ಹಲವು ಜೀವನ ಪಾಠ ಹೇಳಿರುವ ಚಾಣಕ್ಯರು, ಎಂಥ ಹೆಣ್ಣನ್ನ ಜೀವನ ಸಂಗಾತಿಯನ್ನಾಗಿ ಮಾಡಿಕೊಳ್ಳಬೇಕು. ಮತ್ತು ಎಂಥ ಹೆಣ್ಣಿನ ಸಹವಾಸಕ್ಕೆ ಹೋಗಬಾರದು ಅನ್ನೋ ಬಗ್ಗೆ ಹೇಳಿದ್ದಾರೆ. ಪುರುಷನಿಗೆ ಕೆಲವು ಗುಣಗಳಿರುವ ಪತ್ನಿ ಸಿಕ್ಕರೆ, ಅವನಷ್ಟು ಅದೃಷ್ಟವಂತ ಅಂತಾ ಚಾಣಕ್ಯರು ಹೇಳಿದ್ದಾರೆ. ಅದು ಯಾವ ಗುಣ ಅನ್ನೋ ಬಗ್ಗೆ ಇನ್ನಷ್ಟು ಮಾಹಿತಿಯನ್ನ ತಿಳಿಯೋಣ ಬನ್ನಿ..
ದುರಾಸೆ ಇಲ್ಲದ ಹೆಣ್ಣು: ಕೆಲವು ಹೆಣ್ಣು ಮಕ್ಕಳಿಗೆ ಗಂಡ ಎಷ್ಟೇ ಒಳ್ಳೇದು ಮಾಡಿದ್ರು, ಸಾಕಾಗೋದಿಲ್ಲಾ. ತೊಬ್ಬಂತೊಬ್ಬತ್ತು ಸಲ ಅವರು ಕೇಳಿದ್ದನ್ನೆಲ್ಲ ಕೊಡಿಸಿ, ನೂರನೇ ಬಾರಿ ಆಗಲ್ಲ ಅಂದ್ರೆ, ನೀವು ಇಷ್ಟು ದಿನ ಮಾಡಿದ್ದೆಲ್ಲ ನೀರಿನಲ್ಲಿ ಹೋಮವಾದಂತೆ. ಹಾಗಾಗಿ ದುರಾಸೆ ಇರದ ಹೆಣ್ಣು ನಿಮ್ಮ ಪತ್ನಿಯಾಗಿ ಸಿಕ್ಕರೆ, ನೀವು ಅದೃಷ್ಟವಂತರು ಎಂದರ್ಥ.
ಪರಪುರುಷನ ಸಂಗ ಮಾಡದ ಹೆಣ್ಣು: ಓರ್ವ ವಿವಾಹಿತೆ ಸಾಯುವವರೆಗೂ ಪತಿಯೊಂದಿಗೆ ಮಾತ್ರ ದೈಹಿಕ ಸಂಬಂಧ ಹೊಂದಿರಬೇಕು. ಅದನ್ನು ಬಿಟ್ಟು ಪರಪುರುಷನ ಸಂಗ ಮಾಡಿದ್ದಲ್ಲಿ, ಆಕೆಯೊಂದಿಗೆ ಪತಿ ಮತ್ತು ಪತಿಯ ಮನೆಯವರ ಮತ್ತು ಆಕೆಯ ತವರು ಮನೆಯವರ ಗೌರವ ಮಣ್ಣು ಪಾಲಾಗುತ್ತದೆ. ಹೀಗಾಗಿ ನಿಮ್ಮನ್ನಷ್ಟೇ ಪ್ರೀತಿಸುವ ಹೆಣ್ಣು ಮಗಳು ನಿಮ್ಮ ಪತ್ನಿಯಾಗಿ ಸಿಕ್ಕರೆ, ನೀವು ಅದೃಷ್ಟವಂತರು ಅರ್ಥ.
ಪತಿಯ ಸುಖದಲ್ಲಷ್ಟೇ ಅಲ್ಲದೇ, ದುಃಖದಲ್ಲೂ ಭಾಗಿಯಾಗುವವಳು: ಪತ್ನಿಯಾದವಳು ಬರೀ ಪತಿಯ ಸಂತೋಷದಲ್ಲಷ್ಟೇ ಅಲ್ಲ, ಬದಲಾಗಿ ದುಃಖದ ಸಮಯದಲ್ಲೂ ಅವನಿಗೆ ಸಾಥ್ ಕೊಡಬೇಕು. ಅವನ ಬಳಿ ದುಡ್ಡಿದ್ದಾಗ, ಅಥವಾ ಅವನು ಆರೋಗ್ಯವಾಗಿದ್ದಾಗಷ್ಟೇ ಅವನ ಬಳಿ ಇದ್ದು, ಅವನು ಅನಾರೋಗ್ಯಕ್ಕೀಡಾದಾಗ ಅಥವಾ ಅವನು ಆರ್ಥಿಕ ಸಂಕಷ್ಟಕ್ಕೀಡಾದಾಗ, ಅವನಿಗೆ ಸಾಥ್ ನೀಡದಿದ್ದಲ್ಲಿ, ಅಂಥ ಪತ್ನಿ ಇದ್ದೂ ಪ್ರಯೋಜನವಿಲ್ಲ.
ಎಷ್ಟೇ ಜಗಳವಾದರೂ ಹೊಂದಿಕೊಂಡು ಹೋಗುವ ಹೆಣ್ಣು: ಒಂದು ಕುಟುಂಬ ಎಂದ ಮೇಲೆ ಅಲ್ಲಿ, ಜಗಳ, ಮುನಿಸು, ಖುಷಿ, ಸಂಭ್ರಮ ಎಲ್ಲವೂ ಇರುತ್ತದೆ. ಹಾಗಾಗಿ ಮನೆಯ ಸೊಸೆಯಾದವಳು, ಪತ್ನಿಯಾದವಳು ಖುಷಿ ಪಡುವ ಸಂದರ್ಭದಲ್ಲಿ ಖುಷಿ ಪಟ್ಟು, ಜಗಳವಾಗುವ ಸಮಯದಲ್ಲಿ ತಾಳ್ಮೆಯಿಂದಿದ್ದರೆ ಮನೆಯಲ್ಲಿ ತನ್ನಿಂದ ತಾನೇ ನೆಮ್ಮದಿ ಬರುತ್ತದೆ.