Sunday, September 8, 2024

Latest Posts

ಈ ವಿಷಯವನ್ನ ಗಮನದಲ್ಲಿಟ್ಟುಕೊಂಡರೆ ನೀವು ಲೀಡರ್ ಆಗುವುದನ್ನ ಯಾರೂ ತಡೆಯಲಾಗುವುದಿಲ್ಲ..

- Advertisement -

ಕೆಲವರಿಗೆ ತಾನು ಜೀವನದಲ್ಲಿ ಏನಾದರೂ ಸಾಧಿಸಬೇಕು, ಯಶಸ್ಸು ಗಳಿಸಬೇಕು ಅನ್ನೋ ಆಸೆ ಇರುತ್ತದೆ. ಉದಾಹರಣೆಗೆ ಒಂದು ಕಂಪನಿ ಕಟ್ಟಬೇಕು. ಅದರಲ್ಲಿ ಹಲವಾರು ಮಂದಿಗೆ ತಾನು ಕೆಲಸ ಕೊಡಬೇಕು, ಲೀಡರ್ ಆಗಬೇಕು ಅನ್ನೋ ಆಸೆ ಇರುತ್ತದೆ. ಅಥವಾ ತಾನು ಕೆಲಸ ಮಾಡುವ ಕಂಪನಿಯಲ್ಲೇ ಲೀಡರ್ ಆದ್ರೂ ಆಗ್ಬೇಕು ಅಂತಾ ಇರತ್ತೆ. ಆದ್ರೆ ಆ ಲೀಡರ್‌ಶಿಪ್ ಹೇಗೆ ಪಡೆಯಬೇಕು ಅಂತಾ ಗೊತ್ತಿರುವುದಿಲ್ಲ. ಆದ್ರೆ ನೀವು ಕೆಲ ವಿಷಯಗಳನ್ನು ಗಮನದಲ್ಲಿಟ್ಟುಕೊಂಡರೆ ಲೀಡರ್ ಆಗಬಹುದು. ಹಾಗಾದ್ರೆ ಯಾವ ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು ಅಂತಾ ತಿಳಿಯೋಣ ಬನ್ನಿ..

ಒಂದು ಕಾಡು ಪ್ರದೇಶದಲ್ಲಿ ಜಿಂಕೆಗಳ ಗುಂಪಿತ್ತು. ಆ ಗುಂಪಿಗೊಬ್ಬ ರಾಜನಿದ್ದ. ಅವನಿಗೆ ಇಬ್ಬರು ಮಕ್ಕಳಿದ್ದರು. ಒಬ್ಬವನು ಬೀರ ಮತ್ತೊಬ್ಬವ ಶೂರ.  ರಾಜನಿಗೆ ವಯಸ್ಸಾಗುತ್‌ತಿದ್ದಂತೆ, ಅವನು ತನ್ನ ಮಕ್ಕಳನ್ನು ಕರೆದು ಮುಂದಿನ ಜವಾಬ್ದಾರಿಯನ್ನ ಅವರಿಗೆ ವಹಿಸಿದ. ಒಂದು ಮಗನಿಗೆ 50 ಜಿಂಕೆಗಳ ಜವಾಬ್ದಾರಿ ಕೊಟ್ಟರೆ, ಇನ್ನೊಬ್ಬ ಮಗನಿಗೂ ಇನ್ನುಳಿದ 50 ಜಿಂಕೆಗಳ ಜವಾಬ್ದಾರಿ ವಹಿಸಿದ.

ಈ ಕಥೆಯನ್ನ ಕೇಳಿದ್ದಲ್ಲಿ ನಿಮ್ಮ ಸೋಂಬೇರಿತನವನ್ನ ಬಿಡುತ್ತೀರಿ..

