IF YOU DONʼT GROW YOU WILL DIE : Sangeetha.com MD ಸುಭಾಷ್ ಚಂದ್ರ Exclusive Kannada Podcast

Special Podcast: Sangeetha.com MD ಸುಭಾಷ್ ಚಂದ್ರ ಅವರು ಸಂದರ್ಶನದಲ್ಲಿ ಮಾತನಾಡಿದ್ದು, ಜೀವನದಲ್ಲಿ ನೀವು ಅಭಿವೃದ್ಧಿ ಹೊಂದದೇ ಇದ್ದರೆ, ನೀವು ಬದುಕಿಯೂ ಪ್ರಯೋಜನವಿಲ್ಲ ಎಂದಿದ್ದಾರೆ.

ಈ ಬಗ್ಗೆ ಮಾತನಾಡಿರುವ ಅವರು, ಮೊದಲೆಲ್ಲ ಮೊಬೈಲ್ 20ರಿಂದ 30 ಸಾವಿರ ರೂಪಾಯಿಗೆ ಸಿಗುತ್ತಿತ್ತು. ಮೊಬೈಲ್ ಶೋ ರೂಮ್‌ಗಳಿರಲಿಲ್ಲ. ಆದರೆ ಜನ ಸಿಮ್ ಕಾರ್ಡ್ ಖರೀದಿಸಿ, ಬೀರುವಿನಲ್ಲಿ ಇಡುತ್ತಿದ್ದರು. ಮುಂದೆ ಮೊಬೈಲ್ ಖರೀದಿಸಬೇಕು ಎಂಬ ಕಾರಣಕ್ಕೆ. ನಮ್ಮ ಶೋ ರೂಮ್‌ನಲ್ಲಿ ಮೇಲಿನ ಮಹಡಿಯಲ್ಲಿ ಫ್ರಿಜ್, ವಾಶಿಂಗ್ ಮಷಿನ್ ಸೇರಿ ಹಲವು ಎಲೆಕ್ಟ್ರಿಕ್ ವಸ್ತುಗಳನ್ನು ಮಾರಾಟ ಮಾಡುತ್ತಿದ್ದೆವು. ಆದರೆ ಕೆಳಗಿನ ಮಹಡಿ ಖಾಲಿಯಾಗಿತ್ತು.

ನಾನ್ಯಾಕೆ ಜಾಗ ಖಾಲಿ ಮಾಡುತ್ತಿದ್ದೇನೆ ಎಂದು ನನಗನ್ನಿಸಿತು. ಹಾಗಾಗಿ ನಾನು ಇರುವ ಎಲ್ಲ ಎಲೆಕ್ಟ್ರಾನಿಕ್ ವಸ್ತುಗಳನ್ನು ಅರ್ಧ ಬೆಲೆಗೆ ಮಾರಾಟ ಮಾಡಿ. ಬರೀ ಮೊಬೈಲ್ ಮಾರಾಟ ಮಾಡಬೇಕು. ಶೋ ರೂಮ್‌ನ್ನು ಬರೀ ಮೊಬೈಲ್ ಶೋರೂಮ್ ಮಾಡಬೇಕು ಎಂದು ನಿರ್ಧರಿಸಿದೆ. ಆದರೆ ಅದಕ್ಕಾಗಿ ಮನೆಯಲ್ಲಿ ಒಪ್ಪಿಸಲು 2 ವರ್ಷಗಳು ಬೇಕಾಯ್ತು. ಆದರೆ ಬಳಿಕ ಸೆಲ್ ಫೋನ್ ಮಾರುವುದಕ್ಕೆ ಸಂಗೀತಾ ಪ್ರಸಿದ್ಧಿಯಾಯ್ತು ಅಂತಾರೆ ಸುಭಾಷ್ ಚಂದ್ರ. ಇದೇ ರೀತಿ ಜೀವನದಲ್ಲಿ ಅಪ್ಡೇಟ್ ಆದರೆ ಮಾತ್ರ ನಾವು ಜೀವನದಲ್ಲಿ ಅಭಿವೃದ್ಧಿ ಆಗಲು ಸಾಧ್ಯ ಅಂತಾರೆ ಸುಭಾಷ್ ಚಂದ್ರ.

About The Author