನ, ಅರ್ಧ ಸ್ಪೂನ್ ನಿಂಬೆರಸ ಮತ್ತು ಎರಡರಿಂದ ಮೂರು ಹನಿ ರೋಸ್ ವಾಟರ್ ತೆಗೆದುಕೊಂಡು ಮಿಕ್ಸ್ ಮಾಡಿ. ಇದನ್ನು ಕುತ್ತಿಗೆ ಬಳಿ ಕಪ್ಪಗಿರುವ ಭಾಗಕ್ಕೆ ಹಚ್ಚಿ 45 ನಿಮಿಷ ಬಿಡಿ. ಬಳಿಕ ಉಗುರು ಬೆಚ್ಚಗಿನ ನೀರಿನಿಂದ ಕುತ್ತಿಗೆಯ ಭಾಗವನ್ನು ಕ್ಲೀನ್ ಮಾಡಬೇಕು.
ನೀವು ಈ ಮಿಶ್ರಣವನ್ನು ನೀವು ಕುತ್ತಿಗೆಗೆ ಹಚ್ಚುವ ಮುನ್ನ, ಕೈ ಅಥವಾ ಕಾಲಿಗೆ ಹಚ್ಚಿ ಪ್ಯಾಚ್ ಟೆಸ್ಟ್ ಮಾಡಿ. ಯಾವುದೇ ಅಲರ್ಜಿಯಾಗದಿದ್ದಲ್ಲಿ, ಬಳಿಕ ಇದನ್ನು ಕುತ್ತಿಗೆಗೆ ಅಪ್ಲೈ ಮಾಡಿ.




