ಈ 2 ಬುದ್ಧಿ ನಿಮ್ಮಲ್ಲಿದ್ದರೆ, ನೀವು ಜೀವನದಲ್ಲೆಂದೂ ಉದ್ಧಾರವಾಗುವುದಿಲ್ಲ..

ಮನುಷ್ಯನಿಗೆ ಉತ್ತಮ ಗುಣಗಳಿದ್ರೆ ಮಾತ್ರ, ಅವನು ಚೆನ್ನಾಗಿ, ಆರಾಮವಾಗಿ ಜೀವನ ಮಾಡಬಲ್ಲ ಅನ್ನೋದು ಎಲ್ಲರಿಗೂ ಗೊತ್ತು. ಆದ್ರೆ ನಮ್ಮಲ್ಲಿರುವ ಕೆಲ ಕೆಟ್ಟ ಗುಣಗಳೇ ನಮ್ಮನ್ನ ಬರ್ಬಾದ್ ಮಾಡಿ ಹಾಕತ್ತೆ. ಹಾಗಾಗಿ ಯಾರಿಗೆ ಈ 2 ಬುದ್ಧಿ ಇರತ್ತೋ, ಅವರು ಜೀವನದಲ್ಲೆಂದೂ ಉದ್ಧಾರವಾಗೋದಿಲ್ಲಾ ಅಂತಾ ವಿದುರರು ಹೇಳಿದ್ದಾರೆ. ಹಾಗಾದ್ರೆ ಯಾವುದು ಆ ಎರಡು ಬುದ್ಧಿ ಅಂತಾ ತಿಳಿಯೋಣ ಬನ್ನಿ..

ಯಾರಿಗೆ ಈ ಗುಣಗಳಿರುತ್ತದೆಯೋ, ಅಂಥವರು ನಾಯಕರಾಗುತ್ತಾರೆ..

ಮೊದಲನೇಯ ಬುದ್ಧಿ ನಿದ್ದೆ. ನಿದ್ದೆ ಮುಖ್ಯ ಎನ್ನುವವರು ಎಂದಿಗೂ ಉದ್ಧಾರವಾಗಲು ಸಾಧ್ಯವಿಲ್ಲ. ನಿಮಗೆ ನಿಮ್ಮ ಯಶಸ್ಸಿಗಿಂತ, ನಿದ್ದೆನೇ ಮುಖ್ಯವೆಂದಲ್ಲಿ, ನೀವು ಇದ್ದಲ್ಲೇ ಇರುತ್ತೀರಿ. ನೀವು ಜೀವನದಲ್ಲಿ ಉದ್ಧಾರವಾಗಬೇಕು ಎಂದುಕೊಂಡಿದ್ದರೆ. ಲಿಮಿಟ್‌ನಲ್ಲಿ ನಿದ್ದೆ ಮಾಡೋದನ್ನ ಕಲಿಯಬೇಕು ಎನ್ನುತ್ತಾರೆ ವಿದುರ. ಅತಿಯಾದ ನಿದ್ದೆ ಎನ್ನುವುದು ಮನುಷ್ಯನ ಜೀವನ ಹಾಳು ಮಾಡುವಂಥ, ನೆಮ್ಮದಿ ಹಾಳು ಮಾಡುವಂಥ ಕೆಟ್ಟ ಚಟವಾಗಿದೆ.

ತಿಮ್ಮನ ಮೊಟ್ಟೆಗಳು ಚಿತ್ರೀಕರಣ ಮುಕ್ತಾಯ..

ಎರಡನೇಯ ಬುದ್ಧಿ ಸೋಮಾರಿತನ. ಸೋಮಾರಿತನ ಯಾರಲ್ಲಿದೆಯೋ, ಅವರು ಎಂದಿಗೂ ಉದ್ಧಾರವಾಗುವುದಿಲ್ಲ. ಯಾವುದಾದರು ಕೆಲಸವಿದ್ದರೆ, ಅದನ್ನು ಆಮೇಲೆ ಮಾಡಿದರಾಯ್ತು, ನಾಳೆ ಮಾಡಿದರಾಯ್ತು, ಎಂದು ಮುಂದೂಡುತ್ತ ಹೋದ್ರೆ, ನೀವು ಆ ಕೆಲಸದ ಭಾರವನ್ನು ತಾಳಲಾರದೇ, ಕೆಲಸವನ್ನು ಮಾಡಲಾಗದೇ, ಕೈ ಚೆಲ್ಲಿ ಕುಳಿತುಕೊಳ್ಳಬೇಕಾಗುತ್ತದೆ. ಹಾಗಾಗಿ ಸೋಮಾರಿತನ ಬಿಟ್ಟು ಇಂದು ಮಾಡುವ ಕೆಲಸವನ್ನು ಈಗಲೇ ಮಾಡುವುದನ್ನು ಕಲಿಯಿರಿ ಎನ್ನುತ್ತಾರೆ ವಿದುರ.

About The Author