Monday, December 23, 2024

Latest Posts

ಈ ಗಿಡಗಳೇನಾದ್ರೂ ನಿಮ್ಮ ಮನೆಯಲ್ಲಿ ಇದ್ರೆ, ನಿಮ್ಮ ಮನೆಯ ನೆಮ್ಮದಿ ಹಾಳಾಗೋದು ಗ್ಯಾರಂಟಿ..

- Advertisement -

Spiritual: ಕೆಲವರು ಮನೆಯ ಸುತ್ತಮುತ್ತ ಒಳ್ಳೆಯ ವಾತಾವರಣವಿದೆ. ಹಸಿರಾದ ಗಿಡಮರಗಳಿದೆ ಎಂದು ಮನೆ ಕೊಂಡುಕೊಳ್ಳುತ್ತಾರೆ. ಇನ್ನು ಕೆಲವರು ಮನೆಯ ಸುತ್ತಮುತ್ತಲು ಚೆಂದಗಾಣಿಸಲಿ ಎಂದು ಕೆಲ ಗಿಡಗಳನ್ನು ತಂದು ನೆಡುತ್ತಾರೆ. ಆದರೆ ಕೆಲ ಗಿಡಗಳಿಂದ ನಿಮ್ಮ ಮನೆಯ ಅಂದ ಹೆಚ್ಚಿದರೂ ಕೂಡ, ನಿಮ್ಮ ಮನೆಯ ನೆಮ್ಮದಿ ಹಾಳಾಗುತ್ತದೆ. ಹಾಗಾಗಿ ನಾವಿಂದು ಮನೆಯ ಸುತ್ತಮುತ್ತಲು ಯಾವ ಗಿಡಗಳನ್ನು ನೆಡಬಾರದು ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಿದ್ದೇವೆ.

ಪಾಪಾಸ್ ಕಳ್ಳಿ. ಗುಲಾಬಿ ಗಿಡ ಬಿಟ್ಟು, ಮುಳ್ಳಿರುವ ಗಿಡವನ್ನು ಮನೆಯಲ್ಲಿ ನೆಡಬಾರದು ಎಂದು ಹೇಳಲಾಗಿದೆ. ಯಾಕಂದ್ರೆ ಮುಳ್ಳಿರುವ ಗಿಡದಿಂದ ಮನೆಗೆ ನಕಾರಾತ್ಮಕ ಶಕ್ತಿಯ ಪ್ರವೇಶವಾಗುತ್ತದೆ. ಹಾಗಾಗಿ ಪಾಪಾಸ್ ಕಳ್ಳಿ ಗಿಡವನ್ನು ಮನೆಯಲ್ಲಿ ನೆಡಬಾರದು.

ಹತ್ತಿ ಮರ. ಹತ್ತಿ ಮರ ಅಶುಭದ ಸಂಕೇತವಾಗಿದೆ. ಹಾಗಾಗಿ ಇದನ್ನು ಮನೆಯಲ್ಲಿ ನೆಡುವುದಿಲ್ಲ. ಬದಲಾಗಿ ಖಾಲಿ ಪ್ರದೇಶದಲ್ಲಿ ಬೆಳೆಯುತ್ತಾರೆ. ಈ ಗಿಡವನ್ನು ಮನೆಯಲ್ಲಿ ನೆಟ್ಟರೆ, ನಕಾರಾತ್ಮಕ ಶಕ್ತಿಯ ಪ್ರವೇಶವಾಗುತ್ತದೆ. ಆರ್ಥಿಕ ಪರಿಸ್ಥಿತಿ ಹದಗೆಡುವುದಲ್ಲದೇ, ನೆಮ್ಮದಿಯೂ ಇರುವುದಿಲ್ಲ.

