ಈ 4 ಜನರನ್ನು ಎಂದಿಗೂ ಅಪಮಾನ ಮಾಡಬೇಡಿ ಅಂತಾರೆ ಚಾಣಕ್ಯರು..

ಚಾಣಕ್ಯ ನೀತಿಯನ್ನು ಅನುಸರಿಸಿದವರು ಜೀವನದಲ್ಲಿ ಎಂದಿಗೂ ಸೋಲುವುದಿಲ್ಲ ಎಂಬ ಮಾತಿದೆ. ಯಾಕಂದ್ರೆ ಚಾಣಕ್ಯರು ತಮ್ಮ ನೀತಿಯಲ್ಲಿ ಜೀವನ ಸಾರವನ್ನೇ ಹೇಳಿದ್ದಾರೆ. ಹೇಗೆ ಬದುಕಬೇಕು. ಹೇಗೆ ಶ್ರೀಮಂತರಾಗಬೇಕು. ಸಂಬಂಧದ ಬೆಲೆ ತಿಳಿದುಕೊಳ್ಳಲು ಏನು ಮಾಡಬೇಕು ಇತ್ಯಾದಿ ವಿಷಯಗಳ ಬಗ್ಗೆ ಚಾಣಕ್ಯರು ತಮ್ಮ ಚಾಣಕ್ಯ ನೀತಿಯಲ್ಲಿ ಹೇಳಿದ್ದಾರೆ. ಅಷ್ಟೇ ಅಲ್ಲದೇ, ಯಾರನ್ನು ಅಪಮಾನಿಸಿದರೆ, ನೀವು ಕಷ್ಟ ಅನುಭವಿಸಬೇಕಾಗುತ್ತದೆ ಅನ್ನೋ ಬಗ್ಗೆಯೂ ಹೇಳಿದ್ದಾರೆ. ಈ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..

ಯಮಧರ್ಮರಾಜನನ್ನೇ ಹಿಮ್ಮೆಟ್ಟಿಸಿದ ಶಕ್ತಿಯುತವಾದ ಮಂತ್ರ..!

ಅಪ್ಪ ಅಮ್ಮನನ್ನು ಎಂದಿಗೂ ಅವಮಾನಿಸಬೇಡಿ. ಜನ್ಮ ಕೊಟ್ಟ ಅಮ್ಮನನ್ನು, ಜೀವನ ಮಾಡಲು ಕಲಿಸಿದ ಅಪ್ಪನನ್ನು ಎಂದಿಗೂ ಅವಮಾನಿಸಬೇಡಿ ಎಂದಿದ್ದಾರೆ ಚಾಣಕ್ಯರು. ನೀವು ಬೆಳೆದು ಎಷ್ಟೇ ಹಣ ಗಳಿಸಬಹುದು. ಎಷ್ಟೇ ಶ್ರೀಮಂತರಾಗಬಹುದು, ನಿಮ್ಮ ಅಪ್ಪ ಅಮ್ಮನಿಗೆ ಎಷ್ಟೇ ಹಣ ಕೊಡಬಹುದು. ಆದ್ರೆ ನೀವೇನೆ ಕೊಟ್ಟರೂ, ಎಷ್ಟೇ ಕೊಟ್ಟರು, ಅಮ್ಮ 9 ತಿಂಗಳು ಹೊತ್ತು, ಹೆತ್ತ ಋಣವನ್ನು ಎಂದಿಗೂ ತೀರಿಸಲು ಸಾಧ್ಯವಿಲ್ಲ. ಹಾಗಾಗಿ ಅಪ್ಪ ಅಮ್ಮನನ್ನು ಎಂದಿಗೂ ಅವಮಾನಿಸಬೇಡಿ.

ಬ್ರಾಹ್ಮಣ. ಮೊದಲಿನ ಕಾಲದಲ್ಲಿ ಬ್ರಾಹ್ಮಣರೇ ಶಿಕ್ಷಕರಾಗಿದ್ದರು. ಜ್ಞಾನ ಹಂಚುತ್ತಿದ್ದರು. ಮಹಾರಾಜರಿಗೆ ಬ್ರಾಹ್ಮಣರೇ ಮಂತ್ರಿಗಳಾಗಿ, ರಾಜ್ಯ ನಡೆಸುವುದು ಹೇಗೆ ಎಂಬ ಬಗ್ಗೆ ಸೂಚಿಸುತ್ತಿದ್ದರು. ದೇವಸ್ಥಾನಗಳಲ್ಲಿ ಪದ್ಧತಿ ಪ್ರಕಾರವಾಗಿ ಪೂಜೆ ಮಾಡುತ್ತಿದ್ದರು. ಹಾಗಾಗಿ ಜ್ಞಾನಿಗಳಾದ ಬ್ರಾಹ್ಮಣರನ್ನು ನಿಂದಿಸಬಾರದು, ಅಪಮಾನಿಸಬಾರದು ಎಂದಿದ್ದಾರೆ ಚಾಣಕ್ಯರು.

ಶ್ರೀಕೃಷ್ೞನ ಬಳಿ ಎಂಥೆಂಥ ಅಸ್ತ್ರಗಳಿದ್ದವು ಗೊತ್ತೇ..? ದಿವ್ಯಾಸ್ತ್ರದ ಶಕ್ತಿಯ ವಿವರಣೆ..

ಶಿಕ್ಷಕರನ್ನು ಅವಮಾನಿಸಬೇಡಿ. ನಿಮ್ಮ ಶಿಕ್ಷಕರು ನಿಮಗೆ ಎಷ್ಟೇ ಕಠಿಣ ಶಿಕ್ಷೆ ಕೊಟ್ಟಿರಬಹುದು. ಎಷ್ಟೇ ಬೈದಿರಬಹುದು. ಆದ್ರೆ ಅದೆಲ್ಲವೂ ನಿಮ್ಮ ಭವಿಷ್ಯ ಉತ್ತಮವಾಗಿರಲಿ ಎಂಬ ಕಾರಣಕ್ಕಷ್ಟೇ. ಹಾಗಾಗಿ ನಿಮ್ಮ ಒಳಿತನ್ನು ಬಯಸಿದ ಶಿಕ್ಷಕರನ್ನು ಎಂದಿಗೂ ಅಪಮಾನಿಸಬೇಡಿ ಎಂದಿದ್ದಾರೆ ಚಾಣಕ್ಯರು.

ಉತ್ತಮ ಗೆಳೆಯನನ್ನು ಎಂದಿಗೂ ಅವಮಾನಿಸಬೇಡಿ. ನಿಮ್ಮ ಒಳಿತನ್ನು ಬಯಸುವ, ನೀವು ಕಷ್ಟದಲ್ಲಿರುವಾಗ, ನಿಮ್ಮ ಸಹಾಯಕ್ಕೆ ಬಂದ ಗೆಳೆಯನನ್ನು ಎಂದಿಗೂ ಅವಮಾನಿಸಬೇಡಿ. ಯಾಕಂದ್ರೆ ನಂಬಿಕಸ್ಥ ಗೆಳೆಯ ಸಿಗೋದು ಪುಣ್ಯ ಎಂದಿದ್ದಾರೆ ಚಾಣಕ್ಯರು.

ಇನ್ನು ನಿಮಗೆ ಹೆಣ್ಣು ಕೊಟ್ಟ ಅತ್ತೆ ಮಾವನನ್ನು ಎಂದಿಗೂ ಅವಮಾನಿಸಬೇಡಿ. ನಿಮ್ಮ ಪತ್ನಿ, ನಿಮ್ಮ ಅಪ್ಪ ಅಮ್ಮನಿಗೆ ಗೌರವ ನೀಡುತ್ತಾಳೆ. ಕಾಳಜಿ ಮಾಡುತ್ತಾಳೆ. ಅದೇ ರೀತಿ ನೀವೂ ಆಕೆಯ ಅಮ್ಮ ಅಪ್ಪ, ಮನೆ ಜನರಿಗೆ ಗೌರವ ನೀಡಬೇಕು. ನೀವು ಯಾವಾಗ ಅವರ ಮನೆ ಮಂದಿಯನ್ನು ಅವಮಾನಿಸುತ್ತಿರೋ, ಅಂದೇ ನಿಮ್ಮ ನೆಮ್ಮದಿ ಹಾಳಾಯಿತು ಎಂದರ್ಥ. ಹಾಗಾಗಿ ಹೆಣ್ಣು ಕೊಟ್ಟ ಅತ್ತೆ ಮಾವನನ್ನು ಯಾವಾಗಲೂ ಗೌರವದಿಂದ ಕಾಣಿ.

About The Author