Spiritual: ಒಂದು ಮನೆಯಲ್ಲಿ ಸದಾ ನೆಮ್ಮದಿ, ಸುಖ, ಶಾಂತಿ ಇದ್ದರೆ, ಆ ಮನೆಯಲ್ಲಿ ಸಕಾರಾತ್ಮಕತೆ ತುಂಬಿ ತುಳುಕುತ್ತಿದೆ ಎಂದರ್ಥ. ಅದೇ ಒಂದು ಮನೆಯಲ್ಲಿ ಕಾರಣವಿಲ್ಲದೇ, ಪದೇ ಪದೇ ಜಗಳ, ಅಶಾಂತಿ, ದುಃಖವಿದೆ ಎಂದರೆ, ಆ ಮನೆಯಲ್ಲಿ ನಕಾರಾತ್ಮಕ ಶಕ್ತಿಯ ಪ್ರಭಾವ ಹೆಚ್ಚಿದೆ ಎಂದರ್ಥ. ಹಾಗಾದ್ರೆ ಮನೆಯಲ್ಲಿ ನಕಾರಾತ್ಮಕತೆ ಇದ್ದರೆ ಎಂಥ ಸೂಚನೆ ಸಿಗುತ್ತದೆ ಎಂದು ತಿಳಿಯೋಣ ಬನ್ನಿ..
ಯಾವ ಮನೆಯಲ್ಲಿ ನಕಾರಾತ್ಮಕ ಶಕ್ತಿ ಇರುತ್ತದೆಯೋ, ಅಲ್ಲಿ ಪದೇ ಪದೇ ಜಗಳವಾಗುತ್ತದೆ. ಆ ಮನೆ ಜನರ ಆರೋಗ್ಯ ಪದೇ ಪದೇ ಹದಗೆಡುತ್ತದೆ. ಮನೆಯೊಡೆಯ ಯಾವಾಗಲೂ ಕೋಪದಿಂದಲೇ ಇರುತ್ತಾನೆ. ಆ ಮನೆಯಲ್ಲಿ ಇರಲು ಇಷ್ಟವೇ ಆಗುವುದಿಲ್ಲ. ಎಲ್ಲಾದರೂ ಹೊರಗಡೆ ಹೋದರೆ, ಮತ್ತೆ ಮನೆಗೆ ಹೋಗುವುದೇ ಬೇಡ. ಹೊರಗೇ ಇದ್ದು ಬಿಡೋಣ ಎನ್ನಿಸುತ್ತದೆ.
ಇನ್ನು ಮನೆಯಲ್ಲಿ ಪದೇ ಪದೇ ಜಗಳವಾಗುತ್ತದೆ. ಯಾವ ರೀತಿಯ ಜಗಳವೆಂದರೆ, ಸಣ್ಣ ಪುಟ್ಟ ವಿಚಾರಕ್ಕೂ ಹೊಡೆದಾಡಿಕೊಳ್ಳುವಂಥ ಜಗಳವಾಗುತ್ತದೆ. ಆ ಮನೆಯಲ್ಲಿ ಎಲ್ಲರೂ ಸದಾ ಸಿಟ್ಟಿನಿಂದ, ಬೇಸರದಿಂದಲೇ ಇರುತ್ತಾರೆ. ಪ್ರತಿದಿನ ಕಲಹ, ಕಣ್ಣೀರಿಡುವ ಪರಿಸ್ಥಿತಿ ಬರುತ್ತದೆ. ಇದೆಲ್ಲ ನಕಾರಾತ್ಮಕ ಶಕ್ತಿ ನಿಮ್ಮ ಮನೆಯಲ್ಲಿ ಇದೆ ಎನ್ನುವ ಸೂಚನೆಯಾಗಿದೆ. ಏಕೆಂದರೆ ಪ್ರೇತಗಳಿಗೆ, ಕಲಹವೆಂದರೆ ಬಹು ಪ್ರೀತಿಯಂತೆ.
ಆರ್ಥಿಕ ಪರಿಸ್ಥಿತಿ ಹದಗೆಡುತ್ತದೆ. ಹಣ ನೀರಿನಂತೆ ಪೋಲಾಗುತ್ತದೆ. ಖರ್ಚು ಹೆಚ್ಚಾಗುತ್ತದೆ. ಆದಾಯ ಬರುವುದು ಕ್ರಮೇಣ ನಿಲ್ಲುತ್ತದೆ. ಮನೆ ಜನರ ಆರೋಗ್ಯ ಹಾಳಾಗುತ್ತದೆ. ಅನಾರೋಗ್ಯದ ಚಿಕಿತ್ಸೆಗಾಗಿಯೇ ಹಣ ಖರ್ಚಾಗುತ್ತದೆ. ಮನೆ ಜನರಲ್ಲಿ ಕೆಟ್ಟ ಯೋಚನೆಗಳು ಬರುತ್ತದೆ. ಕಾರಣವಿಲ್ಲದೇ, ಆತ್ಮಹತ್ಯೆ ಮಾಡಿಕೊಳ್ಳುವ ವಿಚಾರ ಅಥವಾ ಹತ್ಯೆ ಮಾಡುವ ವಿಚಾರಗಳೆಲ್ಲ ಬರುತ್ತದೆ. ಇದು ನಕಾರಾತ್ಮಕ ಶಕ್ತಿ ಮನೆಯಲ್ಲಿರುವ ಸೂಚನೆಯಾಗಿದೆ.
ಅಣ್ಣ- ತಂಗಿಯನ್ನ ವಿವಾಹವಾಗಲು ಏಕೆ ಸಾಧ್ಯವಿಲ್ಲ..? ಇದು ಅಧರ್ಮಿ ಅಣ್ಣ- ತಂಗಿಯ ಮದುವೆ ಕಥೆ..
ಓರ್ವ ಮಹಿಳೆಗೆ ಬೇಕೇ ಬೇಕು ಈ 4 ಖುಷಿ.. ಇಲ್ಲದಿದ್ದರೆ ಆಕೆಯ ಜೀವನ ವ್ಯರ್ಥ..