ಈ 10 ಕೆಲಸಗಳನ್ನ ಮಾಡಿದ್ರೆ ನೆಮ್ಮದಿಯ ಜೊತೆಗೆ ಮೋಕ್ಷವೂ ನಿಮ್ಮ ಪಾಲಾಗುತ್ತೆ.. ಭಾಗ 1

ಹಲವರಿಗೆ ಜೀವನದಲ್ಲಿ ಬರೀ ದುಃಖವೇ ಸಿಗುತ್ತದೆ. ಮತ್ತು ಸತ್ತ ಬಳಿಕ ಮೋಕ್ಷವೂ ಸಿಗುವುದಿಲ್ಲ. ಯಾಕಂದ್ರೆ ಇದು ಪೂರ್ವ ಜನ್ಮದ ಪಾಪ ಅಂತಾ ಹೇಳಲಾಗತ್ತೆ. ಆದ್ರೆ ನೀವು ಜೀವನದಲ್ಲಿ ಸುಖವಾಗಿರಬೇಕು ಮತ್ತು ನಿಮಗೆ ಮೋಕ್ಷ ಪ್ರಾಪ್ತಿಯಾಗಬೇಕು ಅಂತಾ ಹೇಳಿದ್ರೆ 10 ಕೆಲಸಗಳನ್ನು ಮಾಡಬೇಕು. ಆ ಕೆಲಸಗಳೇನು ಅಂತಾ ತಿಳಿಯೋಣ ಬನ್ನಿ..

ಮೊದಲನೇಯ ಕೆಲಸ ದುಡ್ಡು ಕೂಡಿಡುವುದು. ನೀವು ದುಡಿದ ಹಣದಲ್ಲಿ ಮೂರು ಭಾಗ ಮಾಡಬೇಕು. ಮೊದಲನೇಯ ಭಾಗದಲ್ಲಿ ಭವಿಷ್ಯಕ್ಕಾಗಿ ದುಡ್ಡು ಕೂಡಿಡಿ. ಎರಡನೇಯ ಭಾಗದಲ್ಲಿ ದಾನ ಧರ್ಮಕ್ಕಾಗಿ ಹಣ ತೆಗೆದಿಡಿ. ಮೂರನೇಯ ಭಾಗದ ಹಣವನ್ನು ಜೀವನ ನಡೆಸಲು ಖರ್ಚು ಮಾಡಿ.

ಥೈರಾಯ್ಡ್ ಸಮಸ್ಯೆ ಇದ್ದವರು ಈ ವಿಚಾರವನ್ನ ಖಂಡಿತ ನೆನಪಿನಲ್ಲಿಡಿ..

ಎರಡನೇಯ ಕೆಲಸ ಕೋಪ ಮಾಡುವುದು ಮತ್ತು ಕೋಪ ಬರಿಸುವುದು ಎರಡನ್ನೂ ಬಿಡಬೇಕು. ನಾವು ಕೋಪ ಮಾಡುವುದನ್ನು ಕಡಿಮೆ ಮಾಡಿದಷ್ಟು, ಹಲವರು ನಮಗೆ ಆಪ್ತರಾಗುತ್ತಾರೆ. ಅದೇ ರೀತಿ ಇನ್ನೊಬ್ಬರಿಗೆ ಕೋಪ ಬರಿಸುವ ಮಾತನಾಡಿದಷ್ಟು, ಜನ ನಮ್ಮಿಂದ ದೂರವಾಗ್ತಾರೆ. ಹಾಗಾಗಿ ಕೋಪ ಮಾಡಿಕೊಳ್ಳಲೂಬಾರದು ಮತ್ತು ಇನ್ನೊಬ್ಬರಿಗೆ ಕೋಪ ಬರಿಸುವ ಮಾತನ್ನೂ ಆಡಬಾರದು. ಕೋಪ ನಮ್ಮನ್ನೇ ಸುಡುವ ಬೆಂಕಿ ಇದ್ದಂತೆ. ಅದರಿಂದ ನಮಗೆ ನಷ್ಟ. ಇನ್ನು ನಾವಾಡಿದ ಮಾತನ್ನು ಹಿಂಪಡೆಯಲಾಗುವುದಿಲ್ಲ. ಹಾಗಾಗಿ ಉತ್ತಮ ಮಾತುಗಳನ್ನೇ ಆಡಬೇಕು.

ಮೂರನೇಯ ಕೆಲಸ ಉಪವಾಸ ಮಾಡುವುದು. ನಾವು ಶಕ್ತಿವಂತರಾಗಿರಲು ಭೋಜನ ಮಾಡುವುದು ತುಂಬಾ ಮುಖ್ಯವಾಗಿದೆ. ಅದೇ ರೀತಿ ನಾವು ಆರೋಗ್ಯವಾಗಿರಲು, ತಿಂಗಳಿಗೊಮ್ಮೆಯಾದರೂ ಉಪವಾಸ ಮಾಡಬೇಕು. ಉಪವಾಸವೆಂದರೆ, ಚೆನ್ನಾಗಿ ಹಣ್ಣು ಹಂಪಲು ತಿಂದು, ಹಾಲು ಕುಡಿದು ಉಪವಾಸ ಮಾಡುವುದಲ್ಲ. ಬದಲಾಗಿ ಬರೀ ನೀರನ್ನು ಕುಡಿದು ದೇವರ ನಾಮಸ್ಮರಣೆ ಮಾಡುತ್ತ ಉಪವಾಸ ಮಾಡುವುದು. ಹೀಗೆ ಉಪವಾಸ ಮಾಡಿದರೆ, ಅದರ ಫಲವೂ ಸಿಗುತ್ತದೆ. ಆರೋಗ್ಯವೂ ದಕ್ಕುತ್ತದೆ.

