Sunday, September 8, 2024

Latest Posts

ಈ 4 ತಪ್ಪುಗಳನ್ನು ಮಾಡದಿದ್ದಲ್ಲಿ ನೀವು ಹಣದ ತೊಂದರೆಯಿಂದ ಪಾರಾಗುತ್ತೀರಿ..

- Advertisement -

Spiritual: ದುಡ್ಡು ಅನ್ನುವುದು ಜೀವನದಲ್ಲಿ ಎಷ್ಟು ಮುಖ್ಯ ಅಂತ ಎಲ್ಲರಿಗೂ ಗೊತ್ತು. ದುಡ್ಡಿದ್ದರೆ ಹೊಟ್ಟೆ ತುಂಬುತ್ತದೆ. ಬಟ್ಟೆ ಖರೀಸಿದಲಾಗುತ್ತದೆ. ಸೂರು ಸಿಗುತ್ತದೆ. ಇದೆಲ್ಲದಕ್ಕೂ ಮೀರಿ ಜೀವನ ನಡೆಸಲಂತೂ ರಾಶಿ ರಾಶಿ ದುಡ್ಡು ಬೇಕು. ಆದರೆ ಅದೆಲ್ಲ ಸಾಧ್ಯವಾಗಬೇಕು ಅಂದ್ರೆ, ಲಕ್ಷ್ಮೀ ದೇವಿಯ ಕೃಪೆ ನಮ್ಮ ಮೇಲಿರಬೇಕು. ಹಾಗಾಗಬೇಕು ಅಂದ್ರೆ ನಾವು ಕೆಲ ತಪ್ಪುಗಳನ್ನು ಮಾಡಬಾರದು. ಆ ತಪ್ಪುಗಳೇನು ಅಂತಾ ತಿಳಿಯೋಣ ಬನ್ನಿ..

ಮೊದಲನೇಯ ತಪ್ಪು, ಸೂರ್ಯಾಸ್ತದ ಬಳಿಕ ನಿದ್ದೆ ಮಾಡಬಾರದು. ಸೂರ್ಯಾಸ್ತ ಅಂದರೆ ದೀಪ ಹಚ್ಚುವ ವೇಳೆ ಮತ್ತು ದೀಪ ಹಚ್ಚಿದ ಬಳಿಕ ನಿದ್ದೆ ಮಾಡಬಾರದು. ಇದರಿಂದ ಲಕ್ಷ್ಮೀಯ ಕೋಪಕ್ಕೆ ಗುರಿಯಾಗುತ್ತೀರಿ. ಅಲ್ಲದೇ, ಮಾನಸಿಕ ನೆಮ್ಮದಿ ಕೂಡ ಹಾಳಾಗುತ್ತದೆ. ಮನೆಯಲ್ಲಿ ಸದಾ ಜಗಳವಾಗುತ್ತದೆ. ನಕಾರಾತ್ಮಕ ಶಕ್ತಿಯ ಪರಿಣಾಮ ಹೆಚ್ಚಾಗುತ್ತದೆ. ಹಾಗಾಗಿ ಸೂರ್ಯಾಸ್ತದ ಬಳಿಕ ನಿದ್ರಿಸಬಾರದು.

ಎರಡನೇಯ ತಪ್ಪು, ಲಕ್ಷ್ಮೀಗೆ ಸೇರಿದ ವಸ್ತುವನ್ನು ಕಾಲಿನಿಂದ ಮುಟ್ಟಬಾರದು. ಕಾಲು ತಾಕಿಸಬಾರದು. ಕಸಬರಿಗೆ, ಮನೆಯ ಮುಖ್ಯದ್ವಾರ, ಆಹಾರ, ಊಟ ಮಾಡುವ ಬಟ್ಟಲು, ಊಟದ ಪಾತ್ರೆ, ದುಡ್ಡು, ಪುಸ್ತಕ, ಹಿರಿಯರು, ದೇವರ ಸಾಮಗ್ರಿಗಳು, ಇಂಥ ವಸ್ತುಗಳನ್ನು ಕಾಲಿನಿಂದ ಸರಿಸಕೂಡದು. ಇದಕ್ಕೆ ಕಾಲು ತಾಕಿಸಬಾರದು. ಹಾಗೇನಾದರೂ ಅಪ್ಪಿ ತಪ್ಪಿ ಕಾಲು ತಾಕಿದರೂ ಕೂಡ, ನಮಸ್ಕರಿಸಬೇಕು.

