Spiritual: ನಿಮಗೆ ಈ ಶೀರ್ಷಿಕೆ ನೋಡಿ, ಇದೇನಿದು ವಿಚಿತ್ರ, ಅಡುಗೆ ಮಾಡಿ ಊಟ ಮಾಡುವುದಕ್ಕೂ, ಶ್ರೀಮಂತರಾಗುವುದಕ್ಕೂ ಏನು ಸಂಬಂಧ ಅಂತ ಅನ್ನಿಸಿರಬಹುದು. ಇದರ ಅರ್ಥವೇನೆಂದರೆ, ಇಂಥ ಪಾತ್ರೆಯಲ್ಲಿ ಅಡುಗೆ ಮಾಡಿದಾಗ, ಅದರ ಪ್ರಭಾವದಿಂದ ನಿಮ್ಮ ಆರೋಗ್ಯ ವೃದ್ಧಿಯಾಗುತ್ತದೆ. ಆರೋಗ್ಯ ಸರಿಯಿದ್ದಾಗ, ಮನುಷ್ಯ ತಾನಂದುಕೊಂಡಿದ್ದನ್ನು ಸಾಧಿಸುತ್ತಾನೆ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ ಬನ್ನಿ..
ಹಿಂದಿನ ಕಾಲದಲ್ಲಿ ರಾಜರು ಚಿನ್ನದ ಪಾತ್ರೆಗಳಲ್ಲಿ ತಿನ್ನುತ್ತಿದ್ದರು. ಏಕೆಂದರೆ, ಚಿನ್ನದ ಪಾತ್ರೆಯಲ್ಲಿ ತಯಾರಿಸಿದ ಆಹಾರವನ್ನು ತಿಂದರೆ, ದೇಹ ಶಕ್ತಿಯುತವಾಗಿರುತ್ತದೆ. ರಾಜರು ಸಧೃಡರಾಗಿರುತ್ತಿದ್ದರು. ಇನ್ನು ಚಿನ್ನದ ಪಾತ್ರೆಯಲ್ಲಿ ಅಡುಗೆ ಮಾಡಿ, ತಿಂದರೆ, ಜಾತಕದಲ್ಲಿ ಗುರುವಿನ ಸ್ಥಾನ ಬಲವಾಗುತ್ತದೆ ಅನ್ನೋ ನಂಬಿಕೆ ಇದೆ. ಗುರುವಿನ ಕೃಪೆ ಒಲಿದರೆ, ಗುರುಬಲ ಹೆಚ್ಚಾಗುತ್ತದೆ. ಆಗ ಜೀವನ ಉತ್ತಮವಾಗಿರುತ್ತದೆ.
ಬೆಳ್ಳಿಯ ಪಾತ್ರೆಯಲ್ಲೂ ಅಡುಗೆ ಮಾಡಿ, ಊಟ ಮಾಡಲಾಗುತ್ತದೆ. ಚಿನ್ನ ಧರಿಸಿದರೆ, ಉಷ್ಣ ಹೆಚ್ಚು. ಬೆಳ್ಳಿ ಧರಿಸಿದರೆ, ತಂಪು ಹೆಚ್ಚು ಎಂಬ ಮಾತಿದೆ. ಹಾಗಾಗಿ ಕುತ್ತಿಗೆ ತನಕ ಮಾತ್ರ ಚಿನ್ನ ಧರಿಸಲಾಗುತ್ತದೆ. ಸೊಂಟಪಟ್ಟಿ, ಕಾಲ್ಗೆಜ್ಜೆ ಬೆಳ್ಳಿಯದ್ದಾಗಿರುತ್ತದೆ. ಸೊಂಟದ ಕೆಳಗಿನ ಭಾಗಗಳು ತಂಪಾಗಿದ್ದರೆ, ಮನುಷ್ಯ ಆರೋಗ್ಯವಾಗಿರುತ್ತಾನೆ ಎಂದು. ಅದೇ ರೀತಿ ಬೆಳ್ಳಿ ಪಾತ್ರೆಯಲ್ಲಿ ಅಡುಗೆ ಮಾಡಿ ಉಂಡರೆ, ದೇಹ ತಂಪಾಗಿರುತ್ತದೆ. ಇಂಥ ಆಹಾರ ಸೇವನೆಯಿಂದ ಮಾನಸಿಕ ನೆಮ್ಮದಿ ಚೆನ್ನಾಗಿರುತ್ತದೆ.
ಕಂಚಿನ ಪಾತ್ರೆಯಲ್ಲೂ ಅಡುಗೆ ತಯಾರಿಸುತ್ತಾರೆ. ಇದರಲ್ಲಿ ತಯಾರಿಸಿದ ಆಹಾರವನ್ನು ತಿಂದರೆ, ಆರೋಗ್ಯ, ಮಾನಸಿಕ ನೆಮ್ಮದಿ ಎರಡೂ ಉತ್ತಮವಾಗಿರುತ್ತದೆ. ಆದರೆ ಹುಣಸೆಹಣ್ಣು ಮತ್ತು ನಿಂಬೆಹಣ್ಣಿನ ಪದಾರ್ಥಗಳನ್ನು ಕಂಚಿನ ಪಾತ್ರೆಯಲ್ಲಿ ತಯಾರಿಸಬಾರದು. ಏಕೆಂದರೆ, ಕಂಚಿನ ಪಾತ್ರೆಯನ್ನು ಕ್ಲೀನ್ ಮಾಡಲು ನಾವು ಇವೆರಡು ಪದಾರ್ಥವನ್ನು ಉಪಯೋಗಿಸುತ್ತೇವೆ. ಹಾಗಾಗಿ ನಿಂಬೆ ಮತ್ತು ಹುಣಸೆ ಪದಾರ್ಥವನ್ನು ಕಂಚಿನ ಪಾತ್ರೆಯಲ್ಲಿ ತಯಾರಿಸಿದರೆ, ಅದರಲ್ಲಿರುವ ಕೊಳೆ ನಮ್ಮ ದೇಹ ಸೇರಿ, ನಮ್ಮ ಆರೋಗ್ಯ ಹಾಳಾಗುತ್ತದೆ.
Ganesh Festival Special: ಗಣಪತಿಗೆ ಏಕದಂತನೆಂದು ಕರೆಯಲು ಕಾರಣವೇನು..?