ಮೊದಲ ಭಾಗದಲ್ಲಿ ಯಾವ ಕೆಲಸ ಮಾಡಿದ್ರೆ ನೆಮ್ಮದಿಯ ಜೊತೆಗೆ ಮೋಕ್ಷವೂ ಸಿಗತ್ತೆ ಅನ್ನೋ ವಿಷಯದ ಬಗ್ಗೆ 5 ಕೆಲಸದ ಬಗ್ಗೆ ಮಾಹಿತಿ ನೀಡಿದ್ದೆವು. ಈಗ ಅದರ ಮುಂದುವರಿದ ಭಾಗವಾಗಿ ಇನ್ನುಳಿದ 5 ಕೆಲಸಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ.
ಆರನೇಯ ಕೆಲಸ ನಿಷ್ಕಾಮ ಕೆಲಸಗಳನ್ನು ಮಾಡಿ. ಅಂದ್ರೆ ಯಾವುದಾದರೂ ಕೆಲಸ ಮಾಡಿದ್ರೆ ಅದರಿಂದ ಪುನಃ ನಮಗೇನಾದರೂ ಲಾಭವಿದೆಯಾ ಅಂತಾ ನೋಡದೇ, ಕೆಲಸ ಮಾಡುವುದು. ಶ್ರೀಕೃಷ್ಣ ಹೇಳಿದಂತೆ, ಕೆಲಸ ಮಾಡುವುದಷ್ಟೇ ನಮ್ಮ ಕೆಲಸ. ಅದರ ಫಲಾಫಲಗಳು ದೇವರು ನೋಡಿಕೊಳ್ಳುತ್ತಾನೆ. ಹಾಗಾಗಿ ಏನನ್ನೂ ಬಯಸದೇ ಉತ್ತಮ ಕೆಲಸಗಳನ್ನು ಮಾಡಬೇಕು. ಅದರ ಪುಣ್ಯದ ಫಲ ಯಾವುದೋ ರೀತಿಯಲ್ಲಿ ಬಂದು ನಿಮ್ಮನ್ನು ಕಾಪಾಡುತ್ತದೆ.
ಮಗುವಿನ ಕೂದಲು ಸಧೃಡ ಮತ್ತು ಆರೋಗ್ಯಕರವಾಗಿ ಇರಿಸುವುದು ಹೇಗೆ..?
ಏಳನೇಯ ಕೆಲಸ ದುರಾಸೆಯನ್ನು ಬಿಟ್ಟು ಬದುಕಿ. ದುರಾಸೆ ಅನ್ನೋದು ಮನುಷ್ಯನ ಅವನತಿಗೆ ಕಾರಣವಾಗುತ್‌ತದೆ. ಮನುಷ್ಯ ಅಂದ ಮೇಲೆ ಅವನಿಗೆ ಆಸೆ ಇರುವುದು ಸಹಜ. ಕೆಲವು ಸಲ ಆಸೆ ಇರುವುದು ಮುಖ್ಯವಾಗುತ್ತದೆ. ಯಾಕಂದ್ರೆ ಆ ಆಸೆಯನ್ನು ಪೂರೈಸುವುದಕ್ಕಾದರೂ, ಮನುಷ್ಯ ಕಷ್ಟಪಟ್ಟು ದುಡಿಯುತ್ತಾನೆ. ಗುರಿಯೆಡೆಗೆ ಗಮನ ಕೊಡುತ್ತಾನೆ. ಆದ್ರೆ ದುರಾಸೆ ಇದ್ದಾಗ, ದುಡಿಯುವ ಬದಲು, ಅಡ್ಡದಾರಿ ಹಿಡಿಯುವ ಯೋಚನೆ ಬರುತ್ತದೆ. ಸಾಲ ಸೋಲ ಮಾಡುವ ಯೋಚನೆ ಬರುತ್ತದೆ. ಹಾಗಾಗಿ ದುರಾಸೆ ಮಾಡದೇ, ಇದ್ದುದರಲ್ಲೇ ಅಡ್ಜಸ್ಟ್ ಮಾಡಿಕೊಂಡು ಬದುಕುವುದನ್ನ ಕಲಿಯಿರಿ.
