Saturday, April 19, 2025

Latest Posts

ಲಕ್ಷ್ಮೀಯ ಕೃಪೆ ಬೇಕಾಗಿದ್ದಲ್ಲಿ, ಈ ಕೆಲಸ ಮಾಡಬೇಡಿ..

- Advertisement -

Spiritual Stories: ಲಕ್ಷ್ಮೀಯ ಕೃಪೆ ಯಾರಿಗೆ ತಾನೇ ಬೇಡ ಹೇಳಿ..? ಎಲ್ಲರೂ ತಾವು ಶ್ರೀಮಂತರಾಗಬೇಕು ಎಂದು ಬಯಸುತ್ತಾರೆ. ಆದರೆ ಅದಕ್ಕೆ ಬೇಕಾಗಿರುವುದೇ ಲಕ್ಷ್ಮೀಯ ಕೃಪೆ. ಆದರೆ ನಾವು ಮಾಡುವ ಕೆಲ ತಪ್ಪುಗಳಿಂದಲೇ, ಲಕ್ಷ್ಮೀ ದೇವಿ ನಮ್ಮ ಮೇಲೆ ಕೃಪೆ ತೋರಿಸುವುದಿಲ್ಲ. ಹಾಗಾಗಿ ನಾವು ಆರ್ಥಿಕ ಪರಿಸ್ಥಿತಿ ಸುಧಾರಿಸಬೇಕು ಅಂದ್ರೆ, ಯಾವ ತಪ್ಪು ಮಾಡಬಾರದು ಅಂತಾ ತಿಳಿಯೋಣ ಬನ್ನಿ..

ಮೊದಲನೇಯದ್ದು ಮನೆಯನ್ನು ಕ್ಲೀನ್ ಆಗಿ ಇರಿಸಿಕೊಳ್ಳಬೇಕು. ಎಲ್ಲರಿಗೂ ಗೊತ್ತಿರುವ ಹಾಗೆ ಲಕ್ಷ್ಮೀ ಒಲಿಯಬೇಕು ಅಂದ್ರೆ ಮನೆ ಸ್ವಚ್ಛವಾಗಿರಬೇಕು. ಇಲ್ಲವಾದಲ್ಲಿ ಆ ಮನೆ ದರಿದ್ರ ಲಕ್ಷ್ಮೀಯ ಸ್ಥಾನವಾಗುತ್ತದೆ. ಹಾಗಾಗಿ ಮನೆಯನ್ನು ಸದಾ ಸ್ವಚ್ಛವಾಗಿಡಿ. ಇದರಿಂದ ನೀವು ಲಕ್ಷ್ಮೀ ದೇವಿಯ ಕೃಪೆಗೆ ಪಾತ್ರರಾಗುತ್ತೀರಿ ಅಲ್ಲದೇ, ಆರೋಗ್ಯವಂತರಾಗಿರುತ್ತೀರಿ.

ಎರಡನೇಯದಾಗಿ ಪ್ರತಿನಿತ್ಯ ಮನೆಯ ಹೆಣ್ಣು ಮಕ್ಕಳು ಮುಖ ಊದಿಸಿಕೊಂಡು ಇರಬಾರದು. ಮನೆಯಲ್ಲಿ ಜಗಳವಾಗದಂತೆ ನೋಡಿಕೊಳ್ಳಬೇಕು. ಕೆಲವು ಹೆಣ್ಣು ಮಕ್ಕಳಿಗೆ, ಪ್ರತಿದಿನ ಏನಾದರೂ ಕೊಂಕು ಮಾತಾಡಿ ಜಗಳ ಮಾಡುವ ಅಭ್ಯಾಸವಿರುತ್ತದೆ. ಅಂಥ ಮನೆಯ ಯಜಮಾನ ಸದಾ ಆರ್ಥಿಕತೆಯಿಂದ ಬಳಲುತ್ತಿರುತ್ತಾನೆ. ಅವನಿಗೆ ಕೆಲಸ ಮಾಡುವ ಯೋಗ್ಯತೆ, ದುಡ್ಡು ಮಾಡುವ ಯೋಗ್ಯತೆ ಇದ್ದರೂ, ಆ ಮನೆಯ ಹೆಣ್ಣು ಮಕ್ಕಳ ಬುದ್ಧಿಯಿಂದ ಆತ ಆರ್ಥಿಕ ಅಭಿವೃದ್ಧಿ ಹೊಂದುವುದಿಲ್ಲ. ಹಾಗಾಗಿ ಮನೆಯಲ್ಲಿ ಹೆಣ್ಣು ಮಕ್ಕಳು ಸದಾ ನಗುತ್ತಲೇ ಇರಬೇಕು.

