ಆರೋಗ್ಯವನ್ನು ಕಾಪಾಡಿಕೊಳ್ಳಬೇಕಾದರೆ, ಬೆಳಗಿನ ಉಪಾಹಾರವನ್ನು ರಾಜನಂತೆ ತಿನ್ನಬೇಕು ಮತ್ತು ರಾತ್ರಿ ಭೋಜನ ಬಡವರಂತೆ ಮಾಡಬೇಕು ಎಂಬ ಮಾತನ್ನು ಕೇಳಿರಬೇಕು. ಹಾಗಂತ ಈ ಮಾತನ್ನು ಅನುಸರಿಸಿಕೊಂಡು, ಕೆಲವರು ರಾತ್ರಿ ಏನನ್ನೂ ತಿನ್ನದೆ ಖಾಲಿ ಹೊಟ್ಟೆಯಲ್ಲಿ ಮಲಗುತ್ತಾರೆ. ರಾತ್ರಿ ಏನೂ ತಿನ್ನದೇ, ಖಾಲಿ ಹೊಟ್ಟೆಯಲ್ಲಿ ಮಲಗುವುದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮಗಳಾಗುತ್ತವೆ. ಈ ರೀತಿ ಮಾಡಿದರೆ, ದೇಹದಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ರಾತ್ರಿ ಖಾಲಿ ಹೊಟ್ಟೆಯಲ್ಲಿ ಮಲಗಿದರೆ, ರಾತ್ರಿ ಹಸಿವಾದಾಗ ಎಚ್ಚರವಾಗುತ್ತೆ. ಹೀಗೆ ಪದೇ ಪದೇ ಎಚ್ಚರವಾದರೆ ಸರಿಯಾಗಿ ನಿದ್ದೆ ಬರುವುದೇ ಇಲ್ಲ. ನೀವು ಏನನ್ನೂ ತಿನ್ನದಿದ್ದಾಗ ಅದು ನಿದ್ರೆಗೆ ಭಂಗ ತರುತ್ತದೆ. ಕ್ರಮೇಣ ಇದುವೇ ಅಭ್ಯಾಸವಾದರೆ ನಂತರ ನಿದ್ರಾಹೀನತೆಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ರಾತ್ರಿಯಲ್ಲಿ ಖಾಲಿ ಹೊಟ್ಟೆಯಲ್ಲಿ ಮಲಗುವುದರಿಂದ ಸ್ನಾಯುಗಳು ದುರ್ಬಲಗೊಳ್ಳುತ್ತದೆ. ಖಾಲಿ ಹೊಟ್ಟೆಯಲ್ಲಿ ಮಲಗುವುದು ಪ್ರೋಟೀನ್ ಮತ್ತು ಅಮೈನೋ ಆಮ್ಲಗಳ ಮೇಲೆ ಪರಿಣಾಮ ಬೀರುತ್ತದೆ. ಈ ಕಾರಣದಿಂದಾಗಿ, ಸ್ನಾಯುಗಳಲ್ಲಿ ದೌರ್ಬಲ್ಯ ಪ್ರಾರಂಭವಾಗುತ್ತದೆ. ಆದರೆ ಸ್ನಾಯುಗಳನ್ನು ಸದೃಢವಾಗಿಡಲು, ಆಹಾರವನ್ನು ಸರಿಯಾದ ಸಮಯದಲ್ಲಿ ಮತ್ತು ಸರಿಯಾದ ರೀತಿಯಲ್ಲಿ ಸೇವಿಸುವುದು ಮುಖ್ಯ. ರಾತ್ರಿ ಹೊತ್ತಲ್ಲಿ ಖಾಲಿ ಹೊಟ್ಟೆಯಲ್ಲಿ ಮಲಗಿದರೆ, ಎನರ್ಜಿ ಮಟ್ಟ ಕಡಿಮೆಯಾಗಬಹುದು. ಈ ಕಾರಣದಿಂದಾಗಿ ನೀವು ದುರ್ಬಲ ಮತ್ತು ದಣಿದ ಅನುಭವವಾಗುತ್ತದೆ. ಮುಂದೆ ಇದು ದೊಡ್ಡ ಸಮಸ್ಯೆಯಾಗಿ ಪರಿಣಮಿಸಬಹುದು. ರಾತ್ರಿಯಲ್ಲಿ ಖಾಲಿ ಹೊಟ್ಟೆಯಲ್ಲಿ ಮಲಗುವುದರಿಂದ, ಮೂಡ್ ಸ್ವಿಂಗ್ ಸಮಸ್ಯೆ ಎದುರಾಗುತ್ತದೆ. ಸಣ್ಣ ಸಣ್ಣ ಕಾರಣಗಳಿಗೂ ಕೋಪ ಮತ್ತು ಕಿರಿಕಿರಿಯಾಗಲು ಪ್ರಾರಂಭವಾಗುತ್ತದೆ. ಕ್ರಮೇಣ ಅದು ನಿಮ್ಮ ವ್ಯಕ್ತಿತ್ವದ ಒಂದು ಭಾಗವಾಗಿ ಬಿಡುತ್ತದೆ. ಅಂದರೆ ನಿಮ್ಮ ಸಂಪೂರ್ಣ ಇಮೆಜ್ ಬದಲಾಗಿ ಬಿಡುತ್ತದೆ. ಹಾಗಾಗಿ, ಖಾಲಿ ಹೊಟ್ಟೆಯಲ್ಲಿ ಮಲಗುವ ಅಭ್ಯಾಸವನ್ನು ಬಿಟ್ಟು ಬಿಡಿ. ರಾತ್ರಿ ಕಡಿಮೆ ತಿನ್ನಬೇಕೇ ಹೊರತು ಏನನ್ನೂ ತಿನ್ನದೇ ಮಲಗಬಾರದು.