Spiritual News: ಮನುಷ್ಯನಿಗೆ ಬದುಕಲು ಬೇಕಾಗಿರುವುದೇ ಹಣ. ಹಣವಿಲ್ಲದೇ, ನಾನು ಬದುಕಬಲ್ಲೆ ಎಂದು ತಿಳಿದರೆ ಅದು ಮೂರ್ಖತನ. ಹಾಗಾಗಿ ಮನುಷ್ಯ ದುಡಿದಿದ್ದರಲ್ಲಿ ಕೊಂಚ ಹಣವನ್ನಾದರೂ ಕೊನೆಗಾಲಕ್ಕಾಗಿ ಕೂಡಿಡಬೇಕು. ಆದರೆ ಕೆಲವೊಂದು ಸೂಚನೆಗಳು ನಮಗೆ ಆರ್ಥಿಕ ಸಮಸ್ಯೆ ಬರುತ್ತೆ ಅಂತಾ ತಿಳಿಸುತ್ತೆ. ಹಾಗಾದ್ರೆ ಹಣಕಾಸಿನ ಸಮಸ್ಯೆ ಬರುವುದಕ್ಕೂ ಮುನ್ನ ಯಾವ ಸೂಚನೆ ಸಿಗುತ್ತದೆ ಅಂತಾ ತಿಳಿಯೋಣ ಬನ್ನಿ..
ಪದೇ ಪದೇ ಮನೆಯಲ್ಲಿ ಜಗಳವಾಡಬೇಡಿ. ನೀವು ತಾಳ್ಮೆಯಿಂದ ಇದ್ದಲ್ಲಿ, ಮನೆಯಲ್ಲಿ ಜಗಳವಾಗುವುದಿಲ್ಲ. ತಾಳ್ಮೆ ಕಳೆದುಕೊಂಡಾಗಲೇ ಮನಸ್ತಾಪವಾಗುವುದು. ಇದಕ್ಕೆ ಕಾರಣ ಮನೆಯಲ್ಲಿ ನಕಾರಾತ್ಮಕ ಶಕ್ತಿಯ ಪ್ರಭಾವ ಹೆಚ್ಚಾಗಿರುವುದು. ಮನೆಯಲ್ಲಿ ಸದಾ ಸಕಾರಾತ್ಮಕ ಶಕ್ತಿ ಇರಬೇಕು ಅಂದ್ರೆ, ಮನೆ ಕ್ಲೀನ್ ಆಗಿರಲಿ. ಅದರಲ್ಲೂ ದೇವರ ಕೋಣೆ ಮತ್ತು ಅಡುಗೆ ಮನೆ ಚೆನ್ನಾಗಿ ಕ್ಲೀನ್ ಇರಬೇಕು. ಸಮಯಕ್ಕೆ ಸರಿಯಾಗಿ ಪೂಜೆ ಆಗಬೇಕು. ಯಾವ ಮನುಷ್ಯ ಸಂಬಂಧದ ವಿಷಯದಲ್ಲಿ, ವ್ಯವಹಾರದ ವಿಷಯದಲ್ಲಿ ಪ್ರಾಮಾಣಿಕನಾಗಿರುತ್ತಾನೋ ಅಂಥವರ ಮನೆಯಲ್ಲಿ ಸದಾ ನೆಮ್ಮದಿ ನೆಲೆಸಿರುತ್ತದೆ.
