ನೀವು ಯಶಸ್ವಿ ವ್ಯಕ್ತಿಯಾಗಬೇಕಾದರೆ, ಕೆಲವು ವಿಚಾರಗಳಿಂದ ದೂರವಿರಬೇಕು. ಅಂಥವುಗಳಿಂದ ದೂರವಿರುವುದು ತುಂಬಾ ಕಷ್ಟವಾಗಿರುತ್ತದೆ. ಆದರೂ ಕೂಡ ಅದನ್ನ ತ್ಯಜಿಸದಿದ್ದಲ್ಲಿ, ನೀವು ಯಶಸ್ವಿಯಾಗಲು ಸಾಧ್ಯವಾಗುವುದಿಲ್ಲ. ಉದಾಹರಣೆಗೆ ಬೆಳಿಗ್ಗೆ ಬೇಗ ಎದ್ದು ನಿಮ್ಮ ಯಶಸ್ಸಿಗೆ ಬೇಕಾದ ಕೆಲಸ ಮಾಡುವುದಿದ್ದಲ್ಲಿ, ನೀವು ನಿದ್ದೆ ಅಥವಾ ಯಶಸ್ಸು ಎರಡರಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ನೀವು ನಿದ್ದೆಯೇ ಮುಖ್ಯವೆಂದಲ್ಲಿ, ಗುರಿ ಸಾಧಿಸಲು ಸಾಧ್ಯವಿಲ್ಲ. ಗುರಿ ಮುಖ್ಯ ಎಂದಲ್ಲಿ ನಿದ್ದೆ ತ್ಯಾಗ ಮಾಡಬೇಕಾಗುತ್ತದೆ. ಮತ್ತು ಇದೇ ಸರಿಯಾದ ನಿರ್ಧಾರವಾಗಿರುತ್ತದೆ. ಹಾಗಾಗಿ ನಾವಿಂದು ಯಾವ 3 ವಿಚಾರಗಳಿಂದ ನೀವು ದೂರವಿದ್ದರೆ, ನೀವು ಯಶಸ್ವಿಯಾಗಲು ಸಾಧ್ಯವೆಂದು ನಾವಿಂದು ನಿಮಗೆ ಹೇಳಲಿದ್ದೇವೆ.
ವಿದುರ ನೀತಿಯ ಪ್ರಕಾರ, ನೀವು ಯಶಸ್ಸು ಸಾಧಿಸಲು ಅತಿಯಾಸೆ, ಸೋಮಾರಿತನ, ಮೂಢನಂಬಿಕೆಯಿಂದ ದೂರವಿರಬೇಕಂತೆ.
ಅತಿಯಾಸೆ: ಮನುಷ್ಯನ ಜೀವನ ಅವನತಿಗೆ ಹೋಗೋದೇ ದುರಾಸೆಯಿಂದ. ಇದ್ದುದರಲ್ಲೇ ಜೀವನ ಮಾಡಿಕೊಂಡು, ಯಶಸ್ಸಿಗೆ ಬೇಕಾದ ತಯಾರಿ ಮಾಡಿಕೊಳ್ಳುವವನು ಜೀವನದಲ್ಲಿ ಗೆಲ್ಲುತ್ತಾರೆ. ಏನಿದ್ದರೂ, ಎಷ್ಟಿದ್ದರೂ ಸಾಕಾಗದೇ, ಮತ್ತೂ ಮತ್ತೂ ಬೇಕು ಎನ್ನುವವನು, ಬರೀ ಬೇಡುವುದರಲ್ಲೇ ಜೀವನ ಕಳೆಯುತ್ತಾನೆ. ಅತೀ ಆಸೆ ಹೆಚ್ಚಾದರೆ, ಅಡ್ಡದಾರಿಯನ್ನೂ ಹಿಡಿಯುತ್ತಾನೆ. ಹಾಗಾಗಿ ಇದ್ದುದರಲ್ಲೇ ಜೀವನ ಮಾಡಿ, ನಿಮ್ಮ ಗುರಿ ಮುಟ್ಟಲು ಪ್ರಯತ್ನಿಸಿ. ಒಮ್ಮೆ ಗುರಿ ಮುಟ್ಟಿದ ಮೇಲೆ, ನಿಮಗೆ ಬೇಕಾದ್ದನ್ನ ನೀವೇ ಖರೀದಿಸಬಹುದು. ಪಡೆಯಬಹುದು.
