Health Tips: ಇಂದಿನ ಕಾಲದಲ್ಲಿ ನಾವು ತಿನ್ನುವ ಆಹಾರಗಳೆಲ್ಲವೂ ಕಲಬರಕೆ ಎನ್ನುವುದು ವೈದ್ಯರ ಮಾತು. ವೈದ್ಯೆ ಮತ್ತು ಆಹಾರ ತಜ್ಞೆಯಾದ ಹೆಚ್.ಎಸ್. ಪ್ರೇಮಾ ಅವರು, ಕಲಬೆರಕೆ ಆಹಾರ ತಿಂದರೆ, ಯಾವ ಯಾವ ಆರೋಗ್ಯ ಸಮಸ್ಯೆ ಉಂಟಾಗುತ್ತದೆ ಎಂದು ಹೇಳಿದ್ದಾರೆ. ಆ ಬಗ್ಗೆ ತಿಳಿಯೋಣ ಬನ್ನಿ.
ಡಿಮ್ಯಾಂಡ್ ಜಾಸ್ತಿ ಆಗುತ್ತಿದೆ ಎಂಬ ಕಾರಣಕ್ಕೆ, ಇತ್ತೀಚಿನ ದಿನಗಳಲ್ಲಿ ತರಕಾರಿ, ಹಣ್ಣುಗಳಿಗೆ ಇಂಜೆಕ್ಟ್ ಮಾಡಿ, ಮಾರಾಟ ಮಾಡಲಾಗುತ್ತದೆ. ಏಕೆಂದರೆ ಹೀಗೆ ಮಾಡಿದರೆ, ಹಣ್ಣು, ತರಕಾರಿಗಳ ಬಣ್ಣ ಚೆಂದಗಾಣುತ್ತದೆ. ಅಲ್ಲದೇ, ಹಣ್ಣು, ತರಕಾರಿ ಬೇಗ ಬೇಗ ಬೆಳೆಯಲಿ ಎಂದು ಔಷಧಿಗಳನ್ನು ಬಳಸಲಾಗುತ್ತಿದೆ. ಹಾಗಾಗಿ ಇವೆಲ್ಲವೂ ಕಲಬೆರಕೆ ಆಹಾರವಾಗಿದೆ.
ಈ ಬಗ್ಗೆ ವಿವರಿಸಿರುವ ವೈದ್ಯೆ ಪ್ರೇಮಾ ಅವರು, ತಾವು ಹಿಮಾಚಲ ಪ್ರದೇಶದಲ್ಲಿದ್ದಾಗ, ನಡೆದ ಘಟನೆಯ ಬಗ್ಗೆ ವಿವರಿಸಿದ್ದಾರೆ. ಅವರು ಅಲ್ಲಿನ ಸೇಬಿನ ತೋಟಗಳಿಗೆ ಭೇಟಿ ನೀಡುತ್ತಿದ್ದಾಗ, ಅಲ್ಲಿ ಪ್ರತೀ ಸೇಬಿನ ಗಿಡಕ್ಕೂ ರಟ್ಟೆ ಗಾತ್ರದ ಇಂಜೆಕ್ಷನ್‌ಗಳನ್ನು ಚುಚ್ಚಿದ್ದರು. ಆಗ ಈ ಇಂಜೆಕ್ಷನ್ ಯಾಕೆ ಕೊಡುತ್ತೀರಿ ಎಂದು ಕೇಳಿದಾಗ, ಒಂದು ಇಂಜೆಕ್ಷನ್ ಹುಳ ಬರಬಾರದೆಂದು. ಇನ್ನೊಂದು ಇಂಜೆಕ್ಷನ್ ಬೇಗ ಹಣ್ಣಾಗಬೇಕು ಎಂದು. ಮತ್ತೊಂದು ಇಂಜೆಕ್ಷನ್ ಸೇಬು ಹಣ್ಣಿನ ಬಣ್ಣ ಚೆನ್ನಾಗಿ ಬರಬೇಕೆಂದು ಎಂದು ಆ ತೋಟದವರು ವಿವರಿಸಿದರು. ಇದೇ ಕಲಬೆರಕೆ ಆಹಾರ.
ಇಂಥ ಕಲಬೆರಕೆ ಆಹಾರಗಳೇ ನಮಗೆ ಹಲವು ಅನಾರೋಗ್ಯ ಸಮಸ್ಯೆಗಳನ್ನು ತಂದೊಡ್ಡುತ್ತದೆ. ಇಂಥ ಹಣ್ಣು, ತರಕಾರಿಗಳ ಸೇವನೆಯಿಂದಲೇ, ಕ್ಯಾನ್ಸರ್ ಬರುತ್ತಿದೆ. ಮೊದಲೆಲ್ಲ ಇಷ್ಟೆಲ್ಲ ಕ್ಯಾನ್ಸರ್ ರೋಗಗಳು ಬರುತ್ತಿರಲಿಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ಇಂಥ ಕಲಬೆರಕೆ ಆಹಾರ ಸೇವಿಸಿ, ಕ್ಯಾನ್ಸರ್ ಬರುವ ರೋಗಿಗಳ ಸಂಖ್ಯೆ ಹೆಚ್ಚಾಗಿದೆ ಎನ್ನುತ್ತಾರೆ ವೈದ್ಯರು. ಈ ಬಗ್ಗೆ ಮತ್ತಷ್ಟು ಮಾಹಿತಿ ತಿಳಿಯಲು ಈ ವೀಡಿಯೋ ನೋಡಿ..