ಯಾರಿಗೆ ಸಾಮಾನ್ಯ ಜ್ಞಾನ ಹೆಚ್ಚಿರುತ್ತದೆಯೋ ಅವನು ಜೀವನದಲ್ಲೆಂದೂ ಸೋಲಲು ಸಾಧ್ಯವೇ ಇಲ್ಲವಂತೆ. ಯಾಕಂದ್ರೆ ಅವರು ಬುದ್ಧಿವಂತರಿರ್ತಾರೆ. ಎಲ್ಲಿ ಹೇಗೆ ನಡೆದುಕೊಳ್ಳಬೇಕು ಅನ್ನೋದು ಅವರಿಗೆ ಗೊತ್ತಿರುತ್ತದೆ. ಕಾಮನ್ ಸೆನ್ಸ್ ಅನ್ನೋದು ಮನುಷ್ಯನ ಜೀವನದಲ್ಲಿ ಅಷ್ಟು ಇಂಪಾರ್ಟೆಂಟ್. ಹಾಗಾಗಿ ಕೆಲ ವಿಷಯಗಳನ್ನ ನಾವು ತಿಳಿದುಕೊಂಡಲ್ಲಿ ನಾವು ಜೀವನದಲ್ಲಿ ಸಫಲರಾಗುತ್ತೇವೆ. ಹಾಗಾದ್ರೆ ಮನುಷ್ಯ ಯಾವ 4 ವಿಷಯಗಳನ್ನ ತಿಳಿದುಕೊಳ್ಳಬೇಕು ಅಂತಾ ತಿಳಿಯೋಣ ಬನ್ನಿ..
ಬೋಧಿ ಧರ್ಮನ್. ಬೇರೆ ಬೇರೆ ದೇಶಗಳಿಗೆ ಹೋಗಿ, ಭಾರತದ ಕಲೆಯಾದ ಕರಾಟೆಯನ್ನು ಕಲಿಸಿಕೊಟ್ಟಂಥ ಕಲೆಗಾರ. ಕರಾಟೆ ಪಟು. ಒಮ್ಮೆ ಬೋಧಿ ಧರ್ಮನ್ ಬಳಿ ಬಂದ ಓರ್ವ ಯುವಕ, ಅವರ ಬಳಿ ಈ ರೀತಿಯಾಗಿ ಕೇಳಿದ. ಓರ್ವ ವ್ಯಕ್ತಿ ಜೀವನದಲ್ಲಿ ಯಶಸ್ವಿಯಾಗಬೇಕು ಅಂದ್ರೆ ಅವನಲ್ಲಿ ಯಾವ ಗುಣಗಳಿರಬೇಕು ಹೇಳಿ ಗುರುಗಳೇ ಎಂದು ಕೇಳುತ್ತಾನೆ. ಅವನಿಗೆ ಬೋಧಿಧರ್ಮನ್ 4 ಗುಣಗಳ ಬಗ್ಗೆ ತಿಳಿಸುತ್ತಾನೆ.
ನಿಮಗೆ ಹಣಕಾಸಿನ ಸಮಸ್ಯೆಗಳಿದ್ದರೆ ಮಂಗಳವಾರ ಹನುಮಂತನಿಗೆ ಈ ನಾಲ್ಕು ಪರಿಹಾರಗಳನ್ನು ಪ್ರಯತ್ನಿಸಿ..!
ಮೊದಲನೇಯ ವಿಷಯ ನೀವು ಯಶಸ್ವಿಯಾಗಲು ಯಾವ ಕೆಲಸ ಮಾಡುತ್ತಿದ್ದೀರೋ, ಆ ಕೆಲಸದಲ್ಲಿ ನೀವು ಪೂರ್ತಿಯಾಗಿ ತೊಡಗಿಕೊಳ್ಳಬೇಕು. ಇನ್ನೊಬ್ಬರು ಈ ಕೆಲಸವನ್ನು ಮಾಡುತ್ತಿದ್ದಾರೆ. ಹಾಗಾಗಿ ನಾನೂ ಕೂಡ ಈ ಕೆಲಸವನ್ನು ಮಾಡುತ್ತೇನೆಂದು ಹೇಳಿದರೆ, ನೀವೆಂದೂ ಆ ಕೆಲಸದಲ್ಲಿ ಯಶಸ್ವಿಯಾಗಲು ಸಾಧ್ಯವಿಲ್ಲ. ಹಾಗಾಗಿ ನಿಮ್ಮ ಮನಸ್ಸಿಗೆ ಇಷ್ಟವಾಗುವ, ನೀವು ಆ ಕೆಲಸವನ್ನು ಮಾಡಿದರೆ ಖಂಡಿತ ಯಶಸ್ವಿಯಾಗುತ್ತೀರಿ ಎಂಬ ಆತ್ಮ ವಿಶ್ವಾಸವಿರುವ ಕೆಲಸಗಳನ್ನೇ ಮಾಡಬೇಕು. ಇನ್ನೊಬ್ಬರು ಹೇಳಿದ್ದಾರೆಂದೋ, ಅಥವಾ ಇನ್ನೊಬ್ಬರು ಈ ಕೆಲಸವನ್ನು ಮಾಡುತ್ತಾರೆಂದೋ ನೀವು ಕೂಡ ಆ ಕೆಲಸವನ್ನು ಮಾಡಿದ್ರೆ, ನೀವೇಂದೂ ಸಫಲರಾಗಲು ಸಾಧ್ಯವಿಲ್ಲ.
