Friday, October 18, 2024

Latest Posts

ನಿಮ್ಮ ಜೀವನದಲ್ಲಿ ಒಳ್ಳೆ ಸಮಯ ಬರುವುದಿದ್ದರೆ, ಈ ಸೂಚನೆ ಸಿಗುತ್ತದೆ ನೋಡಿ..

- Advertisement -

ಜೀವನ ಅಂದ ಮೇಲೆ ಸುಖ- ದುಃಖ, ಕಷ್ಟ ಕಾರ್ಪಣ್ಯ, ಜಗಳ- ಖಷಿ ಎಲ್ಲವೂ ಇರುತ್ತದೆ. ಓರ್ವ ಮನುಷ್ಯನಿಗೆ ಕಷ್ಟ ಬಂದಾಗಲೇ ಸುಖದ ಬೆಲೆ ಗೊತ್ತಾಗುತ್ತದೆ ಅಂತಾರೆ ಹಿರಿಯರು. ಅಲ್ಲದೇ, ಬರೀ ಸುಖದ ಸುಪ್ಪತ್ತಿಗೆಯಲ್ಲೇ ಬೆಳೆದರೆ, ಅವನಿಗೆ ಜೀವನ ಸಾರವೇ ತಿಳಿಯುವುದಿಲ್ಲ. ಹಾಗಾಗಿ ಸುಖದ ಜೊತೆ ಸ್ವಲ್ಪವಾದರೂ ಕಷ್ಟ ಪಡಲೇಬೇಕು. ಆದ್ರೆ ನೀವು ಬರೀ ಕಷ್ಟ ಪಡುತ್ತಲೇ ಇದ್ದು, ನಿಮಗೆ ಸುಖದ ಸಮಯ ಬಂದಾಗ, ಕೆಲ ಸೂಚನೆಗಳು ಸಿಗುತ್ತದೆಯಂತೆ. ಯಾವುದು ಆ ಸೂಚನೆ ಅನ್ನೋ ಬಗ್ಗೆ ನಾವಿಂದು ಮಾಹಿತಿ ನೀಡಲಿದ್ದೇವೆ.

ಮೊದಲ ಸಂಕೇತ, ಬ್ರಾಹ್ಮಿ ಮುಹೂರ್ತದಲ್ಲಿ ನಿಮಗೆ ಎಚ್ಚರವಾಗುವುದು. ಹಲವರಿಗೆ ರಾತ್ರಿ ಒಮ್ಮೆ ನಿದ್ರೆ ಬಂದರೆ, ಬೆಳಿಗ್ಗೆ ಯಾರಾದರೂ ಎಬ್ಬಿಸಿದಲ್ಲಿ ಮಾತ್ರ ಎಚ್ಚರವಾಗುತ್ತದೆ. ಆದ್ರೆ ಇನ್ನೂ ಕೆಲವರಿಗೆ ಬ್ರಾಹ್ಮಿ ಮುಹೂರ್ತದಲ್ಲೇ ಎಚ್ಚರವಾಗುತ್ತದೆ. ಅಂದರೆ ಬೆಳಗ್ಗಿನ ಜಾವ 4 ಗಂಟೆಗೆ ಎಚ್ಚರವಾಗುತ್ತದೆ. ಆ ಸಮಯದಲ್ಲಿ ದೇವರನ್ನು ನೆನೆದು, ಎದ್ದು ಪೂಜೆ ಪುನಸ್ಕಾರಗಳನ್ನು ಮುಗಿಸಿ, ನಿಮ್ಮ ಕಾರ್ಯದಲ್ಲಿ ತೊಡಗಿಕೊಳ್ಳಿ. ನೀವು ಸಫಲರಾಗೇ ಆಗುತ್ತೀರಿ.

ಎರಡನೇಯ ಸಂಕೇತ, ನಿಮ್ಮಲ್ಲಿನ ಸಿಟ್ಟು ಕಡಿಮೆಯಾಗಿ, ನೀವು ಹಸನ್ಮುಖಿಯಾಗಿರುವುದು. ಮನುಷ್ಯನಿಗೆ ಸಿಟ್ಟು ಕಡಿಮೆಯಾಗುತ್ತದೋ, ಅವನು ಜೀವನದಲ್ಲಿ ಅಷ್ಟು ಯಶಸ್ವಿಯಾಗುತ್ತಾನೆ. ಅವನು ಹಸನ್ಮುಖಿಯಾದಷ್ಟು, ಜನ ಅವನೊಂದಿಗೆ ಉತ್ತಮವಾಗಿರುತ್ತಾರೆ.

ಮೂರನೇಯ ಸಂಕೇತ, ಗೋಮಾತೆ ನಿಮ್ಮ ಮನೆ ಮುಂದೆ ಬಂದು ನಿಲ್ಲುವುದು. ಗೋಮಾತೆ ಎಂದರೆ, ಕಣ್ಣಿಗೆ ಕಾಣಿಸುವ ದೇವರಿದ್ದಂತೆ. ನೀವು ಮುಂಜಾನೆ ಏಳುತ್ತಿದ್ದಂತೆ, ಗೋಮಾತೆಯ ದರ್ಶನ ಮಾಡಿದರೆ, ನಿಮ್ಮ ದಿನ ಶುಭವಾಗಿರುತ್ತದೆ. ಅಲ್ಲದೇ, ನಿಮ್ಮ ಮನೆ ಮುಂದೆ ಪ್ರತಿದಿನ ಗೋವು ಬಂದು ನಿಂತರೆ, ಅದಕ್ಕೆ ತಿನ್ನಲು ಏನಾದರೂ ಕೊಡಿ. ಇದರಿಂದ ನಿಮಗೆ ಒಳ್ಳೆಯದಾಗುತ್ತದೆ. ಆದರೆ ಗೋವಿಗೆ ಎಂಜಿಲು ಮಾಡಿದ ಆಹಾರ ನೀಡಬಾರದು.

