ಬಿಕ್ಕಳಿಕೆ ಇದ್ದಲ್ಲಿ ಎಚ್ಚರ.. ಕಿಡ್ನಿ ಫೇಲ್ ಆಗತ್ತಾ..?

Health Tips: ಬಿಕ್ಕಳಿಕೆ ಬರುವುದು ಸಾಮಾನ್ಯ. ದೇಹದಲ್ಲಿ ನೀರಿನ ಕೊರತೆ ಇದ್ದಾಗ, ಬಿಕ್ಕಳಿಗೆ ಬರತ್ತೆ ಅಂತಾ ಹೇಳಲಾಗುತ್ತದೆ. ಆದರೆ ನೀವು ಬಿಕ್ಕಳಿಕೆಯನ್ನು ನಿರ್ಲಕ್ಷ್ಯ ಮಾಡುವಂತಿಲ್ಲ. ಹಾಗೆ ಮಾಡಿದರೆ ನಿಮ್ಮ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಇನ್ನು ಹೆಚ್ಚು ಬಿಕ್ಕಳಿಕೆ ಬಂದ್ರೆ, ಕಿಡ್ನಿ ಫೇಲ್ ಆಗತ್ತೆ ಅಂತಾ ಹೇಳುತ್ತಾರೆ. ಹಾಗಾದ್ರೆ ಇದು ಸತ್ಯಾನಾ..? ಮಿಥ್ಯಾನಾ ಅಂತಾ ವೈದ್ಯರೇ ವಿವರಿಸಿದ್ದಾರೆ ನೋಡಿ..

ಬಿಕ್ಕಳಿಗೆ ಬಂದಾಗ, ಅದು ನಿಲ್ಲುತ್ತಿಲ್ಲವೆಂದಲ್‌ಲಿ ನೀವು ವೈದ್ಯರ ಬಳಿ ಹೋಗಿ, ಮೊದಲು ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು. ಏಕೆಂದರೆ, ಕಿಡ್ನಿ ಫೇಲ್ ಆದವರಿಗೆ ಹೆಚ್ಚು ಬಿಕ್ಕಳಿಕೆ ಬರುತ್ತದೆ. ಎಂಥ ಬಿಕ್ಕಳಿಕೆ ಎಂದರೆ, ಆ ಬಿಕ್ಕಳಿಕೆ ಒಮ್ಮೆ ಶುರುವಾದರೆ, ಮತ್ತೆ ನಿಲ್ಲುವುದಿಲ್ಲ. ಅಂಥ ಬಿಕ್ಕಳಿಕೆ ಬರುತ್ತದೆ. ಇದು ಕೆಲವೊಮ್ಮೆ ಕಿಡ್ನಿ ಫೆಲ್ಯೂರ್ ಆಗಿರುವ ಸೂಚನೆ ನೀಡುತ್ತದೆ.

ಇನ್ನು ನಿಮಗೆ ಬಿಕ್ಕಳಿಕೆ ಬರುತ್ತಿದ್ದರೆ, ನೀರು ಕುಡಿಯಬೇಕು. ನೀರು ಕುಡಿದ ತಕ್ಷಣ ಬಿಕ್ಕಳಿಗೆ ನಿಲ್ಲದಿದ್ದಲ್ಲಿ, ಬೇರೆ ಮನೆ ಮದ್ದು ಮಾಡಬಹುದು. ಆದರೆ ಏನೇ ಮಾಡಿದರೂ ಬಿಕ್ಕಳಿಕೆ ನಿಲ್ಲದಿದ್ದಲ್ಲಿ, ವೈದ್ಯರ ಬಳಿ ಹೋಗಿ ಪರೀಕ್ಷಿಸಿಕೊಳ್ಳುವುದು ಉತ್ತಮ. ಈ ಬಗ್ಗೆ ಇನ್ನಷ್ಟು ಮಾಹಿತಿಗಾಗಿ ವೀಡಿಯೋ ನೋಡಿ..

About The Author