ಎರಡನೇಯ ವಿಷಯ ಯಾವ ಕೆಲಸವನ್ನು ನೀವು ಮಾಡುತ್ತಿದ್ದೀರೋ, ಆ ಕೆಲಸವನ್ನು ಇಷ್ಟಪಟ್ಟು ಮಾಡಿ. ಕೆಲವರು ಚಿಕ್ಕಂದಿನಲ್ಲೇ ತಮ್ಮ ಮಕ್ಕಳಿಗೆ ಕಷ್ಟಪಟ್ಟು ಓದಿ, ಕಷ್ಟಪಟ್ಟು ಕೆಲಸ ಮಾಡಿ, ಜೀವನದಲ್ಲಿ ಉದ್ಧಾರವಾಗುತ್ತೀರಿ ಎಂದು ಹೇಳುತ್ತಾರೆ. ಆದ್ರೆ ಇದು ತಪ್ಪು ಮಕ್ಕಳು ಖುಷಿಯಿಂದ ಓದಬೇಕು. ಪ್ರೀತಿಯಿಂದ ಮಾಡುವ ಕೆಲಸದಲ್ಲಿ ಯಾವಾಗಲೂ ಯಶಸ್ಸು ಕಾಣುತ್ತೇವೆ. ನಾವು ಮನಸ್ಸಿಲ್ಲದಿದ್ದರೂ ಕಷ್ಟಪಟ್ಟು ಮಾಡುವ ಕೆಲಸ ಕತ್ತೆಯ ದುಡಿಮೆಯ ರೀತಿ ಇರುತ್ತದೆ. ಹಾಗಾಗಿ ನೀವು ಮಾಡುವ ಕೆಲಸವನ್ನು ಪ್ರೀತಿಸಿದರೆ, ಜೀವನದಲ್ಲಿ ಯಶಸ್ಸು ಸಾಧಿಸಬಹುದು.
ವಾಸ್ತು ಶಾಸ್ತ್ರದ ಪ್ರಕಾರ 7 ಕುದುರೆ ವರ್ಣಚಿತ್ರಗಳನ್ನು ಇಡುವ ಪ್ರಯೋಜನಗಳು..!
ಮೂರನೇಯ ವಿಷಯ ನಾವು ಮಾಡುವ ಕೆಲಸದ ಬಗ್ಗೆ ನಮಗೆ ಉತ್ತಮ ಜ್ಞಾನವಿರಬೇಕು. ಉದಾಹರಣೆಗೆ ನೀವು ಹೊಟೇಲ್ ಇಡಬೇಕಂತಿದ್ದೀರಿ, ಅಥವಾ ಮನೆಯಂದಲೇ ಕೇಕ್ ಬ್ಯುಸಿನೆಸ್ ಮಾಡಬೇಕು ಎಂದಿದ್ದೀರಿ. ಹಾಗೆ ಮಾಡುವಾಗ ನಿಮಗೆ ಆ ತಿಂಡಿ ಮಾಡುವ ಬಗ್ಗೆ, ಆ ತಿಂಡಿಗೆ ಏನೇನು ಹಾಕುತ್ತಾರೆ ಅನ್ನೋ ಬಗ್ಗೆ ಜ್ಞಾನವಿರಬೇಕು. ಅದನ್ನು ಬಿಟ್ಟು ನೀವು ಗ್ರಾಹಕರ ಮೇಲೆ ನಿಮ್ಮ ಪ್ರಯೋಗ ಮಾಡಲು ಹೋದರೆ, ಉದ್ಯಮ ಶುರು ಮಾಡುವ ಮುನ್ನವೇ, ತೋಪು ಹೊಡೆಯುತ್ತದೆ. ಹಾಗಾಗಿ ಯಾವುದೇ ಕೆಲಸ ಮಾಡುವ ಮುನ್ನ ಅದರ ಬಗ್ಗೆ ಜ್ಞಾನ ಹೊಂದಿರುವುದು ಉತ್ತಮ.
ನಾಲ್ಕನೇಯ ಮತ್ತು ಮುಖ್ಯವಾದ ವಿಷಯ ಅಂದ್ರೆ, ಎಲ್ಲರೂ ದುಃಖದ ಸಮಯದಲ್ಲಿ ಮತ್ತು ಕಷ್ಟ ಬಂದಾಗ ಅಳುತ್ತಾರೆ. ಕೋಪಗೊಳ್ಳುತ್ತಾರೆ. ಮತ್ತು ಖುಷಿಯ ಸಮಯ ಬಂದಾಗ, ನಗು ನಗುತ್ತಾ ಆರಾಮವಾಗಿರುತ್ತಾರೆ. ಆದ್ರೆ ಕಷ್ಟ ಬಂದಾಗಲೂ, ಸುಖವಿದ್ದಾಗಲೂ ಈ ಎರಡೂ ಸಮಯದಲ್ಲಿ ಸಮಾಧಾನದಿಂದ ಇರುವವನೇ ಉತ್ತಮನಾಗಿರುತ್‌ತಾನೆ. ಮತ್ತು ಅವನು ಜೀವನದಲ್ಲೆಂದೂ ಸೋಲನ್ನು ಒಪ್ಪುವುದಿಲ್ಲ.