ಮೂರನೇಯ ತಪ್ಪು, ಹೊಸ್ತಿಲ ಮೇಲೆ ಕುಳಿತುಕೊಳ್ಳಬಾರದು. ಮುಸ್ಸಂಜೆ ಹೊತ್ತಿನಲ್ಲಿ ಹೊಸ್ತಿನ ಮೇಲೆ  ಕುಳಿತುಕೊಳ್ಳಬಾರದು ಅಂತಾ ಹೇಳಲಾಗುತ್ತದೆ. ಆದರೆ ಹೊಸ್ತಿಲ ಮೇಲೆ ಎಂದಿಗೂ ಕೂರಬಾರದು. ಅದು ಲಕ್ಷ್ಮೀಯ ವಾಸಸ್ಥಾನ. ಹಾಗಾಗಿ ಹಿಂದೂ ಧರ್ಮದಲ್ಲಿ ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ದೀಪ ಹಚ್ಚಿದ ಬಳಿಕ, ಹೊಸ್ತಿಲಿಗೆ ನಮಸ್ಕರಿಸುತ್ತಾರೆ. ಹಾಗಾಗಿ ಎಂದಿಗೂ ಹೊಸ್ತಿಲ ಮೇಲೆ ಕುಳಿತುಕೊಳ್ಳಬೇಡಿ.

ನಾಲ್ಕನೇಯ ತಪ್ಪು, ಮನೆಯಲ್ಲಿ ಚಪ್ಪಲಿ ಧರಿಸಿ ಓಡಾಡಬಾರದು. ಇಂದಿನ ಯುವತಿಯರಿಗೆ ಮನೆಯಲ್ಲಿ ಚಪ್ಪಲಿ ಧರಿಸಿ ಓಡಾಡುವ ಶೋಕಿ ಜೋರಾಗಿದೆ. ಕೆಲವರು ಕಾಲು ಸಾಫ್ಟ್ ಆಗಿರಬೇಕು. ಕಾಲಿಗೆ ಧೂಳು ತಾಕಬಾರದು ಅನ್ನೋ ಕಾರಣಕ್ಕೆ ಮನೆಯಲ್ಲಿ ಚಪ್ಪಲಿ ಧರಿಸಿ ಓಡಾಡುತ್ತಾರೆ. ಆದರೆ ಇದು ದರಿದ್ರಕ್ಕೆ ಆಹ್ವಾನ ನೀಡಿದಂತೆ. ಅದರಲ್ಲೂ ದೇವರ ಕೋಣೆ, ಅಡುಗೆ ಕೋಣೆಗೆಲ್ಲ ಚಪ್ಪಲಿ ಧರಿಸಿ ಓಡಾಡಬಾರದು. ಇದರಿಂದ ನೀವು ಲಕ್ಷ್ಮೀಯ ಅವಕೃಪೆಗೆ ಪಾತ್ರರಾಗುತ್ತೀರಿ.

ಅವಲಕ್ಕಿ ಶೀರಾ ರೆಸಿಪಿ

ಹುಟ್ಟುವ ಮಗುವಿನ ತೂಕ ಎಷ್ಟಿರಬೇಕು?

ಗರ್ಭಿಣಿಯರಿಗೆ ವೈಟ್ ಡಿಸ್ಚಾರ್ಜ್ ಆಗಲು ಕಾರಣವೇನು..? ಇದು ಸಹಜನಾ..? ಅಸಹಜನಾ..?

- Advertisement -

Latest Posts

Don't Miss