ಮೂರನೇಯದಾಗಿ ಸ್ವಚ್ಛವಾದ ಬಟ್ಟೆಯನ್ನು ಧರಿಸಬೇಕು. ಯಾರು ಕೊಳಕಾದ ಬಟ್ಟೆ ಧರಿಸುತ್ತಾರೋ, ಅವರು ಸಾಲದಲ್ಲಿರುತ್ತಾನೆ. ಯಾರು ತೊಳೆದು, ಸ್ವಚ್ಛಗೊಳಿಸಿದ ಬಟ್ಟೆ ಧರಿಸುತ್ತಾರೋ, ಅಂಥವರು ಆರ್ಥಿಕವಾಗಿ ಉತ್ತಮರಾಗಿರುತ್ತಾರೆ. ಹಾಗಾಗಿ ತೊಳೆದ, ಸ್ವಚ್ಛವಾದ ಮತ್ತು ಹರಿಯದ ಬಟ್ಟೆಯನ್ನೇ ಧರಿಸಬೇಕು.

ನಾಲ್ಕನೇಯದಾಗಿ ಶುಕ್ರವಾರ ಹೆಣ್ಣು ಮಕ್ಕಳು ತಲೆಗೆ ಎಣ್ಣೆ ಹಾಕಿ, ತಲೆಸ್ನಾನ ಮಾಡಬೇಕು. ಶುಕ್ರವಾರ ಲಕ್ಷ್ಮೀಯ ದಿನ, ಈ ದಿನ ಮನೆಯಲ್ಲಿ ಲಕ್ಷ್ಮೀ ದೇವಿಗೆ ಪೂಜೆ ಸಲ್ಲಿಸಬೇಕು. ಮನೆಯಲ್ಲಿನ ಹೆಣ್ಣು ಮಕ್ಕಳು ತಲೆಗೆ ಎಣ್ಣೆ ಹಾಕಿ, ತಲೆಸ್ನಾನ ಮಾಡಿ, ಲಕ್ಷ್ಮೀದೇವಿಯ ಆರಾಧನೆ ಮಾಡಬೇಕು. ಅಲ್ಲದೇ, ಪ್ರತಿದಿನ ಹೊಸ್ತಿಲಿನ ಪೂಜೆ ಮಾಡಿ, ಆ ನೀರನ್ನು ತುಳಸಿ ಗಿಡಕ್ಕೆ ಹಾಕಿ, ತುಳಸಿಯನ್ನು ನಮಿಸಬೇಕು.

ಇಷ್ಟೇ ಅಲ್ಲದೇ, ಮುಸ್ಸಂಜೆ ಹೊತ್ತಿನಲ್ಲಿ ದುಡ್ಡು, ಉಪ್ಪು, ಮೊಸರು, ಹಾಲು ದಾನ ಮಾಡಬಾರದು. ಮುಸ್ಸಂಜೆ ಹೊತ್ತಿನಲ್ಲಿ ನಿದ್ದೆ ಮಾಡಬಾರದು. ಉಗುರು, ಕೂದಲು ಕತ್ತರಿಸಬಾರದು. ಕೂದಲಿಗೆ ಎಣ್ಣೆ ಹಾಕಿ, ಬಾಚಿಕೊಳ್ಳಬಾರದು. ಜಗಳವಾಡಬಾರದು. ಹೆಣ್ಣು ಮಕ್ಕಳು ಕಣ್ಣೀರು ಹಾಕಬಾರದು. ಆದರೆ ನೀವು ಹೀಗೆಲ್ಲ ಮಾಡಿದ್ದಲ್ಲಿ ಲಕ್ಷ್ಮೀಯ ಅವಕೃಪೆಗೆ ಪಾತ್ರರಾಗುತ್ತೀರಿ.

ಮನೆ ಬಳಿ ತೆಂಗಿನ ಮರವನ್ನು ಎಲ್ಲಿ ಬೆಳೆಸಬೇಕು..?

ದೇವಸ್ಥಾನಗಳಲ್ಲಿ ಕಲ್ಯಾಣಿ ಇರಲು ಕಾರಣವೇನು..?

ನೆಮ್ಮದಿಯಿಂದ ಇರಬೇಕು ಎಂದರೆ, ಇಂಥ ಸ್ಥಳಗಳಲ್ಲಿರಬೇಡಿ..

- Advertisement -

Latest Posts

Don't Miss