ಈ 10 ಗುಣಗಳು ನಿಮ್ಮಲ್ಲಿದ್ದರೆ ನೀವು ಎಂದಿಗೂ ಉದ್ಧಾರವಾಗುವುದಿಲ್ಲ.. ಭಾಗ 2

ನಾವು ಈ ಮೊದಲು ಯಾವ 10 ಗುಣಗಳು ನಮ್ಮಲ್ಲಿದ್ದರೆ ನಾವು ಉದ್ಧಾರವಾಗಲು ಸಾಧ್ಯವಿಲ್ಲಾ ಅನ್ನೋ ವಿಷಯಕ್ಕೆ ಸಂಬಂಧಿಸಿದಂತೆ 3 ಗುಣಗಳ ಬಗ್ಗೆ ವಿವರಣೆ ನೀಡಿದ್ದೆವು. ಈಗ ಅದರ ಮುಂದುವರಿದ ಭಾಗವಾಗಿ, ಇನ್ನುಳಿದ 3 ಗುಣಗಳ ಬಗ್ಗೆ ವಿವರಣೆ ನೋಡೋಣ..

ನಾಲ್ಕನೇಯ ಗುಣ ಬೆಳಿಗ್ಗೆ ಎದ್ದ ತಕ್ಷಣ ಚೈತನ್ಯದಾಯಕವಾಗಿ ಕೆಲಸ ಮಾಡದಿರುವುದು. ಬೆಳಿಗ್ಗೆ ಎದ್ದ ತಕ್ಷಣ, ನೀವು ಆಲಸ್ಯದಿಂದ ಕೂಡಿದ್ದರೆ, ಇಡೀ ದಿನ ಆಲಸ್ಯದಿಂದಲೇ ಇರುತ್ತೀರಿ. ಆದ್ರೆ ನೀವು ಬೆಳಿಗ್ಗೆ ಎದ್ದ ತಕ್ಷಣ ಚೈತನ್ಯದಾಯಕವಾಗಿದ್ದು, ಏಳುತ್ತಿದ್ದಂತೆ ಹಾಸಿಗೆ ಮಡಿಚಿಟ್ಟು, ಎಲ್ಲರೊಂದಿಗೆ ಖುಷಿ ಖುಷಿಯಾಗಿ ಮಾತನಾಡಿ. ಇದಾದ ಬಳಿ ನಿಮ್ಮ ದೈನಂದಿನ ಕಾರ್ಯಕ್ರಮ ಶುರು ಮಾಡಿ. ಹೀಗೆ ಖುಷಿ ಖುಷಿಯಾಗಿ ಜೋಶ್‌ನಲ್ಲಿ ದಿನ ಶುರು ಮಾಡಿದ್ರೆ, ಆ ದಿನ ಉತ್ತಮವಾಗಿರುತ್ತದೆ.

ಐದನೇಯ ಗುಣ ಬೆಳಿಗ್ಗೆ ಎದ್ದ ತಕ್ಷಣ ನೀರು ಕುಡಿಯದಿರುವುದು. ಸುಮಾರು ಜನ ಬೆಳಿಗ್ಗೆ ಎದ್ದ ತಕ್ಷಣ, ತಿಂಡಿ ತಿಂದು ಬಿಡ್ತಾರೆ. ಇಲ್ಲಾ ಕಾಫಿ- ಟೀ ಕುಡಿತಾರೆ. ಅಥವಾ ಹಣ್ಣು ತರಕಾರಿ ತಿನ್ನುತ್ತಾರೆ. ಇವೆಲ್ಲ ತಿನ್ನೋದು ತಪ್ಪು ಅಂತಲ್ಲ. ಬದಲಾಗಿ ನೀವು ಬೆಳಿಗ್ಗೆ ಎದ್ದ ತಕ್ಷಣ ಉಗುರು ಬೆಚ್ಚಗಿನ ನೀರು ಕುಡಿಯಬೇಕು. ಇದರಿಂದ ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ. ಹೀಗೆ ಆರೋಗ್ಯ ಉತ್ತಮಮವಾಗಿದ್ರೆ, ನೀವು ಜೋಶ್‌ನಲ್ಲಿ ಕೆಲಸ ಮಾಡೋಕ್ಕೆ ಆಗೋದು ತಾನೆ..? ಹಾಗಾಗಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಉಗುರು ಬೆಚ್ಚಗಿನ ನೀರು ಕುಡಿಯಿರಿ. ನಂತರ ನಿಮಗೆ ಬೇಕಾದ್ದನ್ನು ತಿನ್ನಿ.

ಆರನೇಯ ಗುಣ ಬೆಳಗ್ಗೆ ಸೂರ್ಯನ ಬೆಳಕು ತೆಗೆದುಕೊಳ್ಳದಿರುವುದು. ಬೆಳಿಗ್ಗೆ ಎದ್ದ ತಕ್ಷಣ, 8 ಗಂಟೆಯೊಳಗೆ ಸೂರ್ಯನ ಕಿರಣ ನಿಮ್ಮ ಮೈ ಮೇಲೆ ಬೀಳುವಂತೆ ಬಿಸಿಲಿಗೆ ನಿಲ್ಲಿ. ಇದರಿಂದ ನಿಮ್ಮ ಆರೋಗ್ಯ ಸುಧಾರಿಸುತ್ತದೆ.

ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯನ್ನು ಮುಂದಿನ ಭಾಗದಲ್ಲಿ ತಿಳಿಯೋಣ..

About The Author