Spiritual Story: ನಾವು ಈ ಮೊದಲು ಕೂಡ ನಿಮಗ ಯಾವ ಕನಸು ಬಿದ್ದರೆ ಏನರ್ಥ ಅನ್ನುವ ಬಗ್ಗೆ ವಿವರಿಸಿದ್ದೇವೆ. ನಾವು ಮಲಗುವುದಷ್ಟೇ ನ್ಮಮ ಕೈಯಲ್ಲಿರುತ್ತದೆ. ಆದರೆ ನಮಗೆ ಬೀಳುವ ಕನಸ್ಸಿನ ಬಗ್ಗೆ ನಮಗೆ ಅರಿವಿರುವುದಿಲ್ಲ. ಅದೇ ರೀತಿ ನಮ್ಮ ಅದೃಷ್ಟ ಖುಲಾಯಿಸುವಂತಿದ್ದರೆ, ಅಥವಾ ಆರ್ಥಿಕ ಲಾಭವಾಗುವಂತಿದ್ದರೆ, ನಮ್ಮ ಕನಸಿನಲ್ಲಿ ಕೆಲ ವಸ್ತುಗಳು ಬರುತ್ತದೆ. ಹಾಗಾದ್ರೆ ನಮ್ಮ ಕನಸಿನಲ್ಲಿ ಏನು ಬಂದರೆ ಆರ್ಥಿಕ ಲಾಭವಾಗುತ್ತದೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಹೂವುಗಳು. ನಿಮ್ಮ ಕನಸಿನಲ್ಲಿ ಅರಳಿದ ಹೂವುಗಳು ಕಂಡರೆ, ಲಕ್ಷ್ಮೀ ದೇವಿಯ ಕೃಪೆ ನಿಮ್ಮ ಮೇಲಾಗುತ್ತದೆ ಎಂದರ್ಥ. ಇದರಿಂದ ನಿಮ್ಮ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ. ಹಣಕಾಸಿನ ಸಮಸ್ಯೆ ಕೊನೆಗೊಳ್ಳುತ್ತದೆ ಎಂದರ್ಥ.
ಹಣ್ಣು. ಹುಳವಿರದ, ಕೊಳೆಯದ, ಉತ್ತಮವಾದ ಹಣ್ಣುಗಳು ನಿಮ್ಮ ಕನಸಿನಲ್ಲಿ ಬಂದರೆ, ನಿಮ್ಮ ಅದೃಷ್ಟ ಖುಲಾಯಿಸಲಿದೆ ಎಂದರ್ಥ. ಹಲವು ದಿನಗಳಿಂದ ಉಳಿದಿದ್ದ ಕೆಲಸ, ಪರಿಪೂರ್ಣವಾಗಲಿದೆ ಎಂದರ್ಥ.
ಭಕ್ಷ್ಯ ಭೋಜನ. ರುಚಿ ರುಚಿಯಾದ ಭಕ್ಷ್ಯ ಭೋಜನ ನಿಮ್ಮ ಕನಸಿನಲ್ಲಿ ಬಂದರೆ, ಧನಲಾಭವಾಗಲಿದೆ ಎಂದರ್ಥ. ಆದರೆ ಆ ಭೋಜನವನ್ನು ನೀವು ತಿನ್ನುವಂತಿಲ್ಲ, ಹಾಗೇನಾದರೂ ಕನಸಿನಲ್ಲಿ ನೀವು ಭಕ್ಷ್ಯ ಭೋಜನ ಸವಿಯುವಂತೆ ಕನಸು ಬಿದ್ದರೆ, ಅನಾರೋಗ್ಯಕ್ಕೀಡಾಗುತ್ತೀರಿ ಎಂದರ್ಥ.
ದೇವರ ದರ್ಶನ. ಕನಸಿನಲ್ಲಿ ದೇವರು ದರ್ಶನ ಕೊಟ್ಟರೆ, ನಿಮ್ಮ ಆರ್ಥಿಕ ಸಂಕಷ್ಟ ಪರಿಹಾರವಾಗಲಿದೆ ಎಂದರ್ಥ. ಯಾರಾದರೂ ಕನಸಿಗಾಗಿ ಸಂದರ್ಶನ ನೀಡಿದ್ದರೆ, ಅಂಥವರಿಗೆ ಕನಸಿನಲ್ಲಿ ದೇವರ ದರ್ಶನವಾದರೆ, ಆ ಕೆಲಸ ಪ್ರಾಪ್ತಿಯಾಗುವ ಸಾಧ್ಯತೆ ಇರುತ್ತದೆ. ಅಥವಾ ಹಣಕಾಸಿನ ಸಮಸ್ಯೆ ದೂರವಾಗುವ ಎಲ್ಲಾ ಲಕ್ಷಣಗಳಿರುತ್ತದೆ.
ಮನೆ ಬಾಗಿಲಲ್ಲಿ ನಿಂತ ಗೋವಿನ ದರ್ಶನ. ಗೋವಿಗೆ ಹಿಂದೂ ಧರ್ಮದಲ್ಲಿ ದೇವರ ಸ್ಥಾನ ನೀಡಲಾಗಿದೆ. ಅದರಲ್ಲೂ ಕನಸಿನಲ್ಲಿ ಬಿಳಿ ಗೋವಿನ ದರ್ಶನವಾದರೆ, ಅದೃಷ್ಟವೇ ಖುಲಾಯಿಸಿದಂತೆ. ಕನಸಿನಲ್ಲಿ ಮನೆ ಬಾಗಿಲಲ್ಲಿ ಗೋವು ಬಂದು ನಿಂತಂತೆ ನಿಮಗೆ ಕನಸು ಬಿದ್ದರೆ, ನಿಮಗೆ ಆರ್ಥಿಕ ಲಾಭವಾಗುವುದೆಂದರ್ಥ.
ಮಳೆ: ಧಾರಾಕಾರವಾಗಿ ಮಳೆ ಬರುವಂತೆ ನಿಮಗೆ ಕನಸು ಬಿದ್ದರೆ, ನಿಮ್ಮ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ ಎಂದರ್ಥ. ಅಥವಾ ಆ ದಿನ ನಿಮಗೆ ಯಾರಾದರೂ ಹಣ ನೀಡುತ್ತಾರೆ. ಅಚಾನಕ್ಕಾಗಿ ಧನ ಪ್ರಾಪ್ತಿಯಾಗುತ್ತದೆ ಎಂದರ್ಥ.