ಮಗುವಿನ ಕೂದಲು ಸಧೃಡ ಮತ್ತು ಆರೋಗ್ಯಕರವಾಗಿ ಇರಿಸುವುದು ಹೇಗೆ..?

ನಾಲ್ಕನೇಯ ಕೆಲಸ ಮುಸ್ಸಂಜೆ ಹೊತ್ತಿನಲ್ಲಿ ಉತ್ತಮ ಕಾರ್ಯಗಳನ್ನು ಮಾಡಿ. ಇದನ್ನು ಹಿರಿಯರು ಪದೇ ಪದೇ ಹೇಳ್ತಾ ಇರ್ತಾರೆ. ಏನಂದ್ರೆ ಮುಸ್ಸಂಜೆ ದೀಪ ಹಚ್ಚಿದ ಮೇಲೆ ಪ್ರಾರ್ಥನೆ ಮಾಡಬೇಕು. ಉತ್ತಮ ಮಾತುಗಳನ್ನು ಆಡಬೇಕು. ದೀಪ ಹಚ್ಚುವ ಮುನ್ನವೇ, ನಿದ್ದೆ , ತಲೆ ಬಾಚಿಕೊಳ್ಳುವುದು, ಕಸ ಗುಡಿಸುವುದು ಇತ್ಯಾದಿ ಕೆಲಸಗಳನ್ನ ಮಾಡಿಬಿಡಬೇಕು. ದೀಪ ಹಚ್ಚಿದ ಬಳಿಕ ಇದೆಲ್ಲ ಮಾಡುವುದು ನಿಷಿದ್ಧ. ಯಾಕಂದ್ರೆ ಈ ವೇಳೆ ಲಕ್ಷ್ಮೀ ದೇವಿ ಮನೆಗೆ ಬರುತ್ತಾಳೆ. ಅಶ್ವಿನಿ ದೇವತೆಗಳು ಅಸ್ತು ಅಸ್ತು ಎನ್ನುತ್ತಿರುತ್ತಾರೆ. ಹಾಗಾಗಿ ಮುಸ್ಸಂಜೆ ಹೊತ್ತಿಗೆ ಕೆಟ್ಟದ್ದನ್ನು ಮಾತನಾಡದೇ, ಕಣ್ಣೀರು ಹಾಕದೇ, ಜಗಳವಾಡದೇ, ಶಾಂತವಾಗಿ ದೇವರ ನಾಮಸ್ಮರಣೆ ಮಾಡಬೇಕು ಅಂತಾ ಹೇಳುವುದು.

ಐದನೇಯ ಕೆಲಸ ಯಾವಾಗಲೂ ಸತ್ಯವನ್ನೇ ಮಾತನಾಡಿ. ಶಿವ ಪುರಾಣದ ಪ್ರಕಾರ, ನೀವು ಯಾರಿಗೂ ಮೋಸ ಮಾಡದೇ, ಸುಳ್ಳು ಹೇಳದೇ, ಪ್ರಾಮಾಣಿಕವಾಗಿ ಜೀವನ ಮಾಡಿದ್ರೆ, ನಿಮ್ಮ ಜೀವನವೂ ಉತ್ತಮವಾಗಿರುತ್ತದೆ. ಇದರಿಂದ ಪುಣ್ಯವೂ ಪ್ರಾಪ್ತಿಯಾಗುತ್ತದೆ. ಸುಳ್ಳು ಹೇಳದೇ, ನಿಯತ್ತಿನಿಂದ ಮಾಡಿದ ಕೆಲಸದಿಂದ ಬಂದ ಸಂಪಾದನೆಯಿಂದ ಉತ್ತಮ ಜೀವನವನ್ನೂ ನಡೆಸಬಹುದು. ಅದೇ ಮೋಸ ಮಾಡಿ, ವಂಚನೆಯಿಂದ ದುಡ್ಡು ಸಂಪಾದನೆ ಮಾಡಿದ್ರೆ, ಮುಂದೊಂದು ದಿನ ಅದರ ಪರಿಣಾಮವನ್ನು ಎದುರಿಸಬೇಕಾಗುತ್ತದೆ. ಹಾಗಾಗಿ ಯಾವಾಗಲೂ ಸತ್ಯವನ್ನೇ ಹೇಳಿ, ಪ್ರಾಮಾಣಿಕರಾಗಿರಿ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯನ್ನ ಮುಂದಿನ ಭಾಗದಲ್ಲಿ ತಿಳಿಯೋಣ..

About The Author