ಆದ್ರೆ ಆ ಜಿಂಕೆಯ ರಾಜನಿಗೊಂದು ಹೆದರಿಕೆ ಇತ್ತು. ಅದೇನೆಂದರೆ, ರೈತರ ಬೆಳೆಗಳನ್ನು ಕಾಡು ಪ್ರಾಣಿಗಳು ತಿನ್ನುತ್ತದೆ ಎಂದು ರೈತರು ತಮ್ಮ ಹೊಲಗಳಿಗೆ, ಬೇಲಿ ಹಾಕುತ್ತಿದ್ದರು. ಬೇಟೆಗಾರರನ್ನ ನೇಮಿಸುತ್ತಿದ್ದರು. ಆ ಬೇಟೆಗಾರರು ಜಿಂಕೆಗಳು ಬೆಳೆ ತಿನ್ನಲು ಬಂದಾಗ, ಅವುಗಳ ಶಿಕಾರಿ ಮಾಡಿ, ಅವುಗಳ ಮಾಂಸವನ್ನೇ ಆಹಾರವನ್ನಾಗಿ ತಿನ್ನುತ್ತಿದ್ದರು. ಆದ್ರೆ ಯಾವಾಗ ಈ ಜಿಂಕೆಗಳ ರಾಜ ಬಂದನೋ, ಜಿಂಕೆಗಳು ಬೇಟೆಗಾರರ ಕೈವಶವಾಗಲು ಈತ ಬಿಟ್ಟಿರಲಿಲ್ಲ. ಅಷ್ಟು ಜೋಪಾನವಾಗಿ ಜಿಂಕೆಗಳನ್ನ ಕಾಪಾಡಿಕೊಂಡಿದ್ದ. ಅಲ್ಲದೇ, ಅವುಗಳಿಗೆ ಆಹಾರ ಕೊರತೆಯಾಗದಂತೆ ನೋಡಿಕೊಂಡಿದ್ದ.

ಈ ಬಗ್ಗೆ ತನ್ನ ಇಬ್ಬರೂ ಮಕ್ಕಳಿಗೆ ಬುದ್ಧಿ ಹೇಳಿದ. ಅಲ್ಲದೇ ತನ್ನ ಗುಂಪಿನ ಜಿಂಕೆಗಳನ್ನು ಹೇಗೆ ರಕ್ಷಿಸಿಕೊಳ್ಳಬೇಕು ಅಂತಲೂ ಹೇಳಿದ. ಶೂರ ಅಪ್ಪ ಹೇಳಿದ ಎಲ್ಲ ಮಾತನ್ನೂ ಗಮನವಿಟ್ಟು ಕೇಳಿಸಿಕೊಂಡ. ಆದ್ರೆ ಬೀರ ಅಪ್ಪನ ಮಾತನ್ನು ಕಡೆಗಣಿಸಿದ. ಮರುದಿನ ಶೂರ ಮತ್ತು ಬೀರ ಇಬ್ಬರೂ ತಮ್ಮ ತಮ್ಮ ಜಿಂಕೆ ಗುಂಪಿನೊಂದಿಗೆ ಊರು ಬಿಡುವ ಬಗ್ಗೆ ಚರ್ಚಿಸಿದರು. ಫಸಲು ತೆಗೆಯುವ ತನಕ ನಾವು ಊರಿಗೆ ಹೋಗುವಂತಿಲ್ಲ. ಕಾಡಲ್ಲೇ ಉಳಿಸಬೇಕು. ಫಸಲಿನ ಕಟಾವು ಆದ ಮೇಲೆ ಊರಿಗೆ ಬರಬೇಕು ಎಂದು ಚರ್ಚಿಸಲಾಯಿತು.

