Spiritual: ಜೀವನವನ್ನು ಹೇಗೆ ನಿಭಾಯಿಸಬೇಕು..? ಜೀವನ ಸಂಗಾತಿಯನ್ನು ಹೇಗೆ ಆಯ್ಕೆ ಮಾಡಿಕೊಳ್ಳಬೇಕು..? ಹಣಕಾಸಿನ ಸಮಸ್ಯೆ ಬಾರದಿರಲು ಏನು ಮಾಡಬೇಕು..? ಹೀಗೆ ಚಾಣಕ್ಯರು ಜೀವನಕ್ಕೆ ಬೇಕಾದ ಎಲ್ಲ ವಿಷಯಗಳ ಬಗ್ಗೆ ತಮ್ಮ ಚಾಣಕ್ಯ ನೀತಿಯಲ್ಲಿ ವಿವರಿಸಿದ್ದಾರೆ. ಅದೇ ರೀತಿ ಇಂದು ನಾವು, ಮನುಷ್ಯ ಮಾಡುವ ಯಾವ ತಪ್ಪುಗಳಿಂದ, ಅವನು ಉದ್ಧಾರವಾಗುವುದಿಲ್ಲ ಎಂಬ ಬಗ್ಗೆ ವಿವರಿಸಲಿದ್ದೇವೆ. ಆ ಬಗ್ಗೆ ತಿಳಿಯೋಣ ಬನ್ನಿ..
ಮೊದಲನೇಯ ತಪ್ಪು, ಗುರಿಯ ಬಗ್ಗೆ ಯಾರಿಗೂ ಹೇಳಿಕೊಳ್ಳಬಾರದು. ಚಾಣಕ್ಯರ ಪ್ರಕಾರ, ನಾವು ಯಾವ ಕೆಲಸ ಮಾಡಲಿದ್ದೇವೆ ಎಂದು ಯಾರಲ್ಲಿಯೂ ಹೇಳಬಾರದು. ನೀವು ಆ ಕೆಲಸ ಮಾಡಲು ಶುರು ಮಾಡಿದ ಮೇಲೆ, ಅಥವಾ ನಿಮ್ಮ ಕೆಲಸ ಮುಗಿದ ಬಳಿಕವೇ, ನಿಮ್ಮ ಕೆಲಸದ ಬಗ್ಗೆ ಇತರರಿಗೆ ಗೊತ್ತಾಗಬೇಕು. ನೀವೇನಾದರೂ, ಮೊದಲೇ ನಿಮ್ಮ ಕೆಲಸದ ಬಗ್ಗೆ ಇನ್ನೊಬ್ಬರ ಬಳಿ ಹೇಳಿ, ಬಳಿಕ ಆ ಕೆಲಸ ಮಾಡಲು ನಿಮ್ಮಿಂದ ಸಾಧ್ಯವಾಗದಿದ್ದಲ್ಲಿ, ಜನ ನಿಮ್ಮನ್ನು ಆಡಿಕೊಂಡು, ಅವಮಾನ ಮಾಡುತ್ತಾರೆ.
ಎರಡನೇಯ ತಪ್ಪು ಗುರಿಯನ್ನು ಅರ್ಧಕ್ಕೆ ಬಿಡಬಾರದು. ಅಂದರೆ, ಯಾವುದಾದರೂ ಕೆಲಸ ಮಾಡಬೇಕು. ಯಶಸ್ಸು ಸಾಧಿಸಬೇಕೆಂದು ಹೊರಟಾಗ, ಅದರಿಂದ ತೊಂದರೆಯಾಗುತ್ತಿದೆ. ಮನೆಜನರು ಬೈಯ್ಯುತ್ತಿದ್ದಾರೆ. ಅಥವಾ ನಿದ್ದೆ, ಊಟ ಸರಿಯಾಗಿ ಮಾಡಲಾಗುತ್ತಿಲ್ಲ. ಅಥವಾ ಇನ್ಯಾವುದೋ, ಕಾರಣವನ್ನಿಟ್ಟುಕೊಂಡು, ಕೆಲಸವನ್ನು ಅರ್ಧಕ್ಕೆ ಮೊಟಕುಗೊಳಿಸಬಾರದು. ಬದಲಾಗಿ ಅದ್ಯಾವುದೂ ಅಡ್ಡಿಯಾಗದಂತೆ, ನಿಮ್ಮ ಆರೋಗ್ಯ, ಸಂಬಂಧ ಯಾವುದಕ್ಕೂ ಧಕ್ಕೆ ಬಾರದಂತೆ, ನೀವು ನಿಮ್ಮ ಕೆಲಸವನ್ನು ಮಾಡಿ, ಯಶಸ್ಸನ್ನು ಸಾಧಿಸಬೇಕು.