Friday, September 20, 2024

Latest Posts

ಹಿಂಗಿನ ಆರೋಗ್ಯಕರ ಲಾಭ ತಿಳಿದರೆ, ಇಂದಿನಿಂದಲೇ ನೀವೂ ಹಿಂಗು ಬಳಸಲು ಶುರು ಮಾಡುವಿರಿ..

- Advertisement -

Health: ಹಲವರು ಅಡುಗೆಯಲ್ಲಿ ಹಿಂಗು ಬಳಸುವುದು ಕಡಿಮೆ ಮಾಡುತ್ತಾರೆ. ಇನ್ನು ಕೆಲವರಿಗೆ ಹಿಂಗಿನ ವಾಸನೆ ತೆಗೆದುಕೊಂಡರೇ ಆಗುವುದಿಲ್ಲ. ಹಾಗಾಗಿ ಅಂಥವರು ಅಡುಗೆಗೆ ಹಿಂಗು ಬಳಸುವುದೇ ಇಲ್ಲ. ಆದರೆ ಹಿಂಗಿನ ಆರೋಗ್ಯಕರ ಗುಣಗಳ ಬಗ್ಗೆ ನೀವು ಕೇಳಿದರೆ, ನೀವು ಕೂಡ ಇಂದಿನಿಂದ ಹಿಂಗು ಬಳಸಲು ಶುರು ಮಾಡುತ್ತೀರಿ. ಹಾಗಾದ್ರೆ ಹಿಂಗಿನಲ್ಲಿರುವ ಆರೋಗ್ಯಕರ ಗುಣಗಳೇನು ಅಂತಾ ತಿಳಿಯೋಣ ಬನ್ನಿ..

ಅಜೀರ್ಣತೆ ಗ್ಯಾಸ್ಟಿಕ್ ಸಮಸ್ಯೆ ಇದ್ದಾಗ, ಉಗುರು ಬೆಚ್ಚಗಿನ ನೀರು ಅಥವಾ ಮಜ್ಜಿಗೆಗೆ ಕೊಂಚ ಹಿಂಗು ಸೇರಿಸಿ, ಕುಡಿದರೆ, ತಕ್ಷಣ ಹೊಟ್ಟೆ ಉಬ್ಬರದ ಸಮಸ್ಯೆ ಗುಣವಾಗುತ್ತದೆ. ಮುಟ್ಟಿನ ಸಮಯದಲ್ಲಿ ಹೊಟ್ಟೆ ನೋವು ಹೆಚ್ಚಾಜಾಗ, ಹೀಗೆ ಮಜ್ಜಿಗೆಗೆ ಹಿಂಗು ಸೇರಿಸಿ ಕುಡಿದರೆ, ಹೊಟ್ಟೆ ನೋವು ಕಂಟ್ರೋಲಿಗೆ ಬರುತ್ತದೆ. ಮಲವಿಸರ್ಜನೆ ಸರಿಯಾಗಿ ಆಗುತ್ತದೆ.

ಇನ್ನು ಇಂಗಿನ ಬಳಕೆ ಪ್ರತಿದಿನ ಮಾಡಿದ್ರೆ, ರೋಗ ನೀರೋಧಕ ಶಕ್ತಿ ಹೆಚ್ಚಾಗುತ್ತದೆ. ಕಫ, ಕೆಮ್ಮು, ಶೀತಗಳಿಂದ ನಮ್ಮನ್ನು ದೂರವಿಡುತ್ತದೆ. ಹಾಗಾಗಿಯೇ ಭಾರತೀಯರ ಅಡುಗೆ ಮನೆ ಬರೀ ಅಡುಗೆ ಮನೆಯಲ್ಲ ಬದಲಾಗಿ, ಚಿಕ್ಕ ಔಷಧಿಯ ಕೋಣೆ ಎಂದು ಕರೆಯಲಾಗುತ್ತದೆ. ಏಕೆಂದರೆ ನಾವು ಪ್ರತಿದಿನ ಬಳಸುವ ಮಸಾಲೆ ಪದಾರ್ಥಗಳಲ್ಲೇ ಔಷಧಿಯ ಗುಣಗಳಿದೆ.

ಶ್ವಾಸಕೋಶದ ಸಮಸ್ಯೆ, ಹೊಟ್ಟೆಯ ಸಮಸ್ಯೆ ಹೋಗಲಾಡಿಸಲು ಹಿಂಗು ಸಹಕಾರಿಯಾಗಿದೆ. ಮಾನಸಿಕ ಒತ್ತಡ, ಹೃದಯದ ಸಮಸ್ಯೆ ಸೇರಿ, ಹಲವು ಆರೋಗ್ಯ ಸಮಸ್ಯೆಯಿಂದ ನಮ್ಮನ್ನು ದೂರವಿರಿಸಿ, ಆರೋಗ್ಯಕರ ಜೀವನ ಶೈಲಿಯನ್ನು ಅನುಭವಿಸಲು ಹಿಂಗಿನ ಸೇವನೆ ಪ್ರಯೋಜನಕಾರಿಯಾಗಿದೆ.

ನಿಮ್ಮ ಮೂಳೆಯ ಆರೋಗ್ಯ ಸರಿಯಾಗಿ ಇರಬೇಕೆಂದಲ್ಲಿ, ಈ ವ್ಯಾಯಾಮ ಮಾಡಿ..

ಕಿರಾಣಿ ಸಾಮಾನು, ಹಣ್ಣು- ಹಂಪಲು ಖರೀದಿಗೆ ಹೋದಾಗ ಯಾವ ತಪ್ಪನ್ನು ಮಾಡಬಾರದು..?

ಪ್ರತಿದಿನ ಒಂದು ಸ್ಪೂನ್ ಚೀಯಾಸೀಡ್ಸ್ ತಿನ್ನುವುದರಿಂದ ಆರೋಗ್ಯಕ್ಕಾಗುವ ಲಾಭವೇನು..?

- Advertisement -

Latest Posts

Don't Miss