Saturday, October 19, 2024

Latest Posts

ಪತ್ನಿ ಇಂಥ ಕೆಲಸಗಳನ್ನು ಮಾಡಿದ್ರೆ, ಪತಿ ಜೀವನದಲ್ಲಿ ಸಫಲನಾಗುತ್ತಾನೆ..

- Advertisement -

Spiritual: ಓರ್ವ ವಿವಾಹಿತ ಹೆಣ್ಣನ್ನು ಆ ಮನೆಯ ಲಕ್ಷ್ಮೀ ಎಂದು ಹೇಳಲಾಗುತ್ತದೆ. ಹಾಗಾಗಿ ಆಕೆಗೆ ಲಕ್ಷ್ಮೀಯಂಥ ಗುಣವಿದ್ದರೆ, ಪತಿಯು ಜೀವನದಲ್ಲಿ ಸಫಲನಾಗುತ್ತಾನೆ. ಗರುಡ ಪುರಾಣದ ಪ್ರಕಾರ, ಹೆಣ್ಣಿಗೆ ಕೆಲವು ಗುಣಗಳಿದ್ದರೆ, ಪತಿಯ ಏಳಿಗೆಯಾಗುವುದಲ್ಲದೇ, ಪತಿಯ ಮನೆಯವರೆಲ್ಲ ಖುಷಿಯಾಗಿ ಇರುತ್ತಾರೆ. ಹಾಗಾದರೆ ಆ ಗುಣಗಳು ಯಾವುದು ಅಂತಾ ತಿಳಿಯೋಣ ಬನ್ನಿ..

ಮೊದಲನೇಯ ಗುಣ ತಾಳ್ಮೆ. ಯಾವ ಹಣ್ಣಿಗೆ ತಾಳ್ಮೆ ಇರುತ್ತದೆಯೋ, ಅವಳ ಮಾತು ಉತ್ತಮವಾಗಿರುತ್ತದೆ. ಅವಳು ಸದಾ ಸಮಾಧಾನದಿಂದಲೇ ಮಾತನಾಡುತ್ತಾಳೆ. ಅಂಥ ಪತ್ನಿ ಯಾರಿಗೆ ಸಿಗುತ್ತಾಳೋ, ಆ ವ್ಯಕ್ತಿ ಅದೃಷ್ಟಶಾಲಿಯಾಗಿರುತ್ತಾನೆ. ಅಲ್ಲದೇ, ಇಂಥ ಹೆಣ್ಣು ಯಾವ ಮನೆಯಲ್ಲಿ ಇರುತ್ತಾಳೋ, ಆ ಮನೆಯವರೆಲ್ಲ ಇವಳೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿರುತ್ತಾರೆ.

ಎರಡನೇಯ ಗುಣ ಹಣ ಉಳಿಸುವ ಗುಣ. ಇಂದಿನ ಕಾಲದಲ್ಲೂ ನಿಮಗೆ ಹಣ ಉಳಿಸಿ, ಮನೆಯವರ ಕಷ್ಟಕಾಲಕ್ಕೆ ಸಹಾಯಕ್ಕೆ ಬರುವ ಪತ್ನಿ ಸಿಕ್ಕರೆ, ಅದು ನಿಮ್ಮ ಅದೃಷ್ಟವೇ ಸರಿ. ಮೊದಲೆಲ್ಲ ಹೆಣ್ಣು ಮಕ್ಕಳು, ತಮಗೆ ಸಿಕ್ಕ ದುಡ್ಡಿನಲ್ಲಿ, ಅಥವಾ ಯಾವಾಗಲಾದರೂ ಪತಿ ಕೊಟ್ಟ ದುಡ್ಡನ್ನೇ ಸಾಸಿವೆ ಡಬ್ಬದಲ್ಲಿಟ್ಟು, ಮನೆಯವರ ಕಷ್ಟಕಾಲಕ್ಕೆ ಅದನ್ನು ಕೊಡುತ್ತಿದ್ದರು. ಆದರೆ ಇಂದಿನ ಯುಗದಲ್ಲಿ ಹೆಣ್ಣು ಮಕ್ಕಳಿಗೆ ಖರ್ಚಿಗೆ ಸಾವಿರ ದಾರಿಗಳಿದೆ. ಆದರೂ ಅವಶ್ಯಕತೆ ಮೀರಿ ಖರ್ಚು ಮಾಡದೇ, ಹಣ ಉಳಿಸಿ, ಮನೆಯವರ ಕಷ್ಟಕ್ಕೆ ಸಹಾಯವಾಗುವ ಹೆಣ್ಣು, ಆ ಮನೆಯ ಅದೃಷ್ಟ ದೇವತೆಯೇ ಸರಿ.

ಯಾರದ್ದಾದರೂ ಆರೋಗ್ಯ ಹಾಳಾದರೆ, ಅಪಘಾತವಾದಾಗ, ಶಾಲೆಯ ಫೀಸ್ ಕಟ್ಟಲು ಹಣವಿಲ್ಲದಿದ್ದಾಗ, ಸಾಲಬಾಧೆ ಇದ್ದಾಗ, ಇಂಥ ಸಮಯದಲ್ಲಿ ಸಹಾಯಕ್ಕೆ ಬರುವುದೇ, ಹೆಣ್ಣು ಕೂಡಿಟ್ಟ ದುಡ್ಡು. ಹಾಗಾಗಿ ಪತಿಯಾದವನು, ಪತ್ನಿ ದುಡಿಮೆಗೆ ಸಹಕಾರ ಕೊಡಬೇಕು.

ಯಾವ ಹೆಣ್ಣು ಮನೆಕೆಲಸದಲ್ಲಿ, ಪತಿ, ಮಕ್ಕಳು, ಹಿರಿಯರ ಸೇವೆ ಮಾಡುವುದರಲ್ಲಿ ಮುಂದಿರುತ್ತಾಳೋ, ಅಂಥ ಹೆಣ್ಣು ಮಕ್ಕಳಿರುವ ಮನೆಗೆ ಎಂದಿಗೂ ಒಳ್ಳೆಯದಾಗುತ್ತದೆ. ಅಲ್ಲದೇ, ಪತ್ನಿಯಾದವಳು, ಪತಿಯ ವೃದ್ಧಿಗಾಗಿ, ಪೂಜೆ, ವೃತಗಳನ್ನು ಮಾಡಿದರೆ, ಪತಿಗೆ ಯಶಸ್ಸು ಖಚಿತ. ಇಂಥ ಗುಣಗಳಿರುವ ಪತ್ನಿ ನಿಮಗೆ ಸಿಕ್ಕಿದರೆ, ಆಕೆಯನ್ನು ಸದಾ ಖುಷಿಯಾಗಿ ಇಡಿ.

ಮುಟ್ಟಾದ ಹೆಣ್ಣು ಮಕ್ಕಳು ದೇವರ ಕಾರ್ಯದಲ್ಲಿ ಭಾಗಿಯಾಗಬಾರದು ಅಂತಾ ಹೇಳಲು ಕಾರಣವೇನು..?

ಇದು ಶ್ರೀವಿಷ್ಣು ಪಾರ್ವತಿಯ ಅಣ್ಣನಾದ ಕಥೆ..

ಪ್ರತೀ ವರ್ಷ ಪುರಿ ಜಗನ್ನಾಥನಿಗೆ ಅನಾರೋಗ್ಯವಾಗುತ್ತದೆ.. ಇದರ ಹಿಂದಿನ ಕಥೆ ಇಲ್ಲಿದೆ ನೋಡಿ..

- Advertisement -

Latest Posts

Don't Miss