ನಾವು ಜೀವನದಲ್ಲಿ ನೆಮ್ಮದಿಯಿಂದ, ಸುಖ ಶಾಂತಿಯಿಂದ, ಖುಷಿ ಖುಷಿಯಾಗಿ ಇರಬೇಕು ಅಂದ್ರೆ, ಕೆಲ ಮಾತುಗಳನ್ನ, ಕೆಲ ನಿರ್ಧಾರಗಳನ್ನ ಸ್ವೀಕಾರ ಮಾಡಲೇಬೇಕಾಗುತ್ತದೆ. ಆಗಲೇ ನೀವು ನೆಮ್ಮದಿಯಾಗಿ ಬದುಕಲು ಸಾಧ್ಯವಾಗೋದು. ಕೆಲವು ಸಲ ಕೆಲವೊಂದನ್ನ ತ್ಯಾಗವೂ ಮಾಡಬೇಕಾಗುತ್ತದೆ. ಹಾಗಾದ್ರೆ ನಾವು ಯಾವುದನ್ನು ಸ್ವೀಕಾರ ಮಾಡಿದ್ರೆ, ಜೀವನದಲ್ಲಿ ಖುಷಿಯಾಗಿರಬಹದು ಅಂತಾ ತಿಳಿಯೋಣ ಬನ್ನಿ..
ಇದು ಓರ್ವ ಭಿಕ್ಷುಕ ಕೋಟ್ಯಾಧೀಶನಾದ ಕಥೆ.. ಭಾಗ 2
ಒಂದೂರಲ್ಲಿ ಓರ್ವ ಶ್ರೀಮಂತ ಉದ್ಯಮಿ ಇದ್ದ. ಅವನು ವಿದೇಶಿ ವ್ಯಾಪಾರಸ್ಥರೊಂದಿಗೆ ವ್ಯಾಪಾರ ಮಾಡಿ ಚೆನ್ನಾಗಿ ಹಣ ಗಳಿಸಿದ. ಹಾಗಾಗಿ ಅವನ ಊರಲ್ಲಿ ಅವನು ಆಗರ್ಭ ಶ್ರೀಮಂತ ಉದ್ಯಮಿ ಎಂದು ಪ್ರಸಿದ್ಧನಾಗಿದ್ದ. ವ್ಯಾಪಾರದ ದುಡ್ಡು ಕೈ ಸೇರುತ್ತಿದ್ದಂತೆ ಬಂಗಲೆ ಕಟ್ಟಿಕೊಂಡ. ಕಾರು ತೆಗೆದುಕೊಂಡ. ಕೈಗೊಂದು ಕಾಲಿಗೊಂದು ಆಳು ಇಟ್ಟುಕೊಂಡ. ಚೆಂದದ ಹೆಣ್ಣನ್ನ ನೋಡಿ ಮದುವೆಯಾದ.
ಹೀಗೆ ಅವನ ವ್ಯಾಪಾರ ಉತ್ತಮವಾಗಿ ನಡೆಯುತ್ತಿತ್ತು. ಒಮ್ಮೆ ಅವನ ಮನೆಗೆ ಅವನ ಸಂಬಂಧಿಕನೊಬ್ಬ ಬಂದ. ಅವನು ಹೀಗೆಂದ, ನಮ್ಮೂರಲ್ಲಿ ಓರ್ವ ಆಗರ್ಭ ಶ್ರೀಮಂತ ವ್ಯಾಪಾರಿ ಇದ್ದ. ಅವನು ಮೊನ್ನೆ ಮೊನ್ನೆ ತೀರಿಕೊಂಡ. ಈಗ ಅವನಿದ್ದ ಬಂಗಲೆ ಪಾಳು ಬಿದ್ದಿದೆ. ಅವನ ಪತ್ನಿಗೆ ವ್ಯವಹಾರ ನಡೆಸಲು ಬರದ ಕಾರಣ, ಆಕೆ ತವರು ಮನೆ ಸೇರಿದ್ದಾಳೆ. ಅವನು ಮಾಡಿಟ್ಟ ಆಸ್ತಿ ಕೊಳೆಯುತ್ತಿದೆ ಎಂದು ಹೇಳಿದ.
ನಿಮ್ಮ ಜೀವನದ ಕಠಿಣ ಸಮಯದಲ್ಲಿ ಈ ಕಥೆಯನ್ನ ಸ್ಮರಿಸಿ..
ಇದನ್ನು ಕೇಳಿದ ಈ ವ್ಯಾಪಾರಿಗೆ ಚಿಂತೆ ಶುರುವಾಯಿತು. ನಾನೂ ಒಂದು ದಿನ ಸಾಯುತ್ತೇನೆ. ನನ್ನ ಪತ್ನಿಗೂ ಈ ವ್ಯಾಪಾರದ ಬಗ್ಗೆ ಗೊತ್ತಿಲ್ಲ. ಆಕೆಯೂ ಹೀಗೆ ತವರು ಮನೆ ಸೇರುತ್ತಾಳೆ. ಅಯ್ಯೋ ನಾನು ಇಷ್ಟು ದಿನ ಕೂಡಿಟ್ಟ ಸಂಪತ್ತಿನ ಗತಿಯೇನು ದೇವರೇ ಎಂದು ಚಿಂತಿಸತೊಡಗಿದ. ಹೀಗೆ ಸಾವಿನ ಚಿಂತೆ ಮಾಡುತ್ತ ಮಾಡುತ್ತ ವ್ಯಾಪಾರಿ ಹಾಸಿಗೆ ಪಾಲಾದ. ಇತ್ತ ವ್ಯಾಪಾರ ನಷ್ಟದ ಕಡೆ ತಿರುಗಿತು. ಹಾಗಾದ್ರೆ ಶ್ರೀಮಂತ ಹಾಗೇ ಹಾಸಿಗೆ ಹಿಡಿದು ಬಿಡುತ್ತಾನಾ..? ವ್ಯಾಪಾರ ನಿಲ್ಲಿಸಿಬಿಡುತ್ತಾನಾ..? ಮುಂದೇನಾಗುತ್ತದೆ ಅನ್ನೋ ಮುಂದೆ ಮುಂದಿನ ಭಾಗದಲ್ಲಿ ತಿಳಿಯೋಣ.