ಈ 6 ವಸ್ತುಗಳನ್ನು ದಾನ ಮಾಡಿದರೆ, ನಿಮ್ಮ ಭಾಗ್ಯ ಖುಲಾಯಿಸುತ್ತದೆ..

ಎಲ್ಲ ಧರ್ಮದಲ್ಲೂ ದಾನ ಮಾಡುವುದನ್ನು ಪುಣ್ಯ ಎಂದು ಹೇಳಲಾಗಿದೆ. ಆದ್ರೆ ಯಾವ ವಸ್ತುವನ್ನು ದಾನ ಮಾಡಿದ್ರೆ, ಯಾವ ಫಲ ಸಿಗುತ್ತದೆ ಎಂದು ಹಲವರಿಗೆ ಗೊತ್ತಿಲ್ಲ. ಹಾಗಾಗಿ ನಾವಿಂದು ಯಾವ 6 ವಸ್ತುವನ್ನು ದಾನ ಮಾಡಿದರೆ, ಉತ್ತಮ ಅನ್ನೋ ಬಗ್ಗೆ ಹೇಳಲಿದ್ದೇವೆ.

ಮೊದಲನೇಯ ವಸ್ತು ಅಕ್ಕಿ. ಪ್ರತಿ ಸೋಮವಾರ ಶಿವಲಿಂಗದ ಮೇಲೆ ಅಕ್ಕಿಯ ಅಭಿಷೇಕ ಮಾಡಿ, ಆ ಅಭಿಷೇಕದ ಅಕ್ಕಿಯನ್ನು ಬಡವರಿಗೆ ದಾನ ಮಾಡಬೇಕು. ಹೀಗೆ ಮಾಡುವುದರಿಂದ ನಿಮ್ಮೆಲ್ಲ ಕಷ್ಟಗಳಿಗೂ ಪರಿಹಾರ ಸಿಗುತ್ತದೆ ಅನ್ನೋ ನಂಬಿಕೆ ಇದೆ.

ಎರಡನೇಯ ವಸ್ತು ಉಪ್ಪು. ನೀವು ದಪ್ಪ ಉಪ್ಪನ್ನು ದಾನ ಮಾಡುವುದರಿಂದ ನಿಮ್ಮ ಜೀವನದ ಪ್ರತ್ಯಕ್ಷ ಮತ್ತು ಅಪ್ರತ್ಯಕ್ಷ ಕಷ್ಟಗಳು ದೂರವಾಗುತ್ತದೆ. ನೀವು ಉಪ್ಪು ದಾನ ಮಾಡುವ ಸಂದರ್ಭದಲ್ಲಿ ಅದನ್ನು ನೇರವಾಗಿ ಎದುರಿಗಿನವರ ಕೈಗೆ ನೀಡಬೇಡಿ. ಬದಲಾಗಿ, ಉಪ್ಪನ್ನು ಕೆಳಗಿಡಿ.

ಮೂರನೇಯ ವಸ್ತು ಬೆಲ್ಲ. ಸೋಮವಾರದ ದಿನ ಬೆಲ್ಲ ದಾನ ಮಾಡಿದ್ರೆ, ಮನೆಯಲ್ಲಿ ನೆಮ್ಮದಿ ಇರುತ್ತದೆ. ಅಪ್ಪ ಮಕ್ಕಳ ಸಂಬಂಧ, ಗಂಡ ಹೆಂಡತಿ ಸಂಬಂಧ ಹೀಗೆ ಯಾವುದೇ ಸಂಬಂಧಗಳು ಹಾಳಾಗಿದ್ದರೂ, ನೀವು ಸೋಮವಾರದ ದಿನ ಬೆಲ್ಲ ದಾನ ಮಾಡಿದ್ರೆ, ಆ ಸಂಬಂಧ ಸರಿಹೋಗುತ್ತದೆ. ಅಲ್ಲದೇ ಗೋಮಾತೆಗೆ ಉಪ್ಪು ಸೇರಿಸಿ ಮಾಡಿದ ಚಪಾತಿಯೊಂದಿಗೆ ಬೆಲ್ಲ ಕೊಟ್ಟರೆ, ಮನೆಯಲ್ಲಿ ಜಗಳವಾಗುವುದು ನಿಲ್ಲುತ್ತದೆ. ಮತ್ತು ಮನೆಯಲ್ಲಿ ಲಕ್ಷ್ಮೀದೇವಿ ನೆಲೆಸುತ್ತಾಳೆ.

ನಾಲ್ಕನೇಯ ವಸ್ತು ಎಳ್ಳು. ನೀವು ಶನಿವಾರದ ದಿನ ಕಪ್ಪು ಎಳ್ಳನ್ನು ದಾನ ಮಾಡಬೇಕು. ಹೀಗೆ ಮಾಡಿದ್ದಲ್ಲಿ, ನಿಮ್ಮ ಆತ್ಮ ವಿಶ್ವಾಸ ಹೆಚ್ಚುತ್ತದೆ. ಯಾಕಂದ್ರೆ ಹಲವರಿಗೆ ಟ್ಯಾಲೆಂಟ್ ಇರುತ್ತದೆ. ಆದ್ರೆ ಆ ಟ್ಯಾಲೆಂಟ್ ತೋರಿಸುವ ಆತ್ಮವಿಶ್ವಾಸ ಇರುವುದಿಲ್ಲ. ಅಂಥವರು ಕಪ್ಪೆಳ್ಳನ್ನು ಶನಿವಾರ ದಾನ ಮಾಡಿದ್ರೆ, ಉತ್ತಮ ಅಂತಾ ಹೇಳಲಾಗುತ್ತದೆ.

ಐದನೇಯ ವಸ್ತು ತುಪ್ಪ. ಮನೆಯಲ್ಲಿ ಯಾರಾದರೂ ಅನಾರೋಗ್ಯದಿಂದ ಬಳಲುತ್ತಿದ್ದರೆ, ಅವರ ಕೈಯಿಂದ ತುಪ್ಪವನ್ನು ಮುಟ್ಟಿಸಿ, ಅದನ್ನ ದಾನ ಮಾಡಿ. ಹೀಗೆ ಮಾಡುವುದರಿಂದ ಅವರು ಆರೋಗ್ಯವಂತರಾಗುತ್ತಾರೆ. ಇನ್ನು ನೀವು ಗೋವಿನ ತುಪ್ಪ ದಾನ ಮಾಡಿದ್ರೆ, ಇನ್ನೂ ಉತ್ತಮ.

ಆರನೇಯ ವಸ್ತು ಬಟ್ಟೆ. ನಿಮಗೆ ಪದೇ ಪದೇ ಅನಾರೋಗ್ಯ ಕಾಡುತ್ತಿದ್ದರೆ, ಅಥವಾ ಸಾಯುವ ಭಯವಿದ್ದರೆ, ನೀವು ಬಟ್ಟೆಯನ್ನು ದಾನ ಮಾಡಿ. ನೀವು ಶ್ರೀಮಂತರಿಗೆ ಅಥವಾ ನಿಮ್ಮ ಸಂಬಂಧಿಕರಿಗೆ ಬಟ್ಟೆ ದಾನ ಮಾಡುವ ಬದಲು, ಬಟ್ಟೆಯ ಅವಶ್ಯಕತೆ ಇರುವವರಿಗೆ ಬಟ್ಟೆ ದಾನ ಮಾಡಿ. ಇದರಿಂದ ನಿಮ್ಮ ಆರೋಗ್ಯದಲ್ಲಿ ಸಕಾರಾತ್ಮಕ ಬದಲಾವಣೆ ಬರುತ್ತದೆ.

About The Author