Spiritual: ಜೀವನದಲ್ಲಿ ನಾವು ಮಾಡುವ ಕೆಲ ಪಾಪಗಳ ಫಲಗಳು ಮುಂದಿನ ಜನ್ಮಕ್ಕಾಗಿ ಕಾದಿರುತ್ತದೆ. ನಾವು ಈ ಜನ್ಮದಲ್ಲಿ ನೋವು ಅನುಭವಿಸುವಾಗ, ಹಿಂದಿನ ಜನ್ಮದಲ್ಲಿ ಅದೇನೋ ಪಾಪ ಮಾಡಿರಬೇಕು. ಅದಕ್ಕೆ ಈ ನೋವು ಸಿಕ್ಕಿದೆ ಎಂದು ಹೇಳುತ್ತೇವೆ. ಅದೇ ರೀತಿ ಪ್ರಾಣಿ, ಪಕ್ಷಿಗಳ ಜನ್ಮ ಬರಲು, ನಾವು ಮಾಡುವ ಕೆಲ ಪಾಪಗಳೇ ಕಾರಣವಂತೆ. ಹಾಗಾದ್ರೆ ಪ್ರಾಣಿ ಜನ್ಮ ಬರಲು ಯಾವ ಪಾಪ ಕಾರಣ ಅಂತಾ ತಿಳಿಯೋಣ ಬನ್ನಿ.
ಮೊದಲನೇಯದಾಗಿ ಯಾರಿಗೂ ತೊಂದರೆ ಕೊಡದೇ, ಮಾಂಸಾಹಾರ, ಮದ್ಯ ಸೇವಿಸದೇ, ತನ್ನ ಜ್ಞಾನದಿಂದ ಜೀವಿಸುವ ಬ್ರಾಹ್ಮಣ ದೇವರ ಸಮಾನನೆಂದು ಹೇಳಲಾಗಿದೆ. ಹಾಗಾಗಿ ಬ್ರಾಹ್ಮಣರನ್ನ ದ್ವೇಷ ಮಾಡಿ, ಅಥವಾ ಅಪ್ಪಿತಪ್ಪಿ ಕೊಂದರೂ ಅವರಿಗೆ ಬ್ರಹ್ಮಹತ್ಯಾ ದೋಷ ತಗಲುತ್ತದೆ ಎಂದು ಹೇಳಲಾಗಿದೆ. ಅಲ್ಲದೇ, ಗರುಡಪುರಾಣದಲ್ಲಿ ಈ ಬಗ್ಗೆ ಹೇಳಲಾಗಿದ್ದು, ನರಕದಲ್ಲಿ ಕುಂಭಿಪಾಕಂ ಎಂಬ ಶಿಕ್ಷೆ ಕೊಡಲಾಗುತ್ತದೆ. ಅಲ್ಲದೇ ಮುಂದಿನ ಜನ್ಮದಲ್ಲಿ ಇಂಥವರಿಗೆ ಜಿಂಕೆ, ಕುದುರೆ, ಹಂದಿ, ಒಂಟೆ ಇಂಥವುಗಳ ಯೋನಿಯಲ್ಲಿ ಜನ್ಮ ಸಿಗುತ್ತದೆ.
ಎರಡನೇಯದಾಗಿ ಕಳ್ಳತನ ಮಾಡುವುದರಿಂದಲೂ ಕೀಟದ ಯೋನಿಯಲ್ಲಿ ಜನ್ಮ ಸಿಗುತ್ತದೆ. ಇನ್ನೊಬ್ಬರ ಪತ್ನಿಯೊಂದಿಗೆ ಯಾವ ಪುರುಷ ಸಮಾಗಮ ಮಾಡುತ್ತಾನೋ, ಅಂಥವರಿಗೆ ನರಕದಲ್ಲಿ ಶಿಕ್ಷೆ ಸಿಗುತ್ತದೆ. ಅಲ್ಲದೇ ಮುಂದಿನ ಜನ್ಮದಲ್ಲಿ ನಾಯಿ, ನರಿ, ಹಾವು, ತೋಳ, ಕಾಗೆಯ ಯೋನಿಯಲ್ಲಿ ಜನ್ಮ ಸಿಗುತ್ತದೆ. ಅಲ್ಲದೇ ಯಾವ ಮನುಷ್ಯ ಸಾಲ ಪಡೆದು, ವಾಪಸ್ ಕೊಡುವುದಿಲ್ಲವೋ, ಅಂಥವರು ಮುಂದಿನ ಜನ್ಮದಲ್ಲಿ ನಾಯಿಯಾಗಿ ಜನಿಸುತ್ತಾನೆ.
ಯಾವ ಮನುಷ್ಯ ತನ್ನ ಪೂರ್ವಜರ ಸೇವೆ ಮಾಡದೇ, ಶ್ರಾದ್ಧ ಕಾರ್ಯಗಳನ್ನು ಮಾಡದೇ, ಪೂಜೆ ಪುನಸ್ಕಾರ ಮಾಡದೇ, ಸಾಯುತ್ತಾನೋ, ಅಂಥವರು ಮುಂದಿನ 100 ವರ್ಷಗಳವರೆಗೆ ಕಾಗೆ ಯೋನಿಯಲ್ಲಿ, ಮತ್ತೊಂದಿಷ್ಟು ವರ್ಷ ಕೋಳಿ ಮತ್ತು ಹಾವಿನ ಯೋನಿಯಲ್ಲಿ ಜನ್ಮ ತಾಳುತ್ತಾರೆ. ಅಲ್ಲದೇ, ಯಾರಿಗೆ ಕೊಟ್ಟು ತಿನ್ನುವ ಬುದ್ಧಿ ಇರುವುದಿಲ್ಲವೋ, ಯಾರು ಒಬ್ಬೊಬ್ಬರೇ ಭೋಜನ ಸೇವನೆ ಮಾಡುತ್ತಾರೋ, ಅಂಥವರು ಮುಂದಿನ ಜನ್ಮದಲ್ಲಿ ಸಂತಾನಹೀನರಾಗುತ್ತಾರೆ. ಹಣ್ಣು ಕದಿಯುವವರು, ಮಂಗನ ಯೋನಿಯಲ್ಲಿ ಜನ್ಮ ಪಡೆಯುತ್ತಾರೆ. ಕೊಲೆ ಮಾಡುವವರು, ಕತ್ತೆ, ಜೀಂಕೆ ಯೋನಿಯಲ್ಲಿ ಜನ್ಮ ಪಡೆಯುತ್ತಾರೆ.
ಅಣ್ಣ- ತಂಗಿಯನ್ನ ವಿವಾಹವಾಗಲು ಏಕೆ ಸಾಧ್ಯವಿಲ್ಲ..? ಇದು ಅಧರ್ಮಿ ಅಣ್ಣ- ತಂಗಿಯ ಮದುವೆ ಕಥೆ..
ಓರ್ವ ಮಹಿಳೆಗೆ ಬೇಕೇ ಬೇಕು ಈ 4 ಖುಷಿ.. ಇಲ್ಲದಿದ್ದರೆ ಆಕೆಯ ಜೀವನ ವ್ಯರ್ಥ..