ನಾವು ಯಶಸ್ವಿಯಾಗೋದು ಬಿಡೋದು ನಮ್ಮಲ್ಲಿರುವ ಗುಣದ ಮೇಲೆ ಡಿಪೆಂಡ್ ಆಗಿರುತ್ತದೆ. ನಾವು ಅಳವಡಿಸಿಕೊಂಡ ಕೆಲ ಗುಣಗಳೇ ನಮ್ಮ ಶತ್ರುವಾಗಿ ಪರಿಣಮಿಸುತ್ತದೆ. ಇದರಿಂದಲೇ ನಾವು ಉದ್ಧಾರವಾಗುವ ಜಾಗದಲ್ಲಿ, ಉದ್ಧಾರವಾಗದೇ, ಸುಮ್ಮನೆ ಮೂಲೆ ಗುಂಪಾಗುತ್ತೇವೆ. ಹಾಗಾದ್ರೆ ಯಾವ 10 ಗುಣಗಳು ನಮ್ಮಲ್ಲಿರಬಾರದು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಮೊದಲನೇಯ ಗುಣ. ಬೆಳಿಗ್ಗೆಅಲಾಂ ಬಡಿದುಕೊಳ್ಳುತ್ತಿದ್ದಂತೆ, ಎದ್ದುಬಿಡಿ. ನೀವು ಅಲಾಂವನ್ನು ಸ್ನೂಜ್ ಮಾಡಿ, ಮತ್ತೊಂದಿಷ್ಟು ಹೊತ್ತು ಮಲಗೋಣ ಅಂತಾ ಡಿಸೈಡ್ ಮಾಡಿದ್ದೇ ಆದಲ್ಲಿ, ನಿಮ್ಮ ಇಡೀ ದಿನ ಉದಾಸೀನದಿಂದಲೇ ಕಳೆದು ಹೋಗುತ್ತದೆ. ಇವತ್ತು ನನಗೆ ನಿದ್ದೆ ಪೂರ್ತಿಯಾಗಿಲ್ಲ ಅಂತಲೇ ಅನ್ನಿಸುವ ಕಾರಣಕ್ಕೆ ನೀವು ಚೈತನ್ಯವಿಲ್ಲದವರಂತೆ ಇರುತ್ತೀರಿ. ಮತ್ತು ಈ ಗುಣವೇ ನಿಮ್ಮ ಯಶಸ್ಸಿಗೆ ತಡೆಗೋಡೆಯಾಗಿ ನಿಲ್ಲುತ್ತದೆ. ಈ ಗುಣವನ್ನ ಮೊದಲು ಬಿಡಿ.
ಎರಡನೇಯ ಗುಣ ನಾಳೆ ಬೆಳಿಗ್ಗೆ ಎಷ್ಟೊತ್ತಿಗೆ ಏಳಬೇಕು..? ಎಷ್ಟು ಗಂಟೆಯೊಳಗೆ ಸ್ನಾನ, ತಿಂಡಿ ಎಲ್ಲ ಮುಗಿಸಬೇಕು..? ಅದಾದ ಬಳಿಕ ಯಾವ ಕೆಲಸ ಮಾಡಬೇಕು..? ಹೀಗೆ ರಾತ್ರಿ ಮಲಗುವ ಮುನ್ನವೇ ನಾಳೆಯ ಪ್ಲಾನ್ ಏನು ಅನ್ನೋದನ್ನ ನಿರ್ಧಾರ ಮಾಡಿ ಮಲಗಿ. ಪ್ಲಾನ್ ಮಾಡೋಕ್ಕೆ ಗಂಟೆಗಟ್ಟಲೆ ಬೇಕಾಗಿಲ್ಲ. 5 ನಿಮಿಷ ಸಾಕು.
ಹೀಗೆ ಮಾಡುವುದರಿಂದ ಮರುದಿನ ಬೆಳಿಗ್ಗೆ ಎದ್ದು, ಗಡಿಬಿಡಿಯಿಂದ ದಿನ ಶುರು ಮಾಡುವ ಪರಿಸ್ಥಿತಿ ಬರುವುದಿಲ್ಲ. ಹಾಗಂತ ನೀವು ಪಟ ಪಟ ಅಂತ ಎಲ್ಲ ಕೆಲಸ ಮಾಡಬೇಕು ಅಂತಲ್ಲ. ಬದಲಾಗಿ, ಬೆಳಿಗ್ಗೆ ಬೇಗ ಎದ್ದು, ಆರಾಮಾಗಿ ಕಾಫಿ ಕುಡಿದು, ತಿಂಡಿ ತಿನ್ನಿ. ಇದಕ್ಕಂತಾನೆ ಒಂದು ಗಂಟೆ ಸಮಯ ತೆಗೆದುಕೊಳ್ಳಿ. ತದನಂತರ ಮಾಡಬೇಕಾದ ಕೆಲಸವನ್ನ ಚುರುಕಾಗಿ ಮಾಡಿ, ಅಷ್ಟೆ.
ಮೂರನೇಯ ಗುಣ ತಾಸುಗಟ್ಟಲೇ ಮೊಬೈಲ್ ಚೆಕ್ ಮಾಡುವುದು. ಕೆಲವರು ಬೆಳಿಗ್ಗೆ ಎದ್ದ ಕೂಡಲೇ, ತಮಗೆ ಯಾರ ಮೆಸೇಜ್ ಬಂತು. ಯಾರು ಯಾವ ಸ್ಟೇಟಸ್ ಹಾಕಿದ್ದಾರೆ. ಫೇಸ್‌ಬುಕ್‌ನಲ್ಲಿ ಯಾರು ಪೋಸ್ಟ್ ಹಾಕಿದ್ದಾರೆ ಅಂತಾ ನೋಡ್ತಾರೆ. ಇನ್ನು ಇನ್‌ಸ್ಟಾಗ್ರಾಮ್, ಯೂಟ್ಯೂಬ್ ನೋಡಿದ್ರಂತೂ ಅದರಲ್ಲಿರುವ ಕಲರ್‌ಫುಲ್ ವೀಡಿಯೋದಲ್ಲಿ ಮುಳುಗಿ ಹೋಗ್ತಾರೆ. ಹಾಗಾಗಿ ದಿನದಲ್ಲಿ ಸುಮಾರು ನಾಲ್ಕು ತಾಸಾದರೂ ನೀವು ಮೊಬೈಲ್ ನೋಡೋದ್ರಲ್ಲೇ ವೇಸ್ಟ್ ಮಾಡುತ್ತೀರಿ.
ಹಾಗಂತ ಮೊಬೈಲ್ ನೋಡಲೇಬಾರದು ಅಂತಲ್ಲ. ಆದ್ರೆ ಅದರಲ್ಲೇ ಮುಳುಗಿ ಹೋಗಬೇಡಿ. ಉಳಿದ ಕೆಲಸವನ್ನು ಮರಿಯಬೇಡಿ. ಮೊಬೈಲ್ ಸ್ಕ್ರಾಲ್ ಮಾಡುತ್ತ ಮಾಡುತ್ತ ನೀವೆಷ್ಟು ಟೈಮ್ ವೇಸ್ಟ್ ಮಾಡಿದ್ದೀರಿ ಅನ್ನೋ ಅಂದಾಜು ನಿಮಗಿರುವುದಿಲ್ಲ. ಹಾಗಾಗಿ ಮೊಬೈಲ್ ನೋಡುವುದನ್ನ ಕಡಿಮೆ ಮಾಡಿ.
ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯನ್ನು ಮುಂದಿನ ಭಾಗದಲ್ಲಿ ತಿಳಿಯೋಣ..