ಎಂಟನೇಯ ಕೆಲಸ ಮೋಹವನ್ನು ಬಿಟ್ಟುಬಿಡಿ. ಮನುಷ್ಯನ ದುಃಖಗಳಿಗೆ ಮೋಹವೇ ಮುಖ್ಯ ಕಾರಣವಾಗಿದೆ. ಯಾವುದಾದರೂ ವಸ್ತುವಿನ ಮೇಲಿನ ಮೋಹ, ಮನುಷ್ಯರ ಮೇಲಿನ ಮೋಹದಿಂದ, ಆ ವಸ್ತುವನ್ನೋ, ಅಥವಾ ಮನುಷ್ಯನನ್ನೋ ನಾವು ಕಳೆದುಕೊಳ್ಳಲು ಇಚ್ಛಿಸುವುದಿಲ್ಲ. ಹಾಗೇನಾದರೂ ಅದು ಕಳೆದು ಹೋದರೆ, ಆಗಲೇ ನಮಗೆ ದುಃಖವಾಗುತ್ತದೆ. ಅದೇ ನಮ್ಮ ನಾಶಕ್ಕೆ ಕಾರಣವಾಗುತ್ತದೆ. ಹಾಗಾಗಿ ಯಾವುದರ ಮೇಲೂ ಮೋಹವನ್ನಿರಿಸಬೇಡಿ.
ಥೈರಾಯ್ಡ್ ಸಮಸ್ಯೆ ಇದ್ದವರು ಈ ವಿಚಾರವನ್ನ ಖಂಡಿತ ನೆನಪಿನಲ್ಲಿಡಿ..
ಒಂಭತ್ತನೇಯ ಕೆಲಸ ಸಕಾರಾತ್ಮಕವಾಗಿ ಯೋಚಿಸಿ. ನೀವು ಒಳ್ಳೆಯದನ್ನೇ ಯೋಚಿಸಿದ್ದಲ್ಲಿ ಹಾಗೆಯೇ ಬದುಕುತ್ತೀರಿ. ಕೆಟ್ಟದ್ದನ್ನ ಯೋಚಿಸಿದ್ದಲ್ಲಿ, ನಕಾರಾತ್ಮಕವಾಗಿಯೇ ಬದುಕುತ್ತೀರಿ. ಅದಕ್ಕೆ ಹಿರಿಯರು ಯೋಚಿಸಿದಂತೆ ಬದುಕು ಅಂತಾ ಹೇಳಿರುವುದು. ಹಾಗಾಗಿ ಯಾವಾಗಲೂ ಒಳ್ಳೆಯ ಕೆಲಸಗಳ ಬಗ್ಗೆಯೇ ಯೋಚಿಸಿ. ಎಲ್ಲರಿಗೂ ಒಳ್ಳೆಯದನ್ನೇ ಬಯಸಿ. ಒಳ್ಳೆಯ ಕೆಲಸಗಳನ್ನೇ ಮಾಡಿ. ಇದರಿಂದ ನಿಮಗೆ ಒಳ್ಳೆಯದಾಗದಿದ್ದರೂ, ಕೆಟ್ಟದ್ದಂತೂ ಆಗುವುದಿಲ್ಲ.
ಹತ್ತನೇಯ ಕೆಲಸ ಮನುಷ್ಯನಂತೆ ಜೀವನ ಮಾಡಿ. ಯಾವಾಗ ಮನುಷ್ಯನಲ್ಲಿರುವ ಕೆಟ್ಟ ಮನಸ್ಥಿತಿ, ಹೋಗುತ್ತದೆಯೋ, ಅಂದು ಅವನು ಮನುಷ್ಯನಾಗುತ್ತಾನೆ. ನಿಮಗೆ ಸುಖದ ಜೀವನ ಬೇಕು. ಮೋಕ್ಷ ಪ್ರಾಪ್ತಿಯಾಗಬೇಕು ಎಂದಲ್ಲಿ, ಕೆಟ್ಟ ಮನಸ್ಥಿತಿ ಇದ್ದಲ್ಲಿ, ಕೋಪ ತಾಪಗಳಿದ್ದಲ್ಲಿ, ಅವೆಲ್ಲವನ್ನೂ ಬಿಟ್ಟು ಮನುಷ್ಯನಾಗಿ ಬದುಕಬೇಕು. ಅಂದರೆ, ಬೇರೆಯವರ ಮೇಲೆ ಕೋಪ, ಮೋಹ, ಮದ, ಮತ್ಸರಗಳೆಲ್ಲೂ ಕಳೆದು ಹೋಗುತ್ತದೆಯೋ, ಅಂದೇ ಓರ್ವ ಮನುಷ್ಯ ನಿಜವಾದ ಮನುಷ್ಯನಾಗುತ್ತಾನೆ.