Beauty Tips: ನಿಮಗೆ ಅರ್ಜೆಂಟ್ ಆಗಿ ಯಾವುದಾದರೂ ಫಂಕ್ಷನ್, ಮೀಟಿಂಗ್ ಅಥವಾ ಇನ್ಯಾವುದೋ ಕಾರ್ಯಕ್ರಮಕ್ಕೆ ಹೋಗಬೇಕು. ಅಲ್ಲಿ ಹೋಗುವಾಗ ಸುಂದರವಾಗಿ ಕಾಣಬೇಕು ಅಂತಾ ಇರತ್ತೆ. ಆಗ ನೀವು ಮಾರುಕಟ್ಟೆಯಲ್ಲಿ ಸಿಗುವ ಕ್ರೀಮ್ ಬಳಸಿ, ಸೌಂದರ್ಯ ಹೆಚ್ಚಿಸಿಕೊಂಡು ಹೋಗ್ತೀರಾ. ಆದರೆ ಅದು ಕೆಲ ಹೊತ್ತಿನ ಸೌಂದರ್ಯವನ್ನಷ್ಟೇ ನೀಡುತ್ತದೆ. ಬಳಿಕ ಸೈಡ್ ಎಫೆಕ್ಟ್ ಆಗಬಹುದು. ಆದರೆ ನಾವಿಂದು ಹೇಳುವ ಟಿಪ್ಸ್ ನೀವು ಫಾಲೋ ಮಾಡಿದ್ರೆ, ನಿಮ್ಮ ತ್ವಚೆ ಸುಂದರವಾಗುತ್ತದೆ. ಹಾಗಾದ್ರೆ ಯಾವ ಫೇಸ್‌ಪ್ಯಾಕ್ ಹಾಕಬೇಕು ಅಂತಾ ತಿಳಿಯೋಣ ಬನ್ನಿ..
ಜೇನುತುಪ್ಪ, ನಿಂಬೆರಸ, ಪಪ್ಪಾಯಿ, ಮುಲ್ತಾನಿ ಮಿಟ್ಟಿ, ಇವಿಷ್ಟು ಈ ಫೇಸ್‌ಪ್ಯಾಕ್ ರೆಡಿ ಮಾಡಲು ಬೇಕಾಗಿರುವ ಸಾಮಗ್ರಿ. ಜೇನುತುಪ್ಪ ನಮ್ಮ ತ್ವಚೆಯನ್ನ ಸ್ವಚ್ಛಗೊಳಿಸಿ, ನಾವು ಚೆಂದಕಾಣುವಂತೆ ಮಾಡುತ್ತದೆ. ನಿಂಬೆರಸದಲ್ಲಿ ವಿಟಾಮಿನ್ ಸಿ ಇದ್ದು, ಇದನ್ನು ಮುಖಕ್ಕೆ ಹಚ್ಚುವುದರಿಂದ, ನಿಮ್ಮ ತ್ವಚೆಯ ಬಣ್ಣ ತಿಳಿಯಾಗುತ್ತದೆ. ಪಪ್ಪಾಯಿಯನ್ನು ಮುಖಕ್ಕೆ ಅಪ್ಲೈ ಮಾಡುವುದರಿಂದ, ನಿಮ್ಮ ಮುಖದಲ್ಲಿ ಚಿನ್ನದಂಥ ಕಾಂತಿ ಬರುತ್ತದೆ. ಇನ್ನು ಮುಲ್ತಾನಿ ಮಿಟ್ಟಿ ನಿಮ್ಮ ತ್ವಚೆಯನ್ನು ಸಾಫ್ಟ್ ಮಾಡುತ್ತದೆ.
ನಾಲ್ಕು ತುಂಡು ಹಣ್ಣಾದ ಪಪ್ಪಾಯಿಯನ್ನು ಮ್ಯಾಶ್ ಮಾಡಿಕೊಂಡು, ಒಂದು ಬೌಲ್‌ಗೆ ಹಾಕಿ. ಇದಕ್ಕೆ 1 ಸ್ಪೂನ್ ಜೇನುತುಪ್ಪ, 1 ಸ್ಪೂನ್ ನಿಂಬೆರಸ, ಒಂದು ಸ್ಪೂನ್ ಮುಲ್ತಾನಿ ಮಿಟ್ಟಿ ಸೇರಿಸಿ, ಫೇಸ್‌ಪ್ಯಾಕ್ ತಯಾರಿಸಿ. ಇದನ್ನು ನಿಮ್ಮ ಮುಖಕ್ಕೆ ಅಪ್ಲೈ ಮಾಡುವ ಮುನ್ನ ಒಮ್ಮೆ ನಿಮ್ಮ ಕೈಗೆ ಹಚ್ಚಿ, ಪ್ಯಾಚ್ ಟೆಸ್ಟ್ ಮಾಡಿಕೊಳ್ಳಿ. ನಿಮ್ಮ ಕೈಗೆ ಯಾವುದೇ ಅಲರ್ಜಿಯಾಗದಿದ್ದಲ್ಲಿ, ಫೇಸ್‌ಪ್ಯಾಕ್ ಹಾಕಿ. ಮೊದಲು ಮುಖವನ್ನು ಸ್ವಚ್ಛವಾಗಿ ತೊಳೆದು, ಬಳಿಕ ಈ ಫೇಸ್‌ಪ್ಯಾಕ್ ಅಪ್ಲೈ ಮಾಡಿದ್ದಲ್ಲಿ, ಉತ್ತಮ ರಿಸಲ್ಟ್ ಪಡೆಯಬಹುದು.
ಈ ಅಂಗಡಿಗೆ ಬಂದ್ರೆ ಕೆಜಿ ಲೆಕ್ಕದಲ್ಲಿ ಕಡಿಮೆ ಬೆಲೆಗೆ ಬಟ್ಟೆ ತೆಗೆದುಕೊಳ್ಳಬಹುದು..
ಪುಟ್ಟ ಮಕ್ಕಳಿಗೆ ಬಿಕ್ಕಳಿಕೆ ಬರಲು ಕಾರಣವೇನು..? ಇದೊಂದು ಸಮಸ್ಯೆನಾ..?