Health tips: ಇವತ್ತು ನಾವೊಂದು ಹೆಲ್ತ್ ಮಿಕ್ಸ್ ರೆಸಿಪಿ ಹೇಳಲಿದ್ದೇವೆ. ಇದನ್ನು ಬಾಣಂತಿಯರು ಸೇವಿಸಿದರೆ, ಶಕ್ತಿವಂತರಾಗುತ್ತಾರೆ. ಅಲ್ಲದೇ, ಆರೋಗ್ಯ ಚೆನ್ನಾಗಿರಿಸಲು ಇದನ್ನು ಯಾರು ಬೇಕಾದರೂ ಸೇವಿಸಬಹುದು. ಹಾಗಾದ್ರೆ ಈ ಹೆಲ್ತ್ ಮಿಕ್ಸ್ ತಯಾರಿಸೋದು ಹೇಗೆ ಅಂತಾ ತಿಳಿಯೋಣ ಬನ್ನಿ..
ಒಂದು ಕಪ್ ಮಖಾನಾ, 10 ಒಣಖರ್ಜೂರ, ಅಗಸೆಬೀಜ, ಸೌತೇಬಿಜ, ಕಲ್ಲಂಗಡಿ ಬೀಜ, ಕುಂಬಳಕಾಯಿ ಬೀಜ, ಮಸ್ಕ್‌ಮೆಲನ್ ಸೀಡ್ಸ್, ಗಸಗಸೆ, ಸೂರ್ಯಕಾಂತಿ ಬೀಜ, ಕಲ್ಲುಸಕ್ಕರೆ, ಬಾದಾಮ್ ಇವೆಲ್ಲವೂ ಅರ್ಧ ಕಪ್ ತೆಗೆದುಕೊಳ್ಳಬೇಕು. ಇವೆಲ್ಲವನ್ನೂ ಸಪರೇಟ್ ಆಗಿ ಹುರಿದುಕೊಂಡು, ಈ ಮಿಶ್ರಣ ತಣಿದ ಬಳಿಕ ಪುಡಿ ಮಾಡಿದರೆ ಹೆಲ್ತ್ ಮಿಕ್ಸ್ ರೆಡಿ. 1 ಗ್ಲಾಸ್ ಹಾಲಿಗೆ 1 ಸ್ಪೂನ್ ಹೆಲ್ತ್ ಮಿಕ್ಸ್, ಕೊಂಚ ತುಪ್ಪ ಹಾಕಿ, ಕುದಿಸಿ ಕುಡಿದರೆ, ಆರೋಗ್ಯ ಉತ್ತಮವಾಗಿರುತ್ತದೆ.
ಈ ಅಂಗಡಿಗೆ ಬಂದ್ರೆ ಕೆಜಿ ಲೆಕ್ಕದಲ್ಲಿ ಕಡಿಮೆ ಬೆಲೆಗೆ ಬಟ್ಟೆ ತೆಗೆದುಕೊಳ್ಳಬಹುದು..
ಪುಟ್ಟ ಮಕ್ಕಳಿಗೆ ಬಿಕ್ಕಳಿಕೆ ಬರಲು ಕಾರಣವೇನು..? ಇದೊಂದು ಸಮಸ್ಯೆನಾ..?