ಸೋಮಾರಿತನ: ಮನುಷ್ಯನ ದೊಡ್ಡ ಶತ್ರು ಅಂದ್ರೆ ಅದು ಸೋಮಾರಿತನ. ನಾವು ಈ ಮೊದಲೇ ಕೊಟ್ಟ ಉದಾಹರಣೆಯಂತೆ, ನಿಮಗೆ ನೀವಂದುಕೊಂಡಿದ್ದನ್ನ ಸಾಧಿಸುವುದು ಮುಖ್ಯವಾಗಿದ್ದರೆ, ನಿದ್ದೆ ಬಿಡಬೇಕು. ಸೋಮಾರಿತನ ಬಿಡಬೇಕು. ನಿಮಗೆ ನಿದ್ದೆಯೇ ಮುಖ್ಯವಾಗಿದ್ದರೆ, ಗುರಿಯನ್ನ ಮರೆಯಬೇಕು. ಹಾಗಾಗಿ ನಿದ್ದೆ, ಸೋಮಾರಿತನವನ್ನ ಮರೆಯಿರಿ. ಮತ್ತು ನಿಮ್ಮ ಗುರಿಯತ್ತ ಗಮನವಿಡಿ. ಗುರಿ ಅನ್ನೋದು ಪುಟ್ಟ ಮಗುವಿದ್ದಂತೆ, ಪುಟ್ಟ ಮಕ್ಕಳನ್ನ ಬೆಳೆಸಿ ದೊಡ್ಡದು ಮಾಡುವಾಗ, ಅಪ್ಪ ಅಮ್ಮ ಹೇಗೆ ಅವರನ್ನ ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಳ್ಳುತ್ತಾರೋ, ಅವರಿಗಾಗಿ ನಿದ್ದೆಯನ್ನ ಮರೆಯುತ್ತಾರೋ, ಅದೇ ರೀತಿ ಗುರಿ ಮುಟ್ಟುವುದಕ್ಕೆ, ನೀವು ಸೋಮಾರಿತನವನ್ನ ಬಿಟ್ಟುಬಿಡಬೇಕು.
ಮೂಢನಂಬಿಕೆ: ಕೊನೆಯದಾಗಿ ಮೂಢ ನಂಬಿಕೆ. ಕೆಲವರು ಮಾತನಾಡುವುದನ್ನ ನೀವು ನೋಡಿರುತ್ತೀರಿ. ನಾನು ನನ್ನ ಮಗಳಿಗಾಗಿ ಹರಕೆ ಹೊತ್ತಿದ್ದೇನೆ. ಆ ದೇವಿ ಭಾರಿ ಪವರ್ ಫುಲ್ ಅಂತೆ, ಬೇಡಿದ್ದನ್ನ ಕರುಣಿಸುತ್ತಾಳಂತೆ ಎಂದು ಹೇಳುತ್ತಾರೆ. ಆ ದೇವಿಯಲ್ಲಿ ಖಂಡಿತ ಅಂಥ ಶಕ್ತಿ ಇರಬಹುದು. ಆದರೆ ನೀವು ಪರಿಶ್ರಮ ಪಡದಿದ್ದಲ್ಲಿ, ಯಾವ ದೇವರು ಬಂದರೂ, ನಿಮ್ಮನ್ನು ಕಾಪಾಡಲು ಸಾಧ್ಯವಿಲ್ಲ. ಹಾಗೆ ಹರಕೆ, ಪೂಜೆ, ಪುನಸ್ಕಾರವೇ ನಮ್ಮ ಕೈಹಿಡಿಯುವಂತಿದ್ದರೆ, ಎಲ್ಲರೂ ಹರಕೆ ಹೊತ್ತೇ ಜೀವನ ಮಾಡುತ್ತಿದ್ದರೇ ವಿನಃ ಯಾರೂ ಕಷ್ಟಪಡುತ್ತಿರಲಿಲ್ಲ. ಹಾಗಾಗಿ ದೇವರ ಮೇಲೆ ನಿಮಗೆ ನಂಬಿಕೆ ಇರಲಿ, ಆದರೆ ಅತಿಯಾದ ನಂಬಿಕೆ ಬೇಡ.
40 ಮಹಿಳೆಯರಿಗೆ ಒಬ್ಬನೇ ಗಂಡ..? : ಪರಿಶೀಲಿಸಿದಾಗ ತಿಳಿಯಿತು ಸತ್ಯಸಂಗತಿ..
ಯೋಗಿ ಆದಿತ್ಯನಾಥ್‌ಗೆ ಜೀವ ಬೆದರಿಕೆ ಪ್ರಕರಣಕ್ಕೆ ಟ್ವಿಸ್ಟ್: ಇದು ಪ್ರೀತಿಸಿದವಳಿಗಾಗಿ ಮಾಡಿದ ಕೃತ್ಯ..