Spiritual Story: ನಮ್ಮ ಕೆಲಸದಲ್ಲಿ ನಾವು ಅಭಿವೃದ್ಧಿ ಹೊಂದಬೇಕು. ಕೆಲಸದಲ್ಲಿ ಯಶಸ್ಸು ಸಾಧಿಸಬೇಕು ಅನ್ನುವಹಲವರು ದೇವರನ್ನು ನಂಬುತ್ತಾರೆ. ಅಂಥವರು ತಾವು ಕೆಲಸ ಮಾಡುವ ಟೇಬಲ್ ಮೇಲೆ ಯಾವ ದೇವರ ಮೂರ್ತಿಯನ್ನು ಇಟ್ಟರೆ, ಅವರಿಗೆ ಯಶಸ್ಸು ಸಿಗುತ್ತದೆ ಅನ್ನೋ ಬಗ್ಗೆ ನಾವಿಂದು ಹೇಳಲಿದ್ದೇವೆ.
ಮೊದಲನೇಯದಾಗಿ ಪ್ರಥಮ ಪೂಜಿತ ಗಣಪತಿ. ಹಲವರು ತಮ್ಮ ಕೆಲಸದ ಟೇಬಲ್ ಮೇಲೆ ಗಣಪತಿ ವಿಗ್ರಹವನ್ನು ಇಡುತ್ತಾರೆ. ಏಕೆಂದರೆ, ವಿದ್ಯೆ ಬುದ್ಧಿ, ನಯ, ವಿನಯ, ಆರೋಗ್ಯ, ಆಯುಷ್ಯ, ಯಶಸ್ಸು ಎಲ್ಲವನ್ನೂ ನೀಡುವ ಮಹಾಗಣಪತಿ ಆಶೀರ್ವಾದ ನಮ್ಮ ಮೇಲೆ ಇದ್ದರೆ, ನಾವು ಯಶಸ್ಸು ಗಳಿಸುತ್ತೇವೆ ಅನ್ನೋ ನಂಬಿಕೆ ಇದೆ. ಹಾಗಾಗಿ ಕೆಲಸದ ಟೇಬಲ್ ಮೇಲೆ ಗಣಪತಿ ವಿಗ್ರಹ ಇರಿಸಲಾಗುತ್ತದೆ.
ಎರಡನೇಯದಾಗಿ ಲಕ್ಷ್ಮೀ ವಿಗ್ರಹ. ಲಕ್ಷ್ಮೀ ಅಂದ್ರೆ ಧನ, ಸಂಪತ್ತು, ಶ್ರೀಮಂತಿಕೆ. ನಾವು ಕೆಲಸದಲ್ಲಿ ಯಶಸ್ಸು ಸಾಧಿಸಬೇಕು, ಉದ್ಧಾರವಾಗಬೇಕು, ಶ್ರೀಮಂತರಾಗಬೇಕು ಅಂದ್ರೆ, ಲಕ್ಷ್ಮೀಯ ಆಶೀರ್ವಾದವಿರಬೇಕು. ಹಾಗಾಗಿ ಹಲವರು ತಮ್ಮ ಕೆಲಸದ ಟೇಬಲ್ ಮೇಲೆ ಲಕ್ಷ್ಮೀ ವಿಗ್ರಹವನ್ನು ಇಡುತ್ತಾರೆ.
ಮೂರನೇಯದಾಗಿ ರಾಯರ ವಿಗ್ರಹ. ಹಲವರ ಇಷ್ಟ ದೇವರು ರಾಯರು. ರಾಘವೇಂದ್ರ ರಾಯರನ್ನು ಪೂಜಿಸಿದವರಿಗೆ ಎಂದಿಗೂ ಮೋಸವಿಲ್ಲ. ಅವರನ್ನು ನಂಬಿದರೆ, ಸದಾ ಅವರು ನಮ್ಮ ಕಷ್ಟಕಾಲದಲ್ಲಿ ನಮ್ಮ ಕೈ ಹಿಡಿಯುತ್ತಾರೆಂಬ ನಂಬಿಕೆ ಇದೆ. ಹಾಗಾಗಿ ಹಲವರು ರಾಯರ ವಿಗ್ರಹವನ್ನು ತಮ್ಮ ಕೆಲಸದ ಟೇಬಲ್ ಮೇಲೆ ಇಡುತ್ತಾರೆ.
ಈ ಮೂರು ವಿಗ್ರಹ ನಿಮ್ಮ ಟೇಬಲ್ ಮೇಲೆ ಇದ್ದರೆ, ಖಂಡಿತ ದೇವರ ಆಶೀರ್ವಾದ ನಿಮ್ಮ ಮೇಲೆ ಇರುತ್ತದೆ. ಆದರೆ ಅದನ್ನು ಎಂದಿಗೂ ಮೈಲಿಗೆ ಮಾಡಬಾರದು. ಎಂಜಿಲು ಕೈಯಿಂದ, ಮುಸುರೆ ಕೈಯಿಂದ ಮುಟ್ಟಬಾರದು. ಮುಟ್ಟಾದ ಹೆಣ್ಣು ಮಕ್ಕಳು, ಸೂತಕವಿರುವ ವೇಳೆ, ಅಮೆ ಇರುವ ವೇಳೆ ಆ ವಿಗ್ರಹವನ್ನು ಮುಟ್ಟಬಾರದು. ಹೀಗೆ ಮಾಡಿದ್ದಲ್ಲಿ ಅದರ ಶಕ್ತಿ ಕುಂದಿಹೋಗುತ್ತದೆ ಎನ್ನಲಾಗಿದೆ. ಅಲ್ಲದೇ, ಅದಕ್ಕೆ ಪ್ರತಿದಿನ ಹೂವಿಟ್ಟು, ಪ್ರಾರ್ಥಿಸಿದರೆ ಇನ್ನೂ ಉತ್ತಮ.