ರಾತ್ರಿಯಾಗುತ್ತಿದ್ದಂತೆ ಎರಡೂ ಗುಂಪು ಊರು ಬಿಟ್ಟಿತು. ಬೆಳಗಾಗುತ್ತಿದ್ದಂತೆ ಶೂರ ತನ್ನ ಗುಂಪನ್ನು ಮನುಷ್ಯರು ಸುಳಿಯದ ಜಾಗದಲ್ಲಿರಿಸಿದ. ಅಲ್ಲಿ ಆಹಾರ ಮತ್ತು ನೀರಿನ ವ್ಯವಸ್ಥೆ ಇತ್ತು. ಶೂರನ ಗುಂಪಿನ ಜಿಂಕೆಗಳು ಹಗಲು ವಿಶ್ರಾಂತಿ ಪಡೆದು, ರಾತ್ರಿ ಆ ಜಾಗ ಬಿಡುತ್ತಿದ್ದವು. ಆದ್ರೆ ಬೀರ ತಾನು ಶೂರನಿಂದ ಮೊದಲು ಬೇರೆ ಊರು ಸೇರಬೆಕೆಂಬ ದುರಾಸೆಯಿಂದ, ತನ್ನ ಗುಂಪಿನ ಜಿಂಕೆಗಳಿಗೆ ವಿಶ್ರಾಂತಿ ತೆಗೆದುಕೊಳ್ಳಲು ಸಮಯ ಕೊಡದೇ, ಕರೆದುಕೊಂಡು ಹೋಯಿತು. ಪರಿಣಾಮವಾಗಿ ಹಗಲಿನಲ್ಲಿ ಬೇಟೆಗಾರರು ಬೀರನ ಗುಂಪಿನ ಜಿಂಕೆಗಳನ್ನ ಬೇಟೆಯಾಡಿದರು. ಆದರೆ ಈ ವಿಷಯ ಬೀರನಿಗೆ ಗೊತ್ತಾಗಲಿಲ್ಲ.

ಚಳಿಗಾಲದಲ್ಲಿ ರಾಗಿಲಡ್ಡು ವಿಶೇಷ.. ಈ ಸಮಸ್ಯೆಗಳಿಗೆ ದಿವ್ಯ ಔಷಧ..!

ಕೊನೆಗೆ ಜಾಣ ಶೂರ ಮರಳಿ ಊರಿಗೆ ಬಂದಾಗ, ಅವನ ಗುಂಪಿನಲ್ಲಿ 50 ಜಿಂಕೆಗಳು ಹಾಗೇ ಇದ್ದವು. ಆದ್ರೆ ಬೀರ ಊರಿಗೆಬಂದಾಗ ಅವನ ಗುಂಪಿನಲ್ಲಿ ಬರೀ 20 ಜಿಂಕೆಗಳಿದ್ದವು. ಆದರೆ ಅವನಿಗೆ ಉಳಿದ 30 ಜಿಂಕೆಗಳು ಎಲ್ಲಿ ಹೋದವು ಅಂತಲೇ ಗೊತ್ತಿರಲಿಲ್ಲ. ಯಾಕಂದ್ರೆ ಅವನು ಬರೀ ತನ್ನ ಬಗ್ಗೆ ಯೋಚಿಸುತ್ತಿದ್ದ. ಅವನ ತಲೆಯಲ್ಲಿ ಶೂರನನ್ನು ಸೋಲಿಸಬೇಕು ಅನ್ನೋ ಹಪಹಪಿಯಿತ್ತೇ ವಿನಃ, ತನ್ನ ಗುಂಪಿನ ಜಿಂಕೆಗಳನ್ನ ಕಾಯ್ದುಕೊಳ್ಳಬೇಕು ಅನ್ನೋ ಬುದ್ಧಿವಂತಿಕೆ ಇರಲಿಲ್ಲ.

ಹಾಗಾಗಿ ಕೋಪಗೊಂಡ ಜಿಂಕೆಗಳ ರಾಜ, ಬೀರನ ಬಳಿ ಇದ್ದ ಜಿಂಕೆಗಳನ್ನ, ಶೂರನಿಗೆ ಕೊಟ್ಟು, ಶೂರನನ್ನು ಜಿಂಕೆಗಳ ರಾಜನನ್ನಾಗಿ ಮಾಡುತ್ತಾನೆ. ಅದೇ ರೀತಿ ಯಾವ ಮನುಷ್ಯ ಗುರಿ ಮುಟ್ಟುವ ವೇಳೆ ತನ್ನ ಜೊತೆಗೆ ತನ್ನ ಜೊತೆಗಾರರ ಬಗ್ಗೆಯೂ ಕಾಳಜಿ ವಹಿಸುವವನು, ಅವನು ಜೀವನದಲ್ಲಿ ಖಂಡಿತ ಉದ್ಧಾರವಾಗುತ್ತಾನೆ. ಉತ್ತಮ ನಾಯಕನೂ ಆಗುತ್ತಾನೆ.

- Advertisement -

Latest Posts

Don't Miss