ಹುಣಸೆಹಣ್ಣಿನ ಮರ. ಹುಣಸೆಹಣ್ಣಿನ ಮರ ಎಲ್ಲಿರುತ್ತದೆಯೋ, ಅಲ್ಲಿ, ದುಷ್ಟಶಕ್ತಿಗಳು ವಾಸಿಸುತ್ತದೆ ಅನ್ನೋ ನಂಬಿಕೆ ಇದೆ. ಹಾಗಾಗಿ ಹುಣಸೆಹಣ್ಣನ್ನು ಖಾಲಿ ಜಾಗದಲ್ಲಿ ಅಥವಾ ರಸ್ತೆ ಪಕ್ಕದಲ್ಲಿ ನೆಡುತ್ತಾರೆ ವಿನಃ ಮನೆಯಲ್ಲಿ ನೆಡುವುದಿಲ್ಲ.

ಅರಳಿ ಮರ, ಆಲದ ಮರ. ಅರಳಿ ಮರದಲ್ಲಿ ಸಾತ್ವಿಕ ಶಕ್ತಿ ಇದೆ ಎಂಬ ಕಾರಣಕ್ಕೆ ಅದನ್ನು ಪೂಜಿಸಲಾಗುತ್ತದೆ. ಆದರೆ ಅರಳಿ ಮರ ಮತ್ತು ಆಲದ ಮರ ಮನೆಯ ಬಳಿ ಇರಬಾರದು. ಇದು ಮನೆಯ ನೆಮ್ಮದಿ ಹಾಳು ಮಾಡುವುದಲ್ಲದೇ, ಅನಾರೋಗ್ಯವನ್ನೂ ತಂದೊಡ್ಡುತ್ತದೆ.

ಮೆಹಂದಿ ಗಿಡ. ಮೆಹಂದಿ ಮನೆಯಲ್ಲಿದ್ದರೆ, ನಮಗೆ ಬೇಕಾದಾಗ ಅದನ್ನು ಅರೆದು ಬಳಸಬಹುದು ಅಂತಾ ಹಲವರು ಅಂದುಕೊಂಡಿರುತ್ತಾರೆ. ಆದರೆ ಮೆಹಂದಿ ಗಿಡದಲ್ಲಿ ನಕಾರಾತ್ಮಕ ಶಕ್ತಿ ಇರುತ್ತದೆ. ಹಾಗಾಗಿ ಅದನ್ನು ಮನೆಯ ಬಳಿ ನೆಡಬಾರದು. ನಿಮಗೆ ಈ ಬಗ್ಗೆ ಅರಿವಾಗುವುದಿಲ್ಲ. ಆದರೆ ಮನೆಯಲ್ಲಿ ಸದಾ ಕಲಹವಾಗುತ್ತದೆ. ಆರ್ಥಿಕ ಪರಿಸ್ಥಿತಿ ಸರಿಯಾಗಿ ಇರುವುದಿಲ್ಲ. ಹಾಗಾಗಿ ಮನೆಯ ಅಕ್ಕ ಪಕ್ಕ ಗಿಡ ನೆಡುವ ಮುನ್ನ ಆ ಗಿಡ ಸಕಾರಾತ್ಮಕ ಶಕ್ತಿ ಹೊಂದಿದೆಯೋ, ನಕಾರಾತ್ಮಕ ಶಕ್ತಿ ಹೊಂದಿದೆಯೋ ಎಂದು ತಿಳಿದು ನೆಡುವುದು ಒಳಿತು.

ಭಾರತದ 10 ಶ್ರೀಮಂತ ದೇವಸ್ಥಾನಗಳು – ಭಾಗ 2

ಭಾರತದ 10 ಪ್ರಸಿದ್ಧ ದೇವಿ ದೇವಸ್ಥಾನಗಳು- ಭಾಗ 2

ಭಾರತದ 10 ಪ್ರಸಿದ್ಧ ದೇವಿ ದೇವಸ್ಥಾನಗಳು- ಭಾಗ1

- Advertisement -

Latest Posts

Don't Miss