Health Tips: ಹೆಣ್ಣು ಮಕ್ಕಳಿಗೆ ಸಂಬಂಧಿಸಿದ ಆರೋಗ್ಯ ಸಮಸ್ಯೆಗಳ ಬಗ್ಗೆ ವೈದ್ಯೆಯಾದ ಚಂದ್ರಿಕಾ ಆನಂದ ನಿಮಗೆ ಹಲವು ವಿಷಯಗಳನ್ನು ವಿವರಿಸಿದ್ದಾರೆ. ಅದೇ ರೀತಿ ಇಂದು, ಬಾಣಂತಿಯರ ವರ್ತನೆಯಲ್ಲಿ ಬದಲಾವಣೆ ಬಂದರೆ ಏನು ಮಾಡಬೇಕು ಅಂತಾ ವಿವರಿಸಿದ್ದಾರೆ.
ಹೆಚ್ಚಿನ ಕಡೆ ಬಾಣಂತಿಯರು ಡಿಪ್ರೆಶನ್‌ಗೆ ಒಳಗಾಗುತ್ತಾರೆ. ಇದಕ್ಕೆ ಹಲವು ಕಾರಣಗಳಿರುತ್ತದೆ. ಇದ್ದಕ್ಕಿದ್ದಂತೆ ದೇಹದ ತೂಕ ಹೆಚ್ಚಾಗುತ್ತದೆ. ಅಲ್ಲದೇ, ಜವಾಬ್ದಾರಿ ಬಂದಿದೆ. ತಾನು ಉತ್ತಮ ತಾಯಿ ಆಗುತ್ತೆನೋ ಇಲ್ಲವೋ, ಅಥವಾ ಕೆಲವರು ಜಾಬ್ ವಿಚಾರವಾಗಿ ಡಿಪ್ರೆಶನ್‌ಗೆ ಹೋಗುತ್ತಾರೆ. ನಾನಿನ್ನು ತಾಯಿಯಾಗಿದ್ದೇನೆ. ನನ್ನ ಖರ್ಚಿಗೆ ಹಣಕ್ಕಾಗಿ ಪತಿಯಲ್ಲಿ ಕೇಳಬೇಕು. ಇನ್ನೆರಡು ವರ್ಷ ದುಡಿಯಲು ಸಾಧ್ಯವಿಲ್ಲ. ಮುಂದೆ ಮನೆಯಲ್ಲಿ ಕೆಲಸಕ್ಕೆ ಕಳುಹಿಸುತ್ತಾರೋ ಇಲ್ಲವೋ..? ಈ ಎಲ್ಲ ಪ್ರಶ್ನೆಗಳು ಸಹ ಬಾಣಂತಿಯನ್ನು ಡಿಪ್ರೆಶನ್‌ಗೆ ಹೋಗುವಂತೆ ಮಾಡುತ್ತದೆ.
ಇನ್ನು ಕೆಲವರಿಗೆ ಮಕ್ಕಳ ಮೇಲೆ ಪ್ರೀತಿಯೇ ಇರುವುದಿಲ್ಲ. ಅದರಿಂದಾಗಿ ನಾನು ನಾಲ್ಕು ಗೋಡೆ ಮಧ್ಯೆ ಇರಬೇಕಲ್ಲ ಎಂಬ ಕಾರಣಕ್ಕೆ, ಅಥವಾ ಜವಾಬ್ದಾರಿ ಹೆಚ್ಚಿತು ಎಂಬ ಸಿಟ್ಟಿಗೆ, ಮಗು ಅಳುತ್ತಿದ್ದರೂ, ಅದರತ್ತ ನೋಡುವುದಿಲ್ಲ. ಅಥವಾ ಮಗು ಆರೋಗ್ಯವಾಗಿಲ್ಲ ಅಂತಲೋ, ಮಗು ನೋಡಲು ವೀಕ್ ಆಗಿದೆ ಅಂತಲೋ ಯಾರಾದ್ರೂ ಹೇಳಿದ್ರೆ, ಅದಕ್ಕೆ ಅತ್ತು ಬಿಡುವುದು ಹೀಗೆಲ್ಲ ಮಾಡುತ್ತಾರೆ.
ಹಾಗಾಗಿ ಬಾಣಂತಿಯನ್ನು ಕೂಡ, ಮಗುವಿನಂತೆ ನೋಡಿಕೊಳ್ಳಬೇಕು. ಇಲ್ಲವಾದಲ್ಲಿ ಅವರು ಯಾವ ಮಟ್ಟಿಗಿನ ಡಿಪ್ರೆಶನ್‌ಗೆ ಹೋಗುತ್ತಾರೆ ಎಂದರೆ, ಆತ್ಮಹತ್ಯೆ ಮಾಡಿಕೊಳ್ಳುವ ಮಟ್ಟಿಗೆ ಡಿಪ್ರೆಶನ್‌ಗೆ ಹೋಗುತ್ತಾರೆ. ಮಗುವನ್ನು ಕೇರ್‌ಲೆಸ್ ಮಾಡುವುದು, ಊಟ ತಿಂಡಿ ಬಿಡುವುದು, ಮೌನವಾಗಿರುವುದು, ಸುಮ್ಮನೆ ಅಳುತ್ತಲೇ ಇರುವುದು. ಇಂಥ ಲಕ್ಷಗಳು ಕಂಡಲ್ಲಿ, ಆಕೆಯ ಜೊತೆಗೆ ಮಾತನಾಡಿ, ಸಮಸ್ಯೆಗೆ ಪರಿಹಾರ ಹುಡುಕುವುದು ಉತ್ತಮ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ..




