Spiritual: ನಮಗೆ ಗೊತ್ತಿಲ್ಲದಂತೆ, ನಮ್ಮ ಮನೆಯಲ್ಲಿರುವ ಕೆಲ ವಸ್ತುಗಳು, ನಮ್ಮ ಜೀವನದ ಮೇಲೆ ನಕಾರಾತ್ಮಕ ಶಕ್ತಿಯನ್ನು ಪಸರಿಸುತ್ತದೆ. ಅಂಥ ವಸ್ತುಗಳು ನಮ್ಮ ಬಳಿ ಇದ್ದರೆ, ಅಥವಾ ನಮ್ಮ ಮನೆಯ ಒಂದು ಮೂಲೆಯಲ್ಲಿದ್ದರೂ, ಅದರಿಂದ ನಮ್ಮ ನೆಮ್ಮದಿಯೇ ಹಾಳಾಗುತ್ತದೆ. ಆರ್ಥಿಕ ಪರಿಸ್ಥಿತಿ ಸಹ ಹಾಳಾಗುತ್ತದೆ. ಹಾಗಾದ್ರೆ ನಾವು ಎಂಥ ವಸ್ತುಗಳನ್ನು ಮನೆಯಲ್ಲಿ ಇರಿಸಬಾರದು ಎಂದು ತಿಳಿಯೋಣ ಬನ್ನಿ..
ನಿಂತು ಹೋದ ಗಡಿಯಾರ: ಗಡಿಯಾರ ನಿಂತು ಹೋದರೆ, ಅದಕ್ಕೆ ಹೊಸ ಬ್ಯಾಟರಿ ಹಾಕಿ, ಅದು ಮತ್ತೆ ಶುರುವಾಗುವಂತೆ ನೋಡಬಹುದು. ಆದರೆ ಅದು ಸರಿಯಾಗದ ಗಡಿಯಾರವಾಗಿದ್ದರೆ, ಅದನ್ನು ತೆಗೆದು ಹೊರಹಾಕುವುದು ಉತ್ತಮ. ಏಕೆಂದರೆ, ನಿಮ್ಮ ಸಮಯ ಉತ್ತಮವಾಗಿರಬೇಕು. ನಿಮ್ಮ ಅದೃಷ್ಟ ಚೆನ್ನಾಗಿರಬೇಕು ಅಂದ್ರೆ, ಮುರಿದು ಹೋದ, ನಿಂತು ಹೋದ ಗಡಿಯಾರವನ್ನು ಮನೆಯಲ್ಲಿ ಇರಿಸಬಾರದು.
ಮುರಿದ ಬೀಗ: ಉಪಯೋಗಕ್ಕೆ ಬಾರದ, ಮುರಿದ ಬೀಗವನ್ನು ಮನೆಯಲ್ಲಿ ಇಟ್ಟುಕೊಳ್ಳಬಾರದು. ಹೀಗೆ ಮಾಡಿದರೆ, ನೀವು ಎಂದಿಗೂ ಉದ್ಧಾರವಾಗುವುದಿಲ್ಲ. ಇದು ನಿಮ್ಮ ಜೀವನದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಹಾಗಾಗಿ ಮನೆಯಲ್ಲಿ ಮುರಿದ ಬೀಗವನ್ನು ಇರಿಸಬೇಡಿ.
ಮುಳ್ಳಿನ ಗಿಡ: ಇಂದಿನ ದಿನಗಳಲ್ಲಿ ಶೋಕಿಗಾಗಿ ಮನೆಯಲ್ಲೇ ಕೆಲವು ಗಿಡಗಳನ್ನು ಇಟ್ಟು, ನೀರು ಹಾಕಿ ಪೋಷಿಸುತ್ತಾರೆ. ಆದರೆ ಶಾಸ್ತ್ರಗಳ ಪ್ರಕಾರ, ಮುಳ್ಳಿರುವ ಗಿಡವನ್ನು ನೀವು ನೆಟ್ಟು, ಬೆಳೆಸುತ್ತಿದ್ದರೆ, ನೀವು ನಿಮ್ಮ ಮನೆಯಲ್ಲಿ ನಕಾರಾತ್ಮಕ ಶಕ್ತಿಯನ್ನು ಬೆಳೆಸಿದಂತಾಗುತ್ತದೆ. ಹಾಗಾಗಿ ಮುಳ್ಳಿನ ಗಿಡ ನಿಮ್ಮ ಮನೆಯಲ್ಲಿದ್ದರೆ, ಅದನ್ನು ಆದಷ್ಟು ಬೇಗ ಕಿತ್ತು ಬಿಸಾಕಿ.
ಒಡೆದ ದೇವರ ವಿಗ್ರಹ: ಒಡೆದ ದೇವರ ವಿಗ್ರಹವನ್ನು ಮನೆಯಲ್ಲಿ ಎಂದಿಗೂ ಇರಿಸಬಾರದು. ಇದರಿಂದ ಮನೆಯಲ್ಲಿ ನಕಾರಾತ್ಮಕ ಶಕ್ತಿಗಳ ಪ್ರವೇಶವಾಗುತ್ತದೆ. ಒಡೆದ ದೇವರ ವಿಗ್ರಹವಿದ್ದರೆ, ಅದನ್ನು ಯಾವುದಾದರೂ ದೇವಸ್ಥಾನದ ಬಳಿ ಇರುವ ಮರದ ಕೆಳಗೆ, ಅಥವಾ ಪದ್ಧತಿ ಪೂರ್ವಕವಾಗಿ ನದಿಗೆ ಹಾಕಿ. ಇನ್ನು ಆ ವಿಗ್ರಹಕ್ಕೆ ನೀವು ಮೊದಲು ಪೂಜಿಸುತ್ತಿದ್ದರೆ, ಅದನ್ನು ಯಾವ ರೀತಿ ಮನೆಯಿಂದ ಹೊರಹಾಕಬಹುದು ಎಂದು ನಿಮ್ಮ ಪರಿಚಯದ ಪುರೋಹಿತರ ಬಳಿ ಕೇಳಿ, ಅವರು ಹೇಳಿದ ಹಾಗೆ ಮಾಡಿ.
ಈ 3 ಜನರ ಬಗ್ಗೆ ಎಂದಿಗೂ ಕೆಟ್ಟದಾಗಿ ಮಾತನಾಡಬೇಡಿ ಎನ್ನುತ್ತಾನೆ ಶ್ರೀಕೃಷ್ಣ..
ಇಂಥ ಊಟವನ್ನು ಎಂದಿಗೂ ತಿನ್ನಬೇಡಿ: ಇದು ನಿಮ್ಮ ಅದೃಷ್ಟವನ್ನು ಕಸಿಯುತ್ತದೆ..