ನಾಲ್ಕನೇಯ ಸಂಕೇತ, ನೀವು ಕರಿಯದೇನೆ ಪುಟ್ಟ ಪುಟ್ಟ ಮಕ್ಕಳು ನಿಮ್ಮ ಮನೆಗೆ ಬರುವುದು. ಹೆಚ್ಚಾಗಿ ಪುಟ್ಟ ಮಕ್ಕಳು ಯಾರ ಮನೆಗೂ ಸುಲಭವಾಗಿ ಹೋಗುವುದಿಲ್ಲ. ಜನ ಇಷ್ಟವಾದರಷ್ಟೇ ಹೋಗುತ್ತಾರೆ. ಅಂಥದ್ರಲ್ಲಿ ಪುಟ್ಟ ಮಕ್ಕಳು, ನೀವು ಕರಿಯದೇ, ನಿಮ್ಮ ಮನೆಗೆ ಬಂದ್ರೆ, ನೀವು ಸಂತಸ ಪಡಿ. ಯಾಕಂದ್ರೆ, ಇದು ನಿಮ್ಮ ನೆಮ್ಮದಿಯ, ಶುಭ ದಿನಗಳು ಸಮೀಪಿಸುತ್ತಿದೆ ಎಂದರ್ಥ.

ಐದನೇಯ ಸಂಕೇತ, ಖರ್ಚು ಕಡಿಮೆ ಮಾಡುವ ಮತ್ತು ಹಲವು ವಸ್ತುಗಳ ಬಳಕೆ ಅವಶ್ಯಕತೆಗೆ ತಕ್ಕಂತೆ ಮಾಡುವ ಬುದ್ಧಿ ಬರುವುದು. ಇಂದಿನ ಕಾಲದಲ್ಲಿ ಜನ, ಅವಶ್ಯಕತೆ ಇಲ್ಲದಿದ್ದರೂ, ಸಿಕ್ಕ ಸಿಕ್ಕಿದ್ದನ್ನ ಖರೀದಿ ಮಾಡುತ್ತಾರೆ. ನಂತರ ಅದನ್ನ ಹೆಚ್ಚು ಬಳಸದೇ, ಅದಕ್ಕೆ ದುಡ್ಡನ್ನು ವ್ಯರ್ಥ ಮಾಡುತ್ತಾರೆ. ಹೀಗೆ ಮಾಡಿದರೆ, ಶುಭ ಸಮಯದ ಬದಲು, ಸಾಲ ಮಾಡುವ ಸಮಯ ಬರುತ್ತದೆ. ಹಾಗಾಗಿ ಆದಷ್ಟು ಖರ್ಚು ಕಡಿಮೆ ಮಾಡುವುದನ್ನು ಕಲಿಯಿರಿ.

ಆರನೇಯ ಸಂಕೇತ, ಅತಿಥಿ ಸತ್ಕಾರ ಮಾಡುವುದು. ಮನೆಗೆ ಬಂದ ಅತಿಥಿಗಳಿಗೆ, ಯಾವುದೇ ಸ್ವಾರ್ಥವಿಲ್ಲದೇ, ಸತ್ಕಾರ ಮಾಡಿದರೆ, ನಿಮ್ಮ ಜೀವನದಲ್ಲಿ ಶುಭಘಳಿಗೆ ಸಮೀಪಿಸುತ್ತಿದೆ ಎಂದರ್ಥ.

ಏಳನೇಯ ಸಂಕೇತ, ಮುಸ್ಸಂಜೆ ಹೊತ್ತಲ್ಲಿ, ನಿಮಗೆ ಯಾರಾದರೂ ಹಾಲು, ಹಣ, ದೀಪ, ಸಿಹಿ ತಿಂಡಿ ಕೊಡುವುದು. ಹೌದು ಸಂಧ್ಯಾಕಾಲದಲ್ಲಿ ಲಕ್ಷ್ಮೀ ಮನೆಗೆ ಬರುತ್ತಾಳೆ. ಸರಸ್ವತಿ ನಾಲಿಗೆಯ ಮೇಲೆ ಕುಳಿತುಕೊಳ್ಳುತ್ತಾಳೆ ಎಂಬ ನಂಬಿಕೆ ಇದೆ. ನಿಮಗೆ ಯಾರಾದರೂ, ಹಣ, ಹಾಲು, ದೀಪ ಅಥವಾ ಸಿಹಿ ತಿಂಡಿ ಕೊಟ್ಟರೆ, ನಿಮ್ಮ ಮನೆಗೆ ಲಕ್ಷ್ಮೀಯ ಆಗಮನವಾಗಲಿದೆ ಎಂದರ್ಥ.

- Advertisement -

Latest Posts

Don't Miss