ಎರಡನೇಯದ್ದು ತುಳಸಿ ಗಿಡ ಒಣಗದಂತೆ ನೋಡಿಕೊಳ್ಳಿ. ಪ್ರತಿದಿನ ಬೆಳಿಗ್ಗೆ ತಿಂಡಿ ತಿನ್ನುವುದಕ್ಕೂ ಮುನ್ನ, ಹೊಸ್ತಿಲಿಗೆ ರಂಗೋಲಿ ಹಾಕಿದ ಬಳಿಕ, ಅದಕ್ಕೆ ಪೂಜೆ ಮಾಡಿದ ನೀರನ್ನು ತೆಗೆದುಕೊಂಡು ಹೋಗಿ, ತುಳಸಿ ಗಿಡಕ್ಕೆ ಹಾಕಬೇಕು. ತುಳಸಿ ಗಿಡಕ್ಕೆ ಈ ರೀತಿ ಮಿತಿಯಾಗಿ ನೀರು ಹಾಕಿದ್ರೆ, ತುಳಸಿ ಗಿಡ ಚೆನ್ನಾಗಿ ಬೆಳೆಯುತ್ತದೆ. ಇನ್ನು ಮನೆಯ ಹೆಣ್ಣುಮಕ್ಕಳು ಋತುಚಕ್ರದಲ್ಲಿರುವಾಗ, ತುಳಸಿ ಗಿಡವನ್ನು ಮುಟ್ಟಬಾರದು. ಇದರಿಂದಲೂ ಗಿಡ ಒಣಗುತ್ತದೆ. ಮತ್ತು ತುಳಸಿ ಗಿಡ ಒಣಗುವುದು ಆರ್ಥಿಕ ಸಮಸ್ಯೆಯಾಗುವುದರ ಮುನ್ಸೂಚನೆಯಾಗಿದೆ.
ಇನ್ನು ನಿಮ್ಮ ಮನೆಯಲ್ಲಿ ಪದೇ ಪದೇ ಗಾಜಿನ ಬಾಟಲಿ, ಕನ್ನಡಿ ಒಡೆದರೆ, ಅದು ಕೂಡ ಆರ್ಥಿಕ ಸಂಕಷ್ಟ ಎದುರಾಗುತ್ತದೆ ಎಂದರ್ಥ. ಹಾಗಾಗಿ ಗಾಜಿನ ವಸ್ತು ಒಡೆದಂತೆ ನೋಡಿಕೊಳ್ಳಿ. ಅದರಲ್ಲೂ ಶುಕ್ರವಾರ ಮತ್ತು ಮಂಗಳವಾರ ಗಾಜು, ಗಾಜಿನ ಬಳೆ ಒಡೆಯುವುದು ಆರ್ಥಿಕ ಸಮಸ್ಯೆಗೆ ಕಾರಣವಾಗುತ್ತದೆ.
ಇನ್ನು ಪ್ರತಿದಿನ ಭಕ್ತಿಯಿಂದ ಮನೆಯಲ್ಲಿ ಪೂಜೆ ಮಾಡಿ. ಕೆಲ ಮನೆಯಲ್ಲಿ ಇಬ್ಬರು ಮೂವರು ಗಂಡುಮಕ್ಕಳಿದ್‌ದರೆ, ಪೂಜೆ ಅವನು ಮಾಡಲಿ, ಇವನು ಮಾಡಲಿ ಎಂದು ತಮ್ಮ ತಮ್ಮಲ್ಲೇ ಜಗಳ ಮಾಡಿಕೊಳ್ಳುತ್ತಾರೆ. ಆದರೆ ಯಾರು ತಾವಾಗಿಯೇ ಭಕ್ತಿಯಿಂದ ಪೂಜೆ ಮಾಡುತ್ತಾರೋ, ಅವರ ಮೇಲೆ ದೇವರ ಕೃಪೆ ಸದಾ ಇರುತ್ತದೆ.
2024ಕ್ಕೆ Narendra Modi ಪ್ರಧಾನಿ ಆಗ್ತಾರಾ.? ಆಗಲ್ವಾ.? ನಮೋಗೆ ಸ್ತ್ರೀ ಕಂಟಕ ಇದೆಯಾ.?
2028ಕ್ಕೆ ಮತ್ತೆ Congress ಸರ್ಕಾರ ಬರುತ್ತಾ.? Siddaramaiah ಸರ್ಕಾರ 5 ವರ್ಷ ಇರಲ್ವಾ.?