Health Tips: ಪ್ರತಿದಿನ ಎರಡು ಬಾರಿ ಬ್ರಶ್ ಮಾಡುವುದು ಮುಖ್ಯ. ಬೆಳಿಗ್ಗೆ ಎದ್ದ ತಕ್ಷಣ ಮತ್ತು ರಾತ್ರಿ ಮಲಗುವ ಮುನ್ನ. ಆದರೆ ನಾವು ಅತೀಯಾಗಿ ಬ್ರಶ್ ಮಾಡಿದರೆ, ಆರೋಗ್ಯವಾಗಿರಬೇಕಾದ ನಮ್ಮ ಹಲ್ಲು, ಹಾಳಾಗುತ್ತದೆ. ವೈದ್ಯರು ಅತೀಯಾಗಿ ಬ್ರಶ್ ಮಾಡುವುದರಿಂದ ಏನಾಗುತ್ತದೆ ಅಂತಾ ಹೇಳಿದ್ದಾರೆ ನೋಡಿ..
ಹಲ್ಲು ಬಿಳಿ ಬಿಳಿಯಾಗಲಿ ಎಂದು ಅತೀಯಾಗಿ ಬ್ರಶ್ ಮಾಡುವುದು ಒಳ್ಳೆಯದಲ್ಲ ಅಂತಾರೆ ವೈದ್ಯರು. ಕೆಲವರು ದಿನಕ್ಕೆ ನಾಲ್ಕೈದು ಬಾರಿ ಬ್ರಶ್ ಮಾಡುವವರಿದ್ದಾರೆ. ಇನ್ನು ಕೆಲವರು ಫೋರ್ಸ್ ಹಾಕಿ ಬ್ರಶ್ ಮಾಡುತ್ತಾರೆ. ಆದರೆ ಇದು ತಪ್ಪು ಹೀಗೆ ಮಾಡುವುದರಿಂದ ಹಲ್ಲು ಹಾಳಾಗುತ್ತದೆ. ಹಲ್ಲು ನೋವಿನ ಸಮಸ್ಯೆ ಬರುತ್ತದೆ.
ಹಲ್ಲು ಬಿಳಿಯಾಗುವ ಪೇಸ್ಟ್ ಕೂಡ ಸಿಗುತ್ತದೆ. ಉತ್ತಮ ಕ್ವಾಲಿಟಿಯ ಪೇಸ್ಟ್ ಬಳಸಿ, ದಿನಕ್ಕೆ ಎರಡು ಬಾರಿ ಬ್ರಶ್ ಮಾಡಿದರೆ, ನಿಮ್ಮ ಹಲ್ಲು ಚೆನ್ನಾಗಿರುತ್ತದೆ. ಆದರೆ ವಯಸ್ಸಾದಂತೆ ನೀವು ಹಲ್ಲುಗಳ ಆರೋಗ್ಯ ಹಾಳಾದಾಗ ಏನೂ ಮಾಡಲು ಬರುವುದಿಲ್ಲ. ಹಾಗಾಗಿ ಯವ್ವನ ಇದ್ದಾಗಲೇ, ಹಲ್ಲಿನ ಆರೋಗ್ಯದ ಕಡೆ ಗಮನ ಕೊಡಬೇಕು. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ..




