ಮನುಷ್ಯನಲ್ಲಿ ಹಲವಾರು ಗುಣವನ್ನು ನಾವು ಕಾಣಬಹುದು. ಕೆಲವರಿಗೆ ನಗು ನಗುತ್ತಲಿರುವ ಗುಣವಿರುತ್ತದೆ. ಕೆಲವರದ್ದು ಸಿಡುಕು ಸ್ವಭಾವ. ಇನ್ನು ಕೆಲವರಿಗೆ ಕೊಂಕು ಮಾತನಾಡುವ ಗುಣ, ಇನ್ನು ಕೆಲವರು ಸಿಹಿಜೇನಿನ ನುಡಿ. ಹೀಗೆ ಹಲವಾರು ಗಣಗಳನ್ನು ನಾವು ಮನುಷ್ಯನಲ್ಲಿ ಕಾಣಬಹುದು. ಆದ್ರೆ ಚಾಣಕ್ಯರ ಪ್ರಕಾರ, ನಮ್ಮಲ್ಲಿ ಎಷ್ಟೇ ಗುಣವಿರಲಿ, ಎಂಥದ್ದೇ ಗುಣವಿರಲಿ. ನಾವು ಆ ಒಂದು ಗುಣವಿಲ್ಲದವರಾಗಿದ್ದರೆ, ಬದುಕಿದರೂ ವ್ಯರ್ಥ ಎಂದಿದ್ದಾರೆ. ಹಾಗಾದ್ರೆ ಆ ಗುಣ ಯಾವುದು ಅಂತಾ ತಿಳಿಯೋಣ ಬನ್ನಿ..
ಈ ಖುಷಿಯನ್ನು ಕಂಡುಕೊಳ್ಳಲು ಪ್ರಯತ್ನಿಸಿ.. ನಿಮ್ಮ ಜೀವನ ಉತ್ತಮವಾಗಿರುತ್ತದೆ..
ಮನುಷ್ಯ ತಮ್ಮ ಜೀವನದಲ್ಲಿ ಖುಷಿಯಾಗಿರಬೇಕು. ಐಷಾರಾಮಿ ಜೀವನ ನಡೆಸಬೇಕು. ಸಮಾಜದಲ್ಲಿ ಗೌರವ ಪಡೆಯಬೇಕು. ಆರ್ಥಿಕ ಸಂಕಷ್ಟ ಬರದೇ ಉತ್ತಮ ಜೀವನ ನಡೆಸಬೇಕು ಅಂದ್ರೆ ನಮ್ಮಲ್ಲಿ ಬುದ್ಧಿವಂತಿಕೆ ಎಂಬ ಗುಣವಿರಬೇಕು. ಜ್ಞಾನವಿರಬೇಕು. ಇವಿದ್ದರೆ ಮಾತ್ರ, ನಾವು ಅತ್ಯುತ್ತಮವಾಗಿ ಜೀವನ ನಡೆಸಬಹುದು.
ಕನಸಿನಲ್ಲಿ ಗೋವು ಕಾಣಿಸುವುದು ಶುಭವೋ ..? ಅಶುಭವೋ..?
ಓರ್ವ ಚಹಾ ಮಾರುವ ವ್ಯಕ್ತಿ ಕೂಡ ತನ್ನ ಬುದ್ಧಿವಂತಿಕೆಯಿಂದ ಕೋಟ್ಯಾಧಿಪತಿಯಾಗಬಹುದು. ಓರ್ವ ಅವಿದ್ಯಾವಂತ ಕೂಡ ಬುದ್ಧಿವಂತಿಕೆಯಿಂದ ವ್ಯಾಪಾರ ಮಾಡಿ, ದೊಡ್ಡ ಉದ್ಯಮಿಯಾಗಬಹುದು. ಹಾಗಾಗಿ ವಿದ್ಯೆ ಇಲ್ಲದಿದ್ದರೂ, ಜ್ಞಾನ ಮತ್ತು ಬುದ್ಧಿವಂತಿ ಇರುವುದು ತುಂಬಾ ಮುಖ್ಯ ಎನ್ನುತ್ತಾರೆ ಚಾಣಕ್ಯರು.