Spiritual: ನಾವು ಶ್ರೀಮಂತರಾಗಬೇಕು. ಲಕ್ಷ್ಮೀ ದೇವಿ ನಮ್ಮ ಮೇಲೆ ಕೃಪೆ ತೋರಬೇಕು. ನಮ್ಮ ಬಳಿ ರಾಶಿ ರಾಶಿ ಹಣವಿರಬೇಕು ಅಂತಾ ಯಾರಿಗೆ ತಾನೇ ಅನ್ನಿಸುವುದಿಲ್ಲ. ಆದರೆ ನಮ್ಮ ಮೇಲೆ ಲಕ್ಷ್ಮೀ ದೇವಿ ಕೃಪೆ ತೋರಿಸಬೇಕು ಅಂದ್ರೆ, ನಾವು ಮನೆಯನ್ನು ಸರಿಯಾಗಿ ಇಟ್ಟುಕೊಳ್ಳಬೇಕು. ಆದರೆ ನಾವು ಮನೆಯಲ್ಲಿ ಮಾಡುವ ಕೆಲ ತಪ್ಪುಗಳಿಂದಲೇ, ಲಕ್ಷ್ಮೀ ದೇವಿ ನಮ್ಮ ಮೇಲೆ ಕುಪಿತಳಾಗುತ್ತಾಳೆ. ಹಾಗಾದ್ರೆ ಮನೆಯಲ್ಲಿ ಯಾವ ತಪ್ಪು ಮಾಡಬಾರದು ಅಂತಾ ತಿಳಿಯೋಣ ಬನ್ನಿ..
ನೀವು ಮಲಗುವ ಬೆಡ್ ನೀಟ್ ಆಗಿ ಇಲ್ಲದಿರುವುದು. ರಾತ್ರಿ ಮಲಗಿ, ಬೆಳಗ್ಗೆ ಎದ್ದಾಗ, ಆ ಬೆಡ್ ಹಾಳಾಗಿರುತ್ತದೆ. ಹಾಗಾಗಿ ಬೆಳಿಗ್ಗೆ ಎದ್ದ ತಕ್ಷಣ, ಹಾಸಿಗೆ ಮಡಿಚಿ, ನೀಟ್ ಆಗಿ ಇಡಬೇಕು. ಬೆಡ್ ಮೇಲೆ ಬೆಡ್‌ಶೀಟ್‌ನ್ನು ಹಾಗೆ ಬಿಸಾಕಿ ಹೋದರೆ, ಅಂಥ ಸ್ಥಳದಲ್ಲಿ ನಕಾರಾತ್ಮಕ ಶಕ್ತಿಯ ಪ್ರವೇಶವಾಗುತ್ತದೆ. ಬರೀ ಬೆಡ್ ಅಲ್ಲ, ಯಾವುದೇ ಬಟ್ಟೆಯನ್ನು ಮುದ್ದೆ ಮಾಡಿ ಹಾಕಿದರೆ, ಅದರಲ್ಲಿ ದುಷ್ಟಶಕ್ತಿಯ ಪ್ರವೇಶವಾಗುತ್ತದೆ ಅಂತಾ ಹೇಳುತ್ತಾರೆ. ಹಾಗಾಗಿ ಬಟ್ಟೆ, ಬೆಡ್ ಸರಿಯಾಗಿ ಮಡಿಚಿಡಿ.
ಒದ್ದೆ ಬಟ್ಟೆಯನ್ನು ಎಲ್ಲೆಂದರಲ್ಲಿ ಬಿಸಾಕುವುದು. ಒದ್ದೆ ಬಟ್ಟೆ, ಟವಲ್‌ನ್ನು ಸರಿಯಾಗಿ ಒಣಗಿಸಬೇಕು. ಎಲ್ಲೆಂದರಲ್ಲಿ ಬಿಸಾಕಬಾರದು. ಬೆಡ್ ಮೇಲೆ ಹಾಕಬಾರದು. ಇದು ಮನೆಗೆ ಒಳ್ಳೆಯದಲ್ಲ. ಇಂಥ ಅಭ್ಯಾಸಗಳಿಂದಲೇ, ನಾವು ಮನೆಗೆ ದರಿದ್ರವನ್ನು ಬರಮಾಡಿಕೊಳ್ಳುವುದು. ಹಾಗಾಗಿ ಒದ್ದೆ ಬಟ್ಟೆಯನ್ನು ಸರಿಯಾಗಿ ಒಣಗಿಸಬೇಕು.
ಟಾಯ್ಲೆಟ್ ಬಾಗಿಲು ತೆರೆದಿರುವುದು. ಟಾಯ್ಲೆಟ್ ಬಾಗಿಲು ಸದಾ ತೆಗೆದಿದ್ದರೆ, ಅಂಥ ಮನೆಯಲ್ಲಿ ನಕಾರಾತ್ಮಕ ಶಕ್ತಿಯ ಪ್ರಭಾವ ಹೆಚ್ಚಾಗಿರುತ್ತದೆ. ಅಂಥ ಮನೆಯಲ್ಲಿ ಸದಾ ಒಬ್ಬರಿಗಾದರೂ ಅನಾರೋಗ್ಯ ಕಾಡುತ್ತಲೇ ಇರುತ್ತದೆ. ಉಳಿತಾಯ ಮಾಡಬೇಕು ಅಂತಿದ್ದರೂ, ಹಣ ಉಳಿಸಲು ಸಾಧ್ಯವಾಗುವುದಿಲ್ಲ. ಹಾಗಾಗಿ ಟಾಯ್ಲೆಟ್, ಬಾತ್‌ರೂಮ್ ಬಾಗಿಲು ಮುಚ್ಚಿಡಿ.
ಧರಿಸುವ ಬಟ್ಟೆ ಕೊಳಕಾಗಿರುವುದು, ಹರಿದಿರುವುದು. ನಾವು ಧರಿಸುವ ಬಗ್ಗೆ ಹರಿದಿರಬಾರದು. ಕೊಳಕಾಗಿರಬಾರದು. ಆ ಬಟ್ಟೆಯಿಂದ ವಾಸನೆ ಬರಬಾರದು. ಅಂಥ ಬಟ್ಟೆಯಲ್ಲಿ ಇದ್ದರೆ, ನೀವು ಲಕ್ಷ್ಮೀ ದೇವಿಯ ಅವಕೃಪೆಗೆ ಪಾತ್ರರಾಗುತ್ತೀರಿ. ಇದರಿಂದ ಜನರು ಕೂಡ ನಿಮ್ಮ ಬಳಿ ಬರಲು, ನಿಮ್ಮೊಂದಿಗೆ ಮಾತನಾಡಲು ಇಚ್ಛಿಸುವುದಿಲ್ಲ. ನೀವು ಉದ್ಧಾರವಾಗಲು ಸಾಧ್ಯವಾಗುವುದಿಲ್ಲ. ಹಾಗಾಗಿ ಸ್ವಚ್ಛವಾದ ಬಟ್ಟೆ ಧರಿಸಿ.
ಪ್ರತಿದಿನ ಕಸ ಗುಡಿಸದಿರುವುದು. ಮನೆಯಲ್ಲಿ ಪ್ರತಿದಿನ ಎರಡು ಹೊತ್ತು ಕಸ ಗುಡಿಸಬೇಕು. ನೆಲ ಒರೆಸಬೇಕು. ಮನೆ ಸ್ವಚ್ಛವಾಗಿರಬೇಕು. ಯಾವ ಮನೆಯಲ್ಲಿ ಹೆಚ್ಚು ಧೂಳು, ಕಸ, ಬಲೆ ಇರುತ್ತದೆಯೋ, ಅಂಥ ಮನೆಯಲ್ಲಿ ನೆಮ್ಮದಿ ಇರುವುದಿಲ್ಲ. ಕೈಯಲ್ಲಿ ಕಾಸು ನಿಲ್ಲುವುದಿಲ್ಲ. ಹಾಗಾಗಿ ಮನೆಯನ್ನು ಕ್ಲೀನ್ ಆಗಿ ಇಟ್ಟುಕೊಳ್ಳಬೇಕು. ಮನೆಯಲ್ಲಿ ಕಸ ಗುಡಿಸದಿದ್ದರೆ, ಮನೆಯಲ್ಲಿ ನಕಾರಾತ್ಮಕ ಶಕ್ತಿ ಹೆಚ್ಚುತ್ತದೆ. ದರಿದ್ರ ಲಕ್ಷ್ಮೀಯ ಆಗಮನವಾಗುತ್ತದೆ.
ಅಡುಗೆ ಮನೆ ಕ್ಲೀನ್ ಇಲ್ಲದಿರುವುದು. ಯಾವ ಮನೆಯಲ್ಲಿ ಅಡುಗೆ ಮನೆ ಕ್ಲೀನ್ ಆಗಿ, ಇರುವುದಿಲ್ಲವೋ, ಅಲ್ಲಿ ಸದಾ ಆರ್ಥಿಕ ಸಮಸ್ಯೆ, ನೆಮ್ಮದಿ ಇಲ್ಲದ ವಾತಾವರಣವಿರುತ್ತದೆ. ನೀವು ಅಡುಗೆ ಕೋಣೆ ಸ್ವಚ್ಛವಾಗಿ ಇಟ್ಟುಕೊಳ್ಳದಿದ್ದಲ್ಲಿ, ಅನ್ನಪೂರ್ಣೆಯ ಕೋಪಕ್ಕೆ ಗುರಿಯಾಗುತ್ತೀರಿ. ಆಗಲೂ ಆರ್ಥಿಕ ಪರಿಸ್ಥಿತಿ ಹದಗೆಡುತ್ತದೆ. ಹಾಗಾಗಿ ಅಡುಗೆ ಮನೆ ಕ್ಲೀನ್